
ಜಿಲ್ಲಾ ಸುದ್ದಿ:

ಕೆಟ್ಟು ನಿಂತ ವಾಹನ – ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್!!
ಕೆಟ್ಟು ನಿಂತ ವಾಹನ – ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್!! ತೀರ್ಥಹಳ್ಳಿ : ರಾಜ್ಯ ಹೆದ್ದಾರಿ 169 ಎ ಶಿವಮೊಗ್ಗ – ತೀರ್ಥಹಳ್ಳಿ – ಆಗುಂಬೆ – ಮಂಗಳೂರು ಸಂಪರ್ಕಿಸುವ ಆಗುಂಬೆ ಘಾಟಿಯಲ್ಲಿ ವಾಹನವೊಂದರ ಆಕ್ಸೆಲ್ ಕಡಿತವಾದ್ದರಿಂದ ಘಾಟಿಯ ರಸ್ತೆಯ ಮಧ್ಯದಲ್ಲೇ ಕೆಟ್ಟು ನಿಂತ ಪರಿಣಾಮ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಘಾಟಿಯ ಎಂಟನೇ ತಿರುವಿನಲ್ಲಿ ವಾಹನ ಕೆಟ್ಟು ನಿಂತ ಪರಿಣಾಮ ಆಗುಂಬೆ ಘಾಟಿಯ ಎರಡು ಬದಿಯಲ್ಲಿ ಕಿಲೋಮೀಟರ್ ಗಟ್ಟಲೆ ವಾಹನಗಳು ನಿಂತಿದ್ದು ನಿನ್ನೆಯಿಂದ ಸಿಕ್ಕಾಪಟ್ಟೆ ಮಳೆ…

ಹೆದ್ದಾರಿಗೆ ಉರುಳಿ ಬಿದ್ದ ಬೃಹತ್ ಆಲದ ಮರ – ವಾಹನ ಸಂಚಾರ ವ್ಯತ್ಯಯ
ಹೆದ್ದಾರಿಗೆ ಉರುಳಿ ಬಿದ್ದ ಬೃಹತ್ ಆಲದ ಮರ – ವಾಹನ ಸಂಚಾರ ವ್ಯತ್ಯಯ ಮರ ಉರುಳುವಾಗ ಅದೃಷ್ಟವಶಾತ್ ಆ ಭಾಗದಲ್ಲಿ ಯಾವುದೇ ವಾಹನ ಸಂಚರಿಸುತ್ತಿರಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದೆ. ಶಿವಮೊಗ್ಗ : ಜೋರು ಗಾಳಿಗೆ ಸಹಿತ ಮಳೆಯಿಂದಾಗಿ ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಬೃಹತ್ ಮರ ಧರೆಗುರುಳಿದೆ. ಶಿವಮೊಗ್ಗ ತಾಲೂಕು ಗಾಜನೂರು ಚೆಕ್ ಪೋಸ್ಟ್ ಸಮೀಪ ಮರ ಬುಡಮೇಲಾಗಿದೆ. ಚೆಕ್ ಪೋಸ್ಟ್‌ನ ಬಳಿಯಿದ್ದ ಬೃಹತ್ ಆಲದ ಮರ ಮಧ್ಯಾಹ್ನ ಬೀಸಿದ ಜೋರಿ ಗಾಳಿಗೆ ಧರೆಗುರುಳಿಸಿದೆ. ಇದರಿಂದ…

ಯುವತಿಯ ಮೊಬೈಲ್ ಕಿತ್ತುಕೊಂಡು ಮರವೇರಿದ ಮಂಗ – ನಂತರ ನಡೆದಿದ್ದೇನು..!!?
ಯುವತಿಯ ಮೊಬೈಲ್ ಕಿತ್ತುಕೊಂಡು ಮರವೇರಿದ ಮಂಗ – ನಂತರ ನಡೆದಿದ್ದೇನು..!!? ಹೀಗೆ ಸುಮಾರು 1 ಗಂಟೆಗಳ ಕಾಲ ಮರದ ಕೆಳಗೆ ಮೊಬೈಲ್ಗೆ ಕರೆ ಮಾಡಿ, ಗಲಾಟೆ ಮಾಡಿ, ಬಾಳೆಹಣ್ಣು ನೀಡಿ ಮೊಬೈಲ್ನ್ನು ಹಿಂಪಡೆಯುವ ಸಾಕಷ್ಟು ಪ್ರಯತ್ನಗಳು ನಡೆಯಿತು. ಆದರೆ ಮಂಗ ತನ್ನಷ್ಟಕ್ಕೆ ತಾನು ಮೊಬೈಲ್ ನೋಡುತ್ತಾ ಅದನ್ನು ಕಿವಿಗೆ ಇಟ್ಟುಕೊಂಡು ಸಾಕಷ್ಟು ಚೇಷ್ಟೆ ಮಾಡುತ್ತಿತ್ತು. ಯುವತಿಯೊಬ್ಬರ ಮೊಬೈಲ್ನ್ನು ಕಿತ್ತುಕೊಂಡು ಹೋಗಿ ಮರವೇರಿ ಕುಳಿತು ಆಟವಾಡಿಸಿದ ಘಟನೆ ಶಿವಮೊಗ್ಗ ನಗರದ ನಂಜಪ್ಪ ಆಸ್ಪತ್ರೆಯ ಬಳಿಯಲ್ಲಿ ನಡೆದಿದೆ. ನಂಜಪ್ಪ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಕೆಲಸ…

