ಭಾರತೀಯ ಜನತಾ ಪಾರ್ಟಿ ಅಲ್ಲ ಭ್ರಷ್ಟ ಜನತಾ ಪಾರ್ಟಿ – ಡಿ ಕೆ ಶಿವಕುಮಾರ್
ತೀರ್ಥಹಳ್ಳಿ : ಬಿಜೆಪಿ ಸರ್ಕಾರ ಬಂದು ಆರಗ ಜ್ಞಾನೇಂದ್ರ ಗೃಹ ಸಚಿವರಾದಾಗ ಸಂತೋಷವಾಗಿತ್ತು. ಅವರಿಗೆ ಒಳ್ಳೆಯ ಸಂಸ್ಕೃತಿ ಇದೆ ಅಂದುಕೊಂಡಿದ್ದೆ ಆದರೆ ಪೊಲೀಸ್ ಅನ್ನು ಉಪಯೋಗಿಸಿಕೊಂಡು ದುರಾಡಳಿತ ಮಾಡುತ್ತಿದ್ದಾರೆ. ನಿಮ್ಮ ಆಡಳಿತಾವಧಿಯಲ್ಲಿ ಇನ್ಸ್ಪೆಕ್ಟರ್ ಹುದ್ದೆಗೆ ಓ.ಎಂ.ಆರ್. ಶೀಟ್ ತಿದ್ದುವ ಕೆಲಸ ಮಾಡಿದ್ರು. ಆರಗ ಜ್ಞಾನೇಂದ್ರ ಅವರೇ ಕೇಸ್ ಹಾಕಿಸ್ತೀರೋ ಹಾಕಿಸಿ ಇನ್ನು 60 ದಿನದಲ್ಲಿ ಎಲ್ಲಾ ಬದಲಾಗಲಿದೆ ನಿಮ್ಮ ಅಧಿಕಾರ ಕೊನೆಗೊಳ್ಳಲಿದೆ
ನಿಮಗೆ ವಿಧಾನಸೌಧ ಖಾಲಿ ಮಾಡಿಸುತ್ತೆವೆ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ವಾಗ್ದಾಳಿ ನೆಡೆಸಿದರು.
ಪಟ್ಟಣದ ಸಂಸ್ಕೃತಿ ಮಂದಿರದ ಮೈದಾನದಲ್ಲಿ ಬುಧವಾರ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾನು ಹಲವಾರು ಕಡೆ ಪ್ರಜಾಧ್ವನಿ ಕಾರ್ಯಕ್ರಮ ಮಾಡಿದ್ದೇನೆ.ಆದರೆ ಇಷ್ಟು ಸೌಮ್ಯವಾಗಿ, ಪ್ರಜ್ಞಾವಂತ ಸಭೆಯನ್ನು ನಾನು ನೋಡಿಲ್ಲ. ಎಲ್ಲಾ ಕಡೆ ವಿದ್ಯಾವಂತ, ಬುದ್ಫಿವಂತ ಇರುತ್ತಾರೆ ಆದರೆ ಪ್ರಜ್ಞಾವಂತ ಬಹಳ ಮುಖ್ಯ ಅಂತಹ ಜನರು ತೀರ್ಥಹಳ್ಳಿ ಜನ ಎಂದರು.
ಈ ದೇಶಕ್ಕೆ ಬಂದಿರುವ ಕೊಳಕು ಸರ್ಕಾರವನ್ನು ತೊಳೆಯಲು ನಾವು ಬಂದಿದ್ದೆವೆ. ಪ್ರಜಾಧ್ವನಿ ಯಾತ್ರೆ ಮೂಲಕ ಈ ಭ್ರಷ್ಟ ಸರ್ಕಾರವನ್ನು ತೆಗೆಯಲು ಸಂಚರಿಸುತ್ತಿದ್ದೆವೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ
.
