ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಯಡಗುಡ್ಡೆ ಗ್ರಾಮದಲ್ಲಿ ನಾಪತ್ತೆಯಾಗಿದ್ದ ಮಹಿಳೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಕಳೆದ ಸೋಮವಾರದಿಂದ ಹೊದಲ ಗ್ರಾಪಂ ವ್ಯಾಪ್ತಿಯ ಯಡಗುಡ್ಡೆ ಸಮೀಪದ ಹೊಸಳ್ಳಿ ಗ್ರಾಮದ ಜಯಶ್ರೀ (52) ಎಂಬುವರು ನಾಪತ್ತೆಯಾಗಿದ್ದರು.
ಜ. 23 ರಂದು ಸಂಜೆ ವಾಕಿಂಗ್ ಹೋದವರು ಮನೆಗೆ ಹಿಂದಿರುಗಿಲ್ಲ. ಎಂದು ದೂರು ದಾಖಲಾಗಿತ್ತು. ಜ. 27ರಂದು ಯಡಗುಡ್ಡೆ ಗ್ರಾಮದ ಗುಡ್ಡದ ಮೇಲೆ ಜಯಶ್ರೀ ಅವರ ಶವ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಹೋದರ ನಾಗಾನಂದ ಅವರು ಶವವನ್ನು ಗುರುತಿಸಿದ್ದಾರೆ.
ಜಯಶ್ರೀಯವರದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಜನವರಿ 23 ರ ಕ್ಯಾಲೆಂಡರ್ ನಲ್ಲಿ ಅಗ್ನಿಸ್ಪರ್ಶ ಎಂದು ಬರೆಯಲಾಗಿತ್ತು ಎಂಬ ವಿಚಾರವೊಂದು ಗೊತ್ತಾಗಿದೆ. ಈ ರೀತಿ ಅಗ್ನಿಸ್ಪರ್ಶಕ್ಕೆ ಗುರಿಯಾದರೆ ಮೋಕ್ಷ ಪ್ರಾಪ್ತಿಯಾಗುತ್ತಾ ಎಂಬ ಉದ್ದೇಶ ಅದರಲ್ಲಿತ್ತಾ ಅಥವಾ ಯಾರಾದ್ರೂ ಜ್ಯೋತಿಷಿಗಳು ಈ ಐಡಿಯಾ ಕೊಟ್ಟಿದ್ದರಾ ಎಂಬುದು ಪ್ರಶ್ನೆಯಾಗಿ ಉಳಿಯುತ್ತದೆ.
ಜಯಶ್ರಿ ನಿಗೂಢ ಸಾವಿಗೂ ಮುನ್ನ ಖುದ್ದು ಅವರೇ ತೀರ್ಥಹಳ್ಳಿಯ ಪೆಟ್ರೋಲ್ ಬಂಕ್ ಒಂದರಲ್ಲಿ ಐದು ಲೀಟರ್ ಪೆಟ್ರೋಲ್ ನ್ನು ಖರೀದಿಸಿದ್ದಾರೆ. ಇದರ ಸಾಕ್ಷ್ಯ ಕೂಡ ಪೊಲೀಸರಿಗೆ ಲಭ್ಯವಾಗಿದೆ. ಹೇಗೋ ಸಿಟಿಗೆ ಹೋಗ್ತಿದ್ದಿಯಾ ಪೆಟ್ರೊಲ್ ತೆಗೆದುಕೊಂಡು ಬಾ ಎಂದು ಯಾರಾದ್ರೂ ಜಯಶ್ರಿಗೆ ಹೇಳಿರಬಹುದಾದ ಸಾಧ್ಯತೆಗಳನ್ನು ಇಲ್ಲಿ ಅಲ್ಲಗಳೆಯುವಂತಿಲ್ಲ. ಅಥವಾ ಜಯಶ್ರೀಯವರೇ ಪೆಟ್ರೋಲ್ ಖರೀದಿಸುವ ಮನಸ್ಸು ಮಾಡಿದ್ದರೇನೋ ಗೊತ್ತಿಲ್ಲ. ಹೀಗೆ ಹಲವು ಆಯಾಮಗಳಲ್ಲಿ ಸಾಗುವ ತನಿಖೆಯ ನಡುವೆ ಒಂದಿಷ್ಟು ಪ್ರಶ್ನೆಗಳು ಇಲ್ಲಿ ಉದ್ಭವವಾಗುತ್ತಿದೆ.
ಇನ್ನು ಜ್ಯೋತಿಷಿ ನೀಡಿದ ಸಲಹೆಯಂತೆ ಮನೆ ಹುಡುಕಿದಾಗ ಜಯಶ್ರಿ ಮೃತದೇಹ ಪತ್ತೆಯಾಯ್ತು ಎಂಬುದೇ ಇಲ್ಲಿ ರೋಚಕ ಸಂಗತಿ.