
ಜಿಲ್ಲಾ ಸುದ್ದಿ:

ಆಯತಪ್ಪಿ ಗುಂಡಿಗೆ ಬಿದ್ದ ಹಸು – ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣೆ
ಆಯತಪ್ಪಿ ಗುಂಡಿಗೆ ಬಿದ್ದ ಹಸು – ಅಗ್ನಿಶಾಮಕ ದಳ ಸಿಬ್ಬಂದಿಯಿಂದ ರಕ್ಷಣೆ ಶಿವಮೊಗ್ಗ: ಮೇವು ಅರಸಿ ಹೊರಟ ಹಸುವೊಂದು ಆಯ ತಪ್ಪಿ ಗುಂಡಿಗೆ ಬಿದ್ದಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳ ಸಿಬ್ಬಂದಿ ಹಸುವನ್ನು ಸುರಕ್ಷಿತವಾಗಿ ಮೇಲೆತ್ತಿ ರಕ್ಷಿಸಿದ್ದಾರೆ. ಶಿವಮೊಗ್ಗದ ಹರಿಗೆ ಹಾತಿನಗರದ ಟಿಎಸ್ ಡಬ್ಲ್ಯೂ ಕಾಲೋನಿಯಲ್ಲಿ ಬುಧವಾರ ಮಧ್ಯಾಹ್ನ 2.25ರ ಸುಮಾರಿಗೆ ಹಸುವೊಂದು ಮೇವು ಅರಸಿ ಹೋಗುವಾಗ ಮನೆ ಹಿಂದೆ ನೀರಿಗಾಗಿ ತೋಡಿದ್ದ ಸಣ್ಣ ಗುಂಡಿಗೆ ಬಿದ್ದಿದೆ. ಈ ಕುರಿತು ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಗಿತ್ತು ದೂರು…

RIPPONPETE | ಭಾರಿ ಮಳೆಗೆ ಕೊಟ್ಟಿಗೆ ಹಾನಿ – ಶಾಸಕರ ಪರವಾಗಿ ಆರ್ಥಿಕ ನೆರವು
RIPPONPETE | ಭಾರಿ ಮಳೆಗೆ ಕೊಟ್ಟಿಗೆ ಹಾನಿ – ಶಾಸಕರ ಪರವಾಗಿ ಆರ್ಥಿಕ ನೆರವು ರಿಪ್ಪನ್‌ಪೇಟೆ ಗ್ರಾಪಂ ವ್ಯಾಪ್ತಿಯ ಗವಟೂರು ವಾರ್ಡ್ 1 ರ ಕೆರೆಹಳ್ಳಿಯಲ್ಲಿ ಭಾರಿ ಮಳೆಗೆ ದನದ ಕೊಟ್ಟಿಗೆ ಹಾನಿಯಾಗಿತ್ತು ಈ ಹಿನ್ನಲೆಯಲ್ಲಿ ಶಾಸಕರ ಪರವಾಗಿ ಆರ್ಥಿಕ ನೆರವು ನೀಡಲಾಗಿದೆ. ಕೆರೆಹಳ್ಳಿ ಗ್ರಾಮದ ಮಂಜೋಜಿರಾವ್ ಎಂಬುವವರ ದನದ ಕೊಟ್ಟಿಗೆ ಭಾರಿ ಗಾಳಿ ಮಳೆಗೆ ಸಂಪೂರ್ಣ ಕುಸಿತ ಕಂಡಿತ್ತು ಈ ಹಿನ್ನಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು ಸ್ಥಳಕ್ಕೆ ಭೇಟಿ…