ಒಳ್ಳೆಯ ಆಡಳಿತ ನೀಡುತ್ತಿದ್ದ ಸಿದ್ಧರಾಮಯ್ಯನವರ ಸರ್ಕಾರವನ್ನು ಜನರು ತಿರಸ್ಕರಿಸಿದರು ಆದರೆ ಬಿಜೆಪಿ ಸರ್ಕಾರ ನುಡಿದಂತೆ ನಡೆದಿದಿಯಾ ? ಕೊಟ್ಟಂತಹ 760 ಭರವಸೆಗಳನ್ನು ಈಡೇರಿಸುತ್ತಿದಿಯಾ ? ಪ್ರಣಾಳಿಕೆ ಮೂಲಕ ನೀಡಿದ ಆಶ್ವಾಸನೆಯನ್ನು ಬಿಜೆಪಿ ಈಡೇರಿಸಿದಿಯಾ ? ಅಚ್ಚೇದಿನ್ ತರುತ್ತೆವೆ ಎಂದ ಮೋದಿ ಅಚ್ಚೆ ದಿನ್ ತಂದಿದ್ದಾರಾ ? ಕಾಂಗ್ರೆಸ್ ನವರು ಬ್ಲ್ಯಾಕ್ ಮನಿ ಮಾಡಿದ್ದಾರೆ, ನಾವು ಸ್ವಿಸ್ ಬ್ಯಾಂಕ್ ನಿಂದ ಬ್ಲ್ಯಾಕ್ ಮನಿ ತರ್ತಿವಿ ಅಂದ್ರು.
ಅವರೇನಾದರೂ ಬ್ಲ್ಯಾಕ್ ಮನಿ ತಂದ್ರಾ?
ನಿಮ್ಮ ಅಕೌಂಟ್ ಗೆ ದುಡ್ಡು ಹಾಕ್ತಿವಿ ಅಂದ್ರು.
ನಿಮಗೆ ಯಾರಾದರೂ ದುಡ್ಡು ಹಾಕಿದ್ದಾರಾ ?
ಸುಳ್ಳು ಹೇಳಬೇಡಿ, ಸುಳ್ಳು ಹೇಳಿದರೆ, ಆರಗ ಜ್ಞಾನೇಂದ್ರ ನಿಮಗೆ ಒಳಗೆ ಹಾಕಿಸುತ್ತಾರೆ ಎಂದು ಗೃಹಮಂತ್ರಿ ಆರಗ ಜ್ಞಾನೇಂದ್ರಗೆ ಟಾಂಗ್ ನೀಡಿದರು.
ಕಾಂಗ್ರೆಸ್ ಪಕ್ಷ ಎಲ್ಲಾ ವರ್ಗದವರಿಗೂ, ಸಮಾಜದವರಿಗೂ ನ್ಯಾಯ ನೀಡಿದೆ. ಕರಾವಳಿ, ಮಲೆನಾಡು ಸೇರಿದಂತೆ, ಇಡೀ ರಾಜ್ಯಕ್ಕೆ ವಿಶೇಷ ಕಾರ್ಯಕ್ರಮ ನೀಡಲು ನಾವು ಬದ್ಧರಾಗಿದ್ದೆವೆ.ಈ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೆವೆ.ಈ ಸರ್ಕಾರದ ಮೇಲೆ 40 ಪರ್ಸೆಂಟ್ ಕಳಂಕ ಬಂದಿದೆ. ಜನರ ಬದುಕಿನಲ್ಲಿ ಬದಲಾವಣೆ ಮಾಡಿದ್ದೆವೆ ಎಂದು ಯಡಿಯೂರಪ್ಪ, ಈಶ್ವರಪ್ಪ, ಹೇಳಲಿ. ಕೇವಲ ಬದುಕು ನೋಡಬೇಕು. ಭಾವನೆಗಳ ಮೇಲೆ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ನಾನು ಕೂಡ ಹಿಂದುನೇ.ಹಿಂದು, ಹಿಂದು ಎಂದರೆ ಆಗುತ್ತಾ. ನಾವುಗಳು ಕೂಡ ಹಿಂದೂ ಹೆಸರು ಇಟ್ಟುಕೊಂಡಿದ್ದೆವೆ.
