Headlines

ರಿಪ್ಪನ್‌ಪೇಟೆ : ಕಾರ್ಯಕರ್ತರನ್ನು ಭೇಟಿ ಮಾಡಿದ ಸಂಸದ ಬಿ ವೈ ರಾಘವೇಂದ್ರ – ಹೈಮಾಸ್ಕ್ ವಿದ್ಯುತ್ ದೀಪ ಅಳವಡಿಕೆಗೆ ವೀರೇಶ್ ಆಲುವಳ್ಳಿ ಮನವಿ|BYR

ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕ ವೃತ್ತದಲ್ಲಿ ಇರುವ ಹೈಮಾಸ್ಕ್ ವಿದ್ಯುತ್ ದೀಪವನ್ನು ಉನ್ನತೀಕರಣಗೊಳಿಸುವಂತೆ ಸಂಸದ ಬಿ ವೈ ರಾಘವೇಂದ್ರ ರವರಿಗೆ ಹೊಸನಗರ ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ ಮನವಿ ಮಾಡಿದರು.




ಕಾರ್ಯನಿಮಿತ್ತ ಬೈಂದೂರಿಗೆ ತೆರಳುತಿದ್ದ ಸಂಸದರು ವಿನಾಯಕ ವೃತ್ತದಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಭೇಟಿ ಮಾಡಿದರು.


ಈ ಸಂಧರ್ಭದಲ್ಲಿ ಸಂಸದರನ್ನು ಅಭಿನಂದಿಸಿದ ವೀರೇಶ್ ಆಲುವಳ್ಳಿ ಪಟ್ಟಣದ ವಿನಾಯಕ ವೃತ್ತದಲ್ಲಿ ಹೈಮಾಸ್ಕ್ ವಿದ್ಯುತ್ ದೀಪದ ಉನ್ನತೀಕರಣ ಹಾಗೂ ನಾಲ್ಕು ರಸ್ತೆಗಳಲ್ಲಿನ ಪ್ರಮುಖ ವೃತ್ತಗಳಾದ ಆಸ್ಪತ್ರೆ ವೃತ್ತ ,ಚೌಡೇಶ್ವರಿ ವೃತ್ತ ,ತಿಲಕ್ ನಗರ ವೃತ್ತ ಮತ್ತು ಮದೀನಾ ವೃತ್ತಗಳಲ್ಲಿ ಹೈಮಾಸ್ಕ್ ವಿದ್ಯುತ್ ದೀಪ ಅಳವಡಿಸುವಂತೆ ಮನವಿ ಮಾಡಿದರು.




ಮನವಿಯನ್ನು ಆಲಿಸಿದ ಸಂಸದರು ಅತೀ ಶೀಘ್ರದಲ್ಲೇ ವಿದ್ಯುತ್ ಹೈಮಾಸ್ಕ್ ಬೀದಿ ದೀಪಗಳನ್ನು ಅಳವಡಿಸುವ ನಿಟ್ಟಿನಲ್ಲಿ ಪ್ರಯತ್ನಿಸುವ ಭರವಸೆ ನೀಡಿದರು.

ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮಂಜುಳಾ ಕೆ ರಾವ್ , ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎಂ ಬಿ‌ ಮಂಜುನಾಥ್ , ಮುಖಂಡರಾದ ಆರ್ ಟಿ ಗೋಪಾಲ್, ಪಿ ರಮೇಶ್ ,ಸುರೇಶ್ ಸಿಂಗ್, ಸುಂದರೇಶ್ ,ಕಗ್ಗಲಿ ಲಿಂಗಪ್ಪ ,ಸುಧೀಂದ್ರ ಪಿ , ಸಚಿನ್ ಗೌಡ ,ರಾಜೇಂದ್ರ ಹಾಗೂ ಇನ್ನಿತರರಿದ್ದರು.



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.