ಹುಲಿಕಲ್ ಘಾಟಿಯಲ್ಲಿ ಕೆಟ್ಟು ನಿಂತ ವಾಹನ – ಮಧ್ಯರಾತ್ರಿಯಿಂದ ವಾಹನ ಸಂಚಾರ ಸ್ಥಗಿತ : ಇಂದು ಮಧ್ಯಾಹ್ನ ಸಂಚಾರಕ್ಕೆ ಮುಕ್ತಗೊಂಡ ರಸ್ತೆ
ಹುಲಿಕಲ್ ಘಾಟಿಯಲ್ಲಿ ಕೆಟ್ಟು ನಿಂತ ವಾಹನ – ಮಧ್ಯರಾತ್ರಿಯಿಂದ ವಾಹನ ಸಂಚಾರ ಸ್ಥಗಿತ : ಇಂದು ಮಧ್ಯಾಹ್ನ ಸಂಚಾರಕ್ಕೆ ಮುಕ್ತಗೊಂಡ ರಸ್ತೆ ಮಲೆನಾಡು ಕರಾವಳಿ ಸಂಪರ್ಕದ ಪ್ರಮುಖ ಮಾರ್ಗಗಳಲ್ಲಿ ಒಂದಾದ ಹುಲಿಕಲ್ ಘಾಟಿಯಲ್ಲಿ ಮಧ್ಯರಾತ್ರಿಯಿಂದ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪ್ರಮುಖ ಹೇರ್ ಪಿನ್ ತಿರುವಿನಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಕಿಲೋಮೀಟರ್‌ಗಟ್ಟಲೆ ವಾಹನಗಳು ರಸ್ತೆಯ ಸಾಲುಗಟ್ಟಿ ನಿಂತ ಘಟನೆ ನಡೆದಿದೆ. ಸೋಮವಾರ ಮಧ್ಯ ರಾತ್ರಿಯಿಂದ ಮಂಗಳವಾರ ಮಧ್ಯಾಹ್ನ 1 ಗಂಟೆಯವರೆಗೂ ಸಂಚಾರ ಸ್ಥಗಿತವಾಗಿತ್ತು ನಗರ ಪೊಲೀಸ್…

ಕಿಡಿಗೇಡಿಗಳಿಂದ ಅರಣ್ಯ ಪ್ರದೇಶಕ್ಕೆ ಕೈಗಾರಿಕಾ ತ್ಯಾಜ್ಯ: ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ್ ರಿಂದ ಸ್ಥಳ ಪರಿಶೀಲನೆ
ಕಿಡಿಗೇಡಿಗಳಿಂದ ಅರಣ್ಯ ಪ್ರದೇಶಕ್ಕೆ ಕೈಗಾರಿಕಾ ತ್ಯಾಜ್ಯ: ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿನಾಯಕ್ ರಿಂದ ಸ್ಥಳ ಪರಿಶೀಲನೆ ಹೊಸನಗರ ತಾಲೂಕಿನ ಪುರಪ್ಪೆಮನೆ ಹಾಗೂ ಹರಿದ್ರಾವತಿ ಗ್ರಾಪಂ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಕೈಗಾರಿಕಾ ತ್ಯಾಜ್ಯವನ್ನು ಎಸೆಯುವ ಮೂಲಕ ಅರಣ್ಯ ಜೀವಿಗಳ ಸಂತತಿಯ ಮೇಲೆ ಪರಿಣಾಮ ಬೀರುವ ಮತ್ತು ಜೀವ ವೈವಿಧ್ಯತೆಯನ್ನು ಕಡಿಮೆ ಮಾಡುವ ಯತ್ನ ಕಿಡಿಗೇಡಿಗಳಿಂದ ನಡೆಯುತ್ತಿದೆ. ಹೌದು ಹೊಸನಗರ ತಾಲೂಕಿನ ಪುರಪ್ಪೆಮನೆ ಹಾಗೂ ಹರಿದ್ರಾವತಿ ಗ್ರಾಪಂ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶಗಳಲ್ಲಿ ಕೈಗಾರಿಕಾ…

ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಟ್ರಾಫಿಕ್ ಜಾಮ್
ಆಗುಂಬೆ ಘಾಟಿಯಲ್ಲಿ ಮರ ಬಿದ್ದು ಟ್ರಾಫಿಕ್ ಜಾಮ್ – ಸಂಚಾರ ವ್ಯತ್ಯಯ ತೀರ್ಥಹಳ್ಳಿ : ಆಗುಂಬೆ ಘಾಟಿಯಲ್ಲಿ ಬೃಹತ್ ಮರವೊಂದು ಅಡ್ಡಲಾಗಿ ರಸ್ತೆಗೆ ಬಿದ್ದ ಪರಿಣಾಮ ವಾಹನಗಳ ಸಂಚಾರದಲ್ಲಿ ಅಡಚಣೆ ಉಂಟಾಗಿದ್ದು ಅದರಲ್ಲೂ ಮಣಿಪಾಲ ಆಸ್ಪತ್ರೆಗೆ ಹೋಗುವ ಆಂಬುಲೆನ್ಸ್ ಗಳಿಗೆ ತೊಂದರೆಯಾಗಿದೆ. ಆಗುಂಬೆ ಘಾಟಿಯ ಪ್ರದೇಶದಲ್ಲಿ ಸಂಜೆ ಬಿರುಸಿನ ಗಾಳಿ ಮತ್ತು ಮಳೆಗೆ ಒಂದು ದೊಡ್ಡ ಮರ ರಸ್ತೆ ಮೇಲೆ ಬಿದ್ದ ಪರಿಣಾಮ, ರಾಷ್ಟ್ರೀಯ ಹೆದ್ದಾರಿ 169A–ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸುದೀರ್ಘ ಸಮಯದವರೆಗೆ ಉಡುಪಿ ಮತ್ತು…