ನಾವುಗಳು ಕೂಡ ಹಿಂದೂ ದೇವರನ್ನು ಪೂಜೆ ಮಾಡುತ್ತೆವೆ.ನಮ್ಮ ರಕ್ತ, ಕಣ್ಣೀರು, ಬೆವರು ಬೇರೆ ಬೇರೆ ಇದಿಯಾ ? ಎಲ್ಲಾ ಜಾತಿ, ವರ್ಗದವರಿಗೂ ನಾವು ಆರಾಧಿಸುತ್ತೆವೆ. ಆರ್. ಎಂ. ಮಂಜುನಾಥ್ ಗೌಡ ಮತ್ತು ಕಿಮ್ಮನೆ ರತ್ನಾಕರ್ ಇಬ್ಬರ ಹೆಸರು ತೀರ್ಥಹಳ್ಳಿಯಲ್ಲಿ ಕೇಳಿ ಬಂದಿದೆ. ನಾವು ಇಬ್ಬರಿಗೂ ವಿಧಾನಸೌಧದಲ್ಲಿ ಕೂರಿಸುತ್ತೆವೆ.ಈ ಬಗ್ಗೆ ತೀರ್ಥಹಳ್ಳಿ ಜನರಿಗೆ ಅನುಮಾನ ಬೇಡ ಎಂದರು
ಅಡಿಕೆ ನಿಷೇಧ ಮಾಡಲು ಹೊರಟಿದ್ದಾರೆ.
ಅಡಿಕೆ ಇಲ್ಲಿನ ಜನರ ಬದುಕುಗಾಗಿದೆ.
ಅಡಿಕೆ ಜನರ, ರೈತರ ದೇವರಾಗಿದೆ. ಅದು ತಿಂದು ಉಗಿಯುವುದಾದರೂ ಅಡಿಕೆ ನಮ್ಮ ಬದುಕಾಗಿದೆ.ಇಂತಹ ದೇವರಾಗಿರುವ ಅಡಿಕೆಯನ್ನು ಬ್ಯಾನ್ ಮಾಡಲು ಹೊರಟಿದ್ದಾರಲ್ಲಾ ಇವರಿಗೆ ಏನು ಮಾಡಬೇಕು. ಪ್ರತಿಯೊಂದು ಮನೆಯೂ ಬೆಳಕಾಗಬೇಕೆಂಬ ಉದ್ದೇಶದಿಂದ ಉಚಿತ ವಿದ್ಯುತ್ ನೀಡಲು ಹೊರಟಿದ್ದೆವೆ. ಹೆಣ್ಣಿಗೆ ಶಕ್ತಿ ನೀಡಲು ನಾವು ಯೋಜಿಸಿದ್ದೆವೆ. ಅಡುಗೆ ಎಣ್ಣೆ ಬೆಲೆ ಹೆಚ್ಚಾಗಿದೆ. ಅನೇಕ ಬಾರಿ ಚರ್ಚೆ ಮಾಡಿ, ಇಡೀ ದೇಶದಲ್ಲಿ ಎಲ್ಲಾ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಯೋಜಿಸಿದ್ದೆವೆ.
