ಹೊಸನಗರ ತಾಲೂಕಿನ ತಹಶೀಲ್ದಾರ್ ವಿ ಎಸ್ ರಾಜೀವ್ ರವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಹೊಸನಗರ ತಾಲೂಕಿನ ತಹಶೀಲ್ದಾರ್ ರಾಜೀವ್ ವಿ.ಎಸ್ ಕೊಡಗು ಚುನಾವಣೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ.
ರಾಜೀವ್ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಮೂವರು ತಹಶೀಲ್ದಾರ್ ಗಳು ವರ್ಗಾವಣೆಗೊಂಡಿದ್ದಾರೆ. ಭದ್ರಾವತಿ, ಹೊಸನಗರ ಮತ್ತು ಶಿವಮೊಗ್ಗ ತಹಶೀಲ್ದಾರ್ ವರ್ಗಾವಣೆಗೊಂಡಿದ್ದಾರೆ.
ಭದ್ರಾವತಿ ತಹಶೀಲ್ದಾರ್ ಪ್ರದೀಪ್ ನಿಕ್ಕಂ ಉಡುಪಿಯ ಚುನಾವಣೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದರೆ, ಹೊಸನಗರ ತಾಲೂಕಿನ ರಾಜೀವ್ ವಿ.ಎಸ್ ಕೊಡಗು ಚುನಾವಣೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ. ಶಿವಮೊಗ್ಗ ತಾಲೂಕು ತಹಶೀಲ್ದಾರ್ ಎನ್ ಜೆ ನಾಗರಾಜಪ್ಪ ಮಂಡ್ಯ ಚುನಾವಣೆ ತಹಶೀಲ್ದಾರ್ ಆಗಿ ವರ್ಗಾವಣೆಗೊಂಡಿದ್ದಾರೆ. ಇವರ ಸ್ಥಾನಕ್ಕೆ ಇನ್ನೂ ಯಾರೂ ನಿಗದಿಯಾಗಿಲ್ಲ.
ಇವರೆಲ್ಲರೂ ಗ್ರೇಡ್ -1 ತಹಶೀಲ್ದಾರ್ ಆಗಿದ್ದು ನೂತನ ಅಧಿಕಾರಿಗಳು ಬರುವವರೆಗೂ ಕೆಲಸ ನಿರ್ವಹಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.ಚುನಾವಣೆ ಹಿನ್ನಲೆಯಲ್ಲಿ ಈ ವರ್ಗಾವಣೆ ನಡೆದಿದೆ. ಇನ್ಬೂ ಹಲವು ಅಧಿಕಾರಿಗಳು ಚುನಾವಣೆ ಹಿನ್ನಲೆಯಲ್ಲಿ ವರ್ಗಾವಣೆ ಆಗುವ ನಿರೀಕ್ಷೆ ಇದೆ.