RIPPONPETE | ಪಾನಮತ್ತನಾಗಿ ಮಲಗಿದ ಪೊಲೀಸ್ ಪೇದೆ
RIPONPETE | ಪಾನಮತ್ತನಾಗಿ ಮಲಗಿದ ಪೊಲೀಸ್ ಪೇದೆ ಗಮನಿಸುತಿದ್ದ ಸಾರ್ವಜನಿಕರು ಪೊಲೀಸಪ್ಪನ ಪರಿಯನ್ನು ಕಂಡು ಶಿಸ್ತಿನ ಪೊಲೀಸ್ ಇಲಾಖೆಯಲ್ಲಿ ಇಂತಹವರೂ ಇದ್ದಾರಾ?ಎನ್ನುತ್ತಲೇ ಮುಂದೆ ಸಾಗುತಿದ್ದರು ಕಳೆದ ಕೆಲವು ತಿಂಗಳ ಹಿಂದೆ ಪಟ್ಟಣದ ಪೊಲೀಸ್ ಠಾಣೆಗೆ ನಿಯುಕ್ತಿಗೊಂಡ ಈ ಪೇದೆ ಅಂದಿನಿಂದಲೂ ಪಾನಮತ್ತನಾಗಿಯೇ ಕರ್ತವ್ಯ ನಿರ್ವಹಿಸುತ್ತಿದ್ದು ಕೆಲವೊಮ್ಮೆ ಸಾರ್ವಜನಿಕ ರೊಂದಿಗೆ ರಿಪ್ಪನ್ ಪೇಟೆ: ಕರ್ತವ್ಯದಲ್ಲಿರುವಾಗಲೇ ಪಾನಮತ್ತ ನಾಗಿರುವ ಪಟ್ಟಣದ ಪೊಲೀಸ್ ಪೇದೆಯೋರ್ವರು ಸಾರ್ವಜನಿಕ ರಸ್ತೆಯ ಪಕ್ಕದಲ್ಲಿಯೇ ಮಲಗಿ ಅಪಹಾಸ್ಯಕ್ಕೀಡಾಗಿರುವ ಘಟನೆ ಸೋಮವಾರ ನಡೆದಿದೆ. ಪೊಲೀಸ್ ಠಾಣೆಯ ಪಕ್ಕದ ರಸ್ತೆಯ…

HOSANAGARA | ಭಾರಿ ಮಳೆಗೆ ಭೂ ಕುಸಿತ – ಒಂದಡಿಯಷ್ಟು ಕೆಳಗೆ ಕುಸಿದ ರಸ್ತೆ
HOSANAGARA | ಭಾರಿ ಮಳೆಗೆ ಭೂ ಕುಸಿತ – ಒಂದಡಿಯಷ್ಟು ಕೆಳಗೆ ಕುಸಿದ ರಸ್ತೆ ಶಿವಮೊಗ್ಗ ಜಿಲ್ಲಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು ಹಲವಾರು ಕಡೆ ಅನಾಹುಗಳು ನಡೆದಿದೆ ಇನ್ನು ಹೊಸನಗರ ತಾಲೂಕಿನ ಅರಮನೆ ಗ್ರಾಪಂ ವ್ಯಾಪ್ತಿಯಲ್ಲಿ ಕುಂದಗಲ್ ಗ್ರಾಮದಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಕುಂದಗಲ್ ಗ್ರಾಮದಲ್ಲಿ ಸುಮಾರು 200 ಅಡಿಯಷ್ಟು ವ್ಯಾಪ್ತಿಯಲ್ಲಿ ಭೂಕುಸಿತವಾಗಿರುವ ವರದಿಯಾಗಿದೆ.ಇನ್ನೂ ಈ ಕುಸಿತದಿಂದ ರಸ್ತೆ ಒಂದು ಅಡಿಯಷ್ಟು ಕೆಳಗೆ ಇಳಿದಿದೆ. ಕುಂದಗಲ್ ಗ್ರಾಮದಲ್ಲಿ ಸುಮಾರು ಒಂದು ಅಡಿಯಷ್ಟು ಭೂ ಕುಸಿತ ಉಂಟಾಗಿದೆ. ಕಳೆದ…