ಪ್ರತಿಯೊಬ್ಬ ಕುಟುಂಬದ ಮಹಿಳೆಯರಿಗೆ 2 ಸಾವಿರ ರೂ. ನೀಡಲು ಯೋಜಿಸಿದ್ದೆವೆ. ಈ ಮೂಲಕ ಮಹಿಳೆಯರಿಗೆ ಆರ್ಥಿಕವಾಗಿ ಸಬಲರಾಗಿಸಲು ಕಾರ್ಯಕ್ರಮ ರೂಪಿಸಿದ್ದೆವೆ. ಇದನ್ನು ನೀಡಲು ವಿಫಲರಾದರೆ, ನಾನು ಮತ್ತೊಮ್ಮೆ ತೀರ್ಥಹಳ್ಳಿಗೆ ಬಂದು ಭಾಷಣ ಮಾಡುವುದಿಲ್ಲ ಎಂದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ
ದೇಶವನ್ನು ಸಂಪೂರ್ಣವಾಗಿ ಹಾಳು ಮಾಡುವ ಕೆಲಸ ಮೋದಿ ನೇತೃತ್ವದಲ್ಲಿ ನಡೆಯುತ್ತಿದೆ.ಇದುವರೆಗೂ ದೇಶದ ನಿರುದ್ಯೋಗ ಸಮಸ್ಯೆಯನ್ನು ಬಿಜೆಪಿ ಸರ್ಕಾರ ನೀಗಿಸಿಲ್ಲ. ಬದಲಾಗಿ ನಿರುದ್ಯೋಗ ಸಮಸ್ಯೆ ಹೆಚ್ಚು ಮಾಡಿದ್ದಾರೆ ಎಂದು
ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದ ಆಡಳಿತ ಹದಗೆಟ್ಟಿದ್ದು, ಎರಡೂ ಸರ್ಕಾರಗಳನ್ನು ಕಿತ್ತೊಗೆಯಬೇಕು. ರಾಜ್ಯ ಸರ್ಕಾರ ಕೇವಲ ದುಡ್ಡು ಹೊಡೆಯುವ ಕೆಲಸ ಮಾಡುತ್ತಿದೆ. ಸರ್ಕಾರಿ ಇಲಾಖೆ ಕಚೇರಿಗಳನ್ನು ಪಕ್ಷದ ಕಚೇರಿಯನ್ನಾಗಿ ಪರಿವರ್ತಿಸಿದ್ದಾರೆ. ನಾವು ಇದುವರೆಗೂ ಯಾರು, ಯಾವ ಜಾತಿ ಎಂದು ಕೇಳಿಲ್ಲ. ನಾನು ಶಾಸಕನಾಗಿದ್ದ ವೇಳೆ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದೆನೆ ಎಂದು ಗೃಹಮಂತ್ರಿ ಆರಗ ಜ್ಞಾನೇಂದ್ರ ವಿರುದ್ಧ ಹರಿಹಾಯ್ದರು. ಆರಗ ಜ್ಞಾನೇಂದ್ರ ಅವರ ಆಡಳಿತ ಸಂಪೂರ್ಣ ಹದಗೆಟ್ಟು ಹೋಗಿದೆ. ಅವರ ಕ್ಷೇತ್ರದಲ್ಲೇ ಮರಳನ್ನು ಪೊಲೀಸರು ಲಾರಿಗೆ ಹಾಕಿ ಕಳಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಪರ ಗೃಹಮಂತ್ರಿ ಆರಗ ಜ್ಞಾನೇಂದ್ರ ಇದ್ದಾರೆ ಅಷ್ಟೇ ಅಲ್ಲದೆ ಬಿಜೆಪಿ ಕಾರ್ಯಕರ್ತರು ನಮ್ಮ ಇಬ್ಬರು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಾರೆ. ಅದಕ್ಕೆ ಆರಗ ಜ್ಞಾನೇಂದ್ರ ಅದರ ಪರವಾಗಿ ನಿಲ್ಲುತ್ತಾರೆ ಇದ್ಕಕ್ಕಿಂತ ದುಷ್ಟ ಸರ್ಕಾರ ಬಂದಿಲ್ಲ ಎಂದರು.
ತೀರ್ಥಹಳ್ಳಿಯಲ್ಲಿ ದುರಾಡಳಿತ ನಡೆಯುತ್ತಿದೆ ಈ ಕಾರಣಕ್ಕೆ ಇಂದಿನಿಂದ ಯಾರು ಮಲಗಬಾರದು. ಬಿಜೆಪಿಯನ್ನು ಸೋಲಿಸುವವರೆಗೆ ನಾನು ಮಲಗುವುದಿಲ್ಲ ಎಂದು ಎಲ್ಲರೂ ಶಪಥ ಮಾಡಿ.ನಾನು ಮಲಗುವುದಿಲ್ಲ, ನೀವು ಮಲಗಬಾರದು.
