ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಬಾಳೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶಿವಮ್ಮ ಪಧ್ಮನಾಭ ರವರು ಆಯ್ಕೆಯಾಗಿದ್ದಾರೆ.
ಕಳೆದ ಡಿ.14 ರಂದು ಬಿಜೆಪಿ ಬೆಂಬಲಿತರಾಗಿದ್ದ ಬಾಳೂರು ಗ್ರಾಪಂ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದರು.ಈ ಹಿನ್ನಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಶಿವಮ್ಮ ಪದ್ಮನಾಭ ಜಯಭೇರಿ ಬಾರಿಸುವ ಮೂಲಕ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.
9 ಜನ ಸದಸ್ಯರಲ್ಲಿ ಕಾಂಗ್ರೆಸ್ ಬೆಂಬಲಿತ ಶಿವಮ್ಮ ಪದ್ಮನಾಭ ರವರು 5 ಮತ ಪಡೆದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ 4 ಮತ ಪಡೆದಿದ್ದಾರೆ.
ಚುನಾವಣಾಧಿಕಾರಿಯಾಗಿ ಹೊಸನಗರ ತಾಲೂಕ್ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಧಿಕಾರಿ ರಾಮಚಂದ್ರಪ್ಪ ಪಾಲ್ಗೊಂಡಿದ್ದರು.
ಬಾಳೂರು ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಶಿವಮ್ಮ ಪದ್ಮನಾಭ ರವರನ್ನು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಅಭಿನಂದಿಸಿದರು.
ನಂತರ ಮಾತನಾಡಿದ ಬೇಳೂರು ಶಾಸಕ ಹರತಾಳು ಹಾಲಪ್ಪ ರವರ ದುರಾಡಳಿತದಿಂದ ಬೇಸತ್ತು ಜನಪ್ರತಿನಿಧಿಗಳು ಹಾಗೂ ಜನಸಾಮಾನ್ಯರು ಬಿಜೆಪಿ ಪಕ್ಷವನ್ನು ತಿರಸ್ಕರಿಸುತಿದ್ದಾರೆ. ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರು ಗಣಪತಿ ಕೆರೆ ಬಿಟ್ಟರೆ ಬೇರೆ ಏನನ್ನೂ ಅಭಿವೃದ್ಧಿ ಮಾಡಿಲ್ಲ ಎಂದರು.
ಬಡವರಿಗೆ ನೀಡುವ ಮನೆಗಳಲ್ಲು ರಾಜಕೀಯ ನಡೆಸಿ ಕೇವಲ ಅವರ ಬೆಂಬಲಿಗರಿಗೆ ಮಾತ್ರ ಪ್ರಾತಿನಿಧ್ಯ ನೀಡುವ ಮೂಲಕ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಜನ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಕೆಂಚನಾಲ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್, ಅರಸಾಳು ಗ್ರಾಪಂ ಮಾಜಿ ಅಧ್ಯಕ್ಷ ಉಮಾಕರ್ , ಮುಖಂಡರಾದ ಎಂ ಎಂ ಪರಮೇಶ್ ,ಹಾಲುಗುಡ್ಡೆ ದೇವರಾಜ್ ಗೌಡ ,ಸಂತೋಷ್ ಸಿ ವೈ ,ರಾಜು ಗೌಡ,ಷಣ್ಮುಖ ಕೆ ಹೆಚ್,ಗಣಪತಿ ,ಫ್ಯಾನ್ಸಿ ರಮೇಶ್ ,ಶಿವು ವಡಾಹೊಸಳ್ಳಿ ,ಉಲ್ಲಾಸ್ ,ಚಂದ್ರು ಮಳವಳ್ಳಿ,ಶ್ರೀಧರ್ ,ವಿಜಯ್ ಹಾಗೂ ಇನ್ನಿತರರಿದ್ದರು.