ಕಾಂತಾರ ಚಾಪ್ಟರ್-1 ಚಿತ್ರ ತಂಡಕ್ಕೆ ನೋಟೀಸ್ ಜಾರಿ ಮಾಡಿದ ಹೊಸನಗರ ತಹಶೀಲ್ದಾರ್ ರಶ್ಮಿ .! ಕಾರಣವೇನು!?
ಕಾಂತಾರ ಚಾಪ್ಟರ್-1 ಚಿತ್ರ ತಂಡಕ್ಕೆ ನೋಟೀಸ್ ಜಾರಿ ಮಾಡಿದ ಹೊಸನಗರ ತಹಶೀಲ್ದಾರ್ ರಶ್ಮಿ .! ಕಾರಣವೇನು!? ಶಿವಮೊಗ್ಗ: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಾಪ್ಟರ್ -1ರ ಚಿತ್ರೀಕರಣಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಚಿತ್ರೀಕರಣದ ವೇಳೆಯಲ್ಲಿ ದೋಣಿ ಮುಗುಚಿ 30 ಜನರು ನೀರಿಗೆ ಬಿದ್ದ ಘಟನೆ ಸಂಬಂಧ 3 ದಿನಗಳಲ್ಲಿ ಉತ್ತರಿಸುವಂತೆ ಹೊಸನಗರ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ. ಈ ಸಂಬಂಧ ಹೊಸನಗರ ತಹಶೀಲ್ದಾರ್ ರಶ್ಮಿ ಅವರು ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿದ್ದು, ದಿನಾಂಕ ಜೂನ್ 15ರಂದು ನಡೆದ ದೋಣಿ…

ಸಾಗರ ಹೊಸನಗರ ತಾಲೂಕಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ
ಸಾಗರ ಹೊಸನಗರ ತಾಲೂಕಿನ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ಶಿವಮೊಗ್ಗ: ಜಿಲ್ಲೆಯ ಸಾಗರ ಹಾಗೂ ಹೊಸನಗರ ತಾಲ್ಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಭಾರೀ ಮಳೆಯ ಹಿನ್ನಲೆಯಲ್ಲಿ ಕ್ಷೇತ್ರದ ಮನೆ, ರಸ್ತೆಗಳು ಹಾನಿಗೊಂಡಿವೆ.ಸದರಿ ಪ್ರದೇಶಗಳಿಗೆ ತತ್ತಕ್ಷಣ ಭೇಟಿ ನೀಡುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಶಾಸಕ ಬೇಳೂರು ಗೋಪಾಲಕೃಷ್ಣ ವಿದೇಶ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಇಂದು ಶಾಸಕರ ಆಪ್ತ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ…

ಒಂದು ಅಂಕಕ್ಕಾಗಿ ಮತ್ತೊಮ್ಮೆ ಪರೀಕ್ಷೆ ಬರೆದು 625ಕ್ಕೆ 625 ಅಂಕ ಪಡೆದು ಟಾಪರ್ ಆದ ಸಂಜನಾ
ಒಂದು ಅಂಕಕ್ಕಾಗಿ ಮತ್ತೊಮ್ಮೆ ಪರೀಕ್ಷೆ ಬರೆದು 625ಕ್ಕೆ 625 ಅಂಕ ಪಡೆದು ಟಾಪರ್ ಆದ ಸಂಜನಾ “ಥ ಇನ್ಫರ‍್ಮೇಶನ್ ಸೋರ್ಸ್ ಫಾರ್ ಮೇಕಿಂಗ್ ಪ್ರೋಟಿನ್ ಇನ್ ದ ಸೆಲ್ಸ್ ಇಸ್” ಎಂಬ ಬಹು ಆಯ್ಕೆಯ ಪ್ರಶ್ನೆಗೆ ಕೇಳಲಾಗಿತ್ತು. ಅದಕ್ಕೆ ಜೀನ್, ಕ್ರೋಮೋಜೋಮ್, ಡಿಎನ್‌ಎ, ರೈಬೊಝೋಮ್ ಎಂಬ ನಾಲ್ಕು ಆಯ್ಕೆ ಇತ್ತು. ಜೀನ್ ಸಹ ಪ್ರೋಟಿನ್ ಸೆಲ್ ಎಂದು ಸಂಜನಾ ಉತ್ತರ ನೀಡಿದ್ದಳು. ಆದರೆ ಸರಿಯಾದ ಉತ್ತರ ಡಿಎನ್‌ಎ ಎಂದಿತ್ತು. ಶಿವಮೊಗ್ಗ: ಒಂದು ಅಂಕದಿಂದ ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್ ಕನಸು…