ಎಂದು ತೀರ್ಥಹಳ್ಳಿ ಕಾರ್ಯಕರ್ತರಿಗೆ ಕರೆ ನೀಡಿದರು
ಮಧು ಬಂಗಾರಪ್ಪ ಮಾತನಾಡಿ ತೀರ್ಥಹಳ್ಳಿಯಲ್ಲಿ ಬಂಗಾರಪ್ಪನವರ ಹೆಸರು ಹೇಳಲೇಬೇಕು. ಬಂಗಾರಪ್ಪನವರು ಸೊರಬದಲ್ಲಿ ಸೋತ್ತಿದ್ದಾರೆ ಆದರೆ ತೀರ್ಥಹಳ್ಳಿ ಜನ ಬಂಗಾರಪ್ಪನವರನ್ನು ಸೋಲಿಸಿಲ್ಲ. ಕುವೆಂಪು, ಗೋಪಾಲಗೌಡರಂತ ಮಹಾ ಪುಣ್ಯವಂತರು ಹುಟ್ಟಿದ ಊರು. ಇಲ್ಲಿ ಸಾಕಷ್ಟು ಜನ ಮಹಾನುಭಾವರಿದ್ದಾರೆ ಎಂದರು.
ಮಲೆನಾಡಿನ ಜನರು ಭೂ ಹಕ್ಕನ್ನು ತೆಗೆದುಕೊಂಡಿದ್ದೀವಿ ಎಂದರೆ ಅದಕ್ಕೆ ದೇವರಾಜ್ ಅರಸು ಕಾರಣ. ಇಡೀ ರಾಜ್ಯದಲ್ಲಿ ಭೂ ಹಕ್ಕು ಸಿಕ್ಕಿದೆ ಎಂದರೆ ಅದು ಬಂಗಾರಪ್ಪ ಮುಖ್ಯಮಂತ್ರಿ ಆದಾಗ ಅದು ಕಾಂಗ್ರೆಸ್ ಪಕ್ಷದಲ್ಲಿ. ಇಡೀ ರಾಜ್ಯದಲ್ಲಿ ರೈತರು ಹೊಲಕ್ಕೆ ಹೋಗುತ್ತಿದ್ದಾರೆ ಎಂದರೆ ಉಚಿತ ವಿದ್ಯುತ್ ತೆಗೆದುಕೊಳ್ಳುತ್ತಿದ್ದಾರೆ ಎಂದರೆ ಅದು ಬಂಗಾರಪ್ಪನವರಿಂದ ಎಂದರು.
ಶಿವಮೊಗ್ಗ ಜಿಲ್ಲೆ ಎಂದರೆ ಸರ್ವ ಜನಾಂಗದ ಶಾಂತಿಯ ತೋಟ ಎನ್ನುತ್ತಿದ್ದರು ಆದರೆ ಈಗ 144 ಸೆಕ್ಷನ್ ಅನ್ನುತ್ತಾರೆ. ಇದೆಲ್ಲ ಬದಲಾಗಬೇಕು ಎಂದರೆ ಇಲ್ಲಿನ ಪೊಲೀಸ್ ಅನ್ನು ಸೋಲಿಸಬೇಕು
2023 ರಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತೆ ಅದನ್ನು ಜನರು ತೀರ್ಮಾನ ಮಾಡಿದ್ದಾರೆ ಎಂದರು.
ಸಮಾವೇಶದ ವೇದಿಕೆಯಲ್ಲಿ ಕೆ.ಹೆಚ್. ಮುನಿಯಪ್ಪ, ಸಲೀಂ ಅಹಮದ್, ಮೋಟಮ್ಮ, ವಿ.ಎಸ್. ಉಗ್ರಪ್ಪ, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಮಂಜುನಾಥ್ ಗೌಡ, ಸೇರಿದಂತೆ ಹಲವಾರು ಮುಖಂಡರು ಭಾಗಿಯಾಗಿದ್ದರು.
ವರದಿ : ಅಕ್ಷಯ್ ಕುಮಾರ್