ಶಿವಮೊಗ್ಗ ಜಿಲ್ಲಾದ್ಯಂತ ಮೀನುಗಾರಿಕೆ ನಿಷೇಧ
ಶಿವಮೊಗ್ಗ ಜಿಲ್ಲಾದ್ಯಂತ ಮೀನುಗಾರಿಕೆ ನಿಷೇಧ ಶಿವಮೊಗ್ಗ – ಮುಂಗಾರು ಮಳೆಗಾಲದಲ್ಲಿ ವಂಶಾಭಿವೃದ್ಧಿ ಚಟುವಟಿಕೆ ನಡೆಯುವ ಹಿನ್ನಲೆಯಲ್ಲಿ ಜಿಲ್ಲಾದ್ಯಂತ ಮೀನುಗಾರಿಕೆಯನ್ನು ನಿಷೇದ ಮಾಡಲಾಗಿದೆ ಎಂದು ಮೀನುಗಾರಿಕ ಉಪನಿರ್ದೇಶಕರು ತಿಳಿಸಿದ್ದಾರೆ. ಮುಂಗಾರು ಮಳೆಗಾಲದ ಅವಧಿಯಲ್ಲಿ ಮೀನುಗಾರಿಕೆ (ಮೀನುಗಾರಿಕೆ) ವಂಶಾಭಿವೃದ್ದಿ ಚಟುವಟಿಕೆಗಳು ನಡೆಯವ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ. ಪ್ರತಿ ವರ್ಷದ ಜೂನ್ 1 ರಿಂದ ಜುಲೈ 30 ರವರೆಗೆ ರಾಜ್ಯದ ಎಲ್ಲಾ ಸರ್ವಋತು ಕೆರೆಗಳು, ಜಲಾಶಯಗಳು, ತೊರೆಗಳು, ನದಿಗಳು ಮತ್ತು ನದಿಗಳು ಮೀನು ಹಿಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಮೀನುಗಾರಿಕೆ ಉಪ…

ವರ್ಗಾವಣೆಯಾದ ಅಧಿಕಾರಿಗಳಿಗೆ ಅಮೃತ ಗ್ರಾಪಂ ವತಿಯಿಂದ ಬೀಳ್ಕೊಡುಗೆ
ವರ್ಗಾವಣೆಯಾದ ಅಧಿಕಾರಿಗಳಿಗೆ ಅಮೃತ ಗ್ರಾಪಂ ವತಿಯಿಂದ ಬೀಳ್ಕೊಡುಗೆ ರಿಪ್ಪನ್ ಪೇಟೆ : ಸಮೀಪದ ಅಮೃತ ಗ್ರಾಪಂ ವತಿಯಿಂದ ಆಯೋಜಿಸಿದ್ದ ವರ್ಗಾವಣೆ ಹೊಂದಿದ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಪಿ ಎಸ್ ಐ ಪ್ರವೀಣ್ ಎಸ್ ಪಿ ಹಾಗೂ ಉಪ ವಲಯ ಅರಣ್ಯಧಿಕಾರಿ ಅಕ್ಷಯ್ ಕುಮಾರ್ ರವರಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿ ಗೌರವಿಸಿದರು. ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಲ್ಲಾ ಜನರ ಜನ ಮಾನಸದಲ್ಲಿ ಉಳಿದ ದಕ್ಷ ಅಧಿಕಾರಿ ಪ್ರವೀಣ್ ಎಸ್ ಪಿ ಯವರು ಇಂದು ಅವರ…

