Headlines

ಗರ್ತಿಕೆರೆಯಲ್ಲಿ ವ್ಯಕ್ತಿಯೊಬ್ಬನಿಗೆ ಕೆಎಪ್ ಡಿ (ಮಂಗನ ಖಾಯಿಲೆ) ಪತ್ತೆ ಶಂಕೆ!!|KFD

ಶಿವಮೊಗ್ಗ ಜಿಲ್ಲೆಯ ಹೊಸನಗರ  ತಾಲೂಕಿನ ಗರ್ತಿಕೆರೆಯ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಸೋಂಕು ಕಾಣಿಸಿಕೊಂಡ ಶಂಕೆ ವ್ಯಕ್ತವಾಗಿದೆ. ಇವರಿಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ನೀಡಲಾಗುತ್ತಿದೆ. ಇವರಿಗೆ 45 ವರ್ಷ ಎಂದು ಹೇಳಲಾಗಿದೆ.




ಜ.26 ರಂದು ವಿಪರೀತ ಜ್ವರದ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಇವರಿಗೆ ಕಳೆದ ನಾಲ್ಕೈದು ದಿನಗಳಿಂದ ಜ್ವರ ಕಡಿಮೆ ಆಗಿರಲಿಲ್ಲ. ನಿನ್ನೆ ಆರ್ ಟಿ ಪಿ ಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಆರ್ ಟಿ ಪಿ ಸಿಆರ್ ಪರೀಕ್ಷೆಯಲ್ಲಿ ಕೆಎಫ್ ಡಿ ನೆಗೆಟಿವ್ ಬಂದಿದೆ. ಆರ್ ಟಿ ಪಿ ಸಿ ಆರ್ ಪಾಸಿಟಿವ್ ಬಂದರೆ ಮಾತ್ರ ಅದನ್ನ ಕೆಎಫ್ ಡಿ ಪ್ರಕರಣವೆಂದು ಪರಿಗಣಿಸಲಾಗುತ್ತದೆ.  ಆದರೆ ಇತರೆ ರಕ್ತ ಪರೀಕ್ಷೆಯಲ್ಲಿ ಆತನಿಗೆ ಕೆಎಫ್ ಡಿ ಇದೆ ಎಂದು ವೈದ್ಯರು ಬರೆದಿರುವ ಕಾರಣ ಇದನ್ನ ಶಂಕಿತ ಪ್ರಕರಣವೆಂದು ಪರಿಗಣಿಸಲಾಗಿದೆ.




ಎರಡು ವರ್ಷಗಳಿಂದ ಮಲೆನಾಡಿನಲ್ಲಿ ಕೆ ಎಫ್ ಡಿ ಪ್ರಕರಣ ಅತೀ ಹೆಚ್ಚು ದಾಖಲಾಗಿತ್ತು. ಆದರೆ ಈ ವರ್ಷ ಇದುವರೆಗೂ ಕೆಎಫ್ ಡಿ ಪತ್ತೆಯಾಗಿರಲಿಲ್ಲ. 2023 ನೇ ಸಾಲಿನಲ್ಲಿ ಇದೇ ಮೊದಲ
ಕೆ.ಫ್.ಡಿ ಪ್ರಕರಣವಾಗಿದೆ.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.