ಜನಸ್ನೇಹಿ ದಕ್ಷ ಪೋಲಿಸ್ ಅಧಿಕಾರಿ ಪಿಎಸ್ ಐ ಪ್ರವೀಣ್ ಎಸ್ ಪಿ
ಜನಸ್ನೇಹಿ ದಕ್ಷ ಪೋಲಿಸ್ ಅಧಿಕಾರಿ ಪಿಎಸ್ ಐ ಪ್ರವೀಣ್ ಎಸ್ ಪಿ ರಿಪ್ಪನ್ ಪೇಟೆ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜನಸ್ನೇಹಿ ಪೋಲಿಸ್ ಅಧಿಕಾರಿಯಾಗಿ ಕೆಲಸ ನಿರ್ವಹಿಸಿ ಶಹಬ್ಬಾಸಗಿರಿ ಪಡೆದು ಆನಂದಪುರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿರುವ ಸನ್ನಡತೆಯ ದಕ್ಷ ಅಧಿಕಾರಿ ಪಿಎಸ್‍ಐ ಪ್ರವೀಣ್ ಮಾದರಿ ಅಧಿಕಾರಿಯಾಗಿದ್ದಾರೆ. ಹೌದು ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣದ ಮಾರಿಗುಡ್ಡ ನಿವಾಸಿಯಾಗಿರುವ ಪ್ರವೀಣ್ ಎಸ್ ಪಿ ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸುಧೀರ್ಘವಾಗಿ ಕಾರ್ಯನಿರ್ವಹಿಸಿ ಸ್ವಯಂ ನಿವೃತ್ತಿಗೊಂಡ ಇವರು ಕರ್ನಾಟಕ…

RIPPONPETE | ಎಸ್ ಪಿ ಮಿಥುನ್ ಕುಮಾರ್ ನೇತ್ರತ್ವದಲ್ಲಿ ಪೊಲೀಸರಿಂದ ಅಮ್ಮನಘಟ್ಟ ಗುಡ್ಡಕ್ಕೆ ಚಾರಣ (ಟ್ರೆಕ್ಕಿಂಗ್)
ಎಸ್ ಪಿ ಮಿಥುನ್ ಕುಮಾರ್ ನೇತ್ರತ್ವದಲ್ಲಿ ಪೊಲೀಸರಿಂದ ಅಮ್ಮನಘಟ್ಟ ಗುಡ್ಡಕ್ಕೆ ಚಾರಣ (ಟ್ರೆಕ್ಕಿಂಗ್) ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಪಂ ವ್ಯಾಪ್ತಿಯ ಅಮ್ಮನಘಟ್ಟ ಗುಡ್ಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ನೇತ್ರತ್ವದಲ್ಲಿ ಪೊಲೀಸರು ಚಾರಣ(ಟ್ರೆಕ್ಕಿಂಗ್) ಮಾಡುವ ಮೂಲಕ ಜೇನುಕಲ್ಲಮ್ಮ ದೇವಿ ಆಶೀರ್ವಾದ ಪಡೆದರು. ಅಮ್ಮನಘಟ್ಟ ಜೇನುಕಲ್ಲಮ್ಮ ದೇವಸ್ಥಾನದ ಪಕ್ಕದಲ್ಲಿರುವ ದೇವಿಯ ಮೂಲ ಸ್ಥಾನವಿರುವ ಗುಡ್ಡಕ್ಕೆ ಪೊಲೀಸ್ ಸಿಬ್ಬಂದಿಗಳು ಚಾರಣ ( ಟ್ರೆಕ್ಕಿಂಗ್) ಮೂಲಕ ಸಾಗಿ ಮೂಲ ದೇವಸ್ಥಾನದ ದರ್ಶನ ಪಡೆದು ಆ ನಂತರ ಶ್ರೀ…

ಹೊಸನಗರದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಬಕ್ರೀದ್ ಆಚರಣೆ
ಹೊಸನಗರದಲ್ಲಿ ಸಡಗರ ಹಾಗೂ ಸಂಭ್ರಮದಿಂದ ಬಕ್ರೀದ್ ಆಚರಣೆ HOSANAGARA | ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬ ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ರಂಜಾನ್ ನಂತರ ಬರುವ ದೊಡ್ಡ ಹಬ್ಬ ಇದಾಗಿದ್ದು, ತ್ಯಾಗದ ಸಂಕೇತವಾಗಿರುವ ಈ ಹಬ್ಬವನ್ನು ಪ್ರಪಂಚದಾದ್ಯಂತ ಮುಸ್ಲಿಮರು ಬಹಳ ಅದ್ಧೂರಿಯಾಗಿ ಆಚರಿಸುತ್ತಾರೆ. ಪ್ರತಿವರ್ಷ ದುಲ್-ಅಜ್-ಹಜ್ಜ್ ತಿಂಗಳಿನ ಹತ್ತನೇ ದಿನದಂದು, ಪ್ರಪಂಚದಾದ್ಯಂತ ಮುಸ್ಲಿಮರು ಈದ್-ಉಲ್-ಅಧಾ ಅಂದರೆ ಬಕ್ರೀದ್ ಹಬ್ಬವನ್ನು ಆಚರಿಸುತ್ತಾರೆ. ಈ ಹಬ್ಬದ ದಿನ ಸಾಮಾನ್ಯವಾಗಿ ಕುರಿ, ಮೇಕೆಯನ್ನು ದೇವರಿಗಾಗಿ ಬಲಿ ಕೊಡಲಾಗುತ್ತದೆ ಎಂದು…

ರಿಪ್ಪನ್ ಪೇಟೆಯ ಹರ್ಷಿತರವರಿಗೆ ಗಣಿತಶಾಸ್ತ್ರದಲ್ಲಿ ಪಿಹೆಚ್ ಡಿ ಪದವಿ
ರಿಪ್ಪನ್ ಪೇಟೆಯ ಹರ್ಷಿತರವರಿಗೆ ಗಣಿತಶಾಸ್ತ್ರದಲ್ಲಿ ಪಿಹೆಚ್ ಡಿ ಪದವಿ ರಿಪ್ಪನ್‌ಪೇಟೆ : ಪಟ್ಟಣದ ವಿದ್ಯಾರ್ಥಿನಿ ಹರ್ಷಿತ.ಎ. ಗಣಿತ ಶಾಸ್ತ್ರದಲ್ಲಿ ಪಿಎಚ್‌ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. ಹರ್ಷೀತ.ಎ.ಸಲ್ಲಿಸಿದ ಗಣಿತ ಶಾಸ್ತ್ರದಲ್ಲಿನ `ಎ ಸ್ಟಡಿ ಆನ್ ಡಾಮಿನೇಷನ್. ಸ್ಟ್ರೈಕಾಮ್ ಹ್ಯಾಮಿಂಗ್ ಅಂಡ್ ಟೋಪಾಲಾಜಿಕಲ್ ಇಂಡಿಸಸ್’ ಎಂಬ ಸಂಶೋಧನ ಮಹಾ ಪ್ರಬಂಧಕ್ಕೆ ಮಣಿಪಾಲ್ ಆಕಾಡೆಮಿ ಆಫ್ ಹೈಯರ್ಎಜುಕೇಷನ್ ಪಿಹೆಚ್‌ಡಿ ಪದವಿ ನೀಡಿದೆ. ಮಣಿಪಾಲ್ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ಗಣಿತ ಪ್ರಾಧ್ಯಾಪಕಿ ಡಾ.ಸಬಿತಾರವರ ಮಾರ್ಗದರ್ಶನದಲ್ಲಿ ಸಂಶೋಧನೆಕೈಗೊಂಡಿದ್ದರು. ಪಟ್ಟಣದ ಸಾಗರ ರಸ್ತೆಯ ನಿವಾಸಿ ಮತ್ತು ಸಾಗರದ ಸರ್ಕಾರಿ…

ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಪಿಎಸ್‌ಐ ಗಳ ವರ್ಗಾವಣೆ
ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಪಿಎಸ್‌ಐ ಗಳ ವರ್ಗಾವಣೆ ರಿಪ್ಪನ್ ಪೇಟೆಯ ಜನಸ್ನೇಹಿ ಪಿಎಸ್‌ಐ ಪ್ರವೀಣ್ ಎಸ್ ಪಿ ಆನಂದಪುರ ಠಾಣೆಗೆ ವರ್ಗಾವಣೆ – ನೂತನ ಪಿಎಸ್‌ಐ ಯಾರು ಗೊತ್ತಾ.!? ಈ ಸುದ್ದಿ ನೋಡಿ ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ಪೂರ್ವ ವಲಯ ಪೊಲೀಸ್ ಮಹಾನಿರೀಕ್ಷಕರಾದ ಬಿ ಆರ್ ರವಿಕಾಂತೇ ಗೌಡ ಆದೇಶ ಹೊರಡಿಸಿದ್ದಾರೆ. ರಿಪ್ಪನ್ ಪೇಟೆಯ ಜನಸ್ನೇಹಿ ಪಿಎಸ್‌ಐ ಪ್ರವೀಣ್ ಎಸ್ ಪಿ ಯವರನ್ನು ಅನಂದಪುರ ಪೊಲೀಸ್…