ರಿಪ್ಪನ್‌ಪೇಟೆ : ಇಂದಿನ ಅಧುನಿಕ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬರು ಒತ್ತಡದ ಜೀವನದಲ್ಲಿ ಬದುಕುತ್ತಿದ್ದಾರೆ. ನಿರ್ಧಾರಗಳನ್ನು ದಿಢೀರ್ ತೆಗೆದುಕೊಂಡು ತಮ್ಮ ಜೀವನವನ್ನು ಕೊನೆಗಾಣಿಸುತ್ತಿರುವ ಯುವ ಸಮೂಹಕ್ಕೆ ಶ್ರೇಷ್ಠ ಗ್ರಂಥಗಳ ಅಧ್ಯಯನದ ಬಗ್ಗೆ ಜಾಗೃತಿಗೊಳಿಸುವುದು ಸಮಾಜದಲ್ಲಿನ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಹೇಳಿದರು.
ಸಮೀಪದ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಚತುರ್ವಿಂಶತಿ ತೀರ್ಥಂಕರರ ಜಿನಬಿಂಬಗಳ ಪಂಚಕಲ್ಯಾಣ ಪೂರ್ವಕ ಮಹೋತ್ಸವದ ಐದನೇ ದಿನವಾಗ ಗುರುವಾರ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಾನವನ ಬದುಕಿನಲ್ಲಿ ನೆಮ್ಮದಿ ಕಾಣಬೇಕಾದರೆ ಧಾರ್ಮಿಕ ಆಚರಣೆಗಳು ಗುರುಹಿರಿಯರಲ್ಲಿ ಗೌರವ ಭಕ್ತಿ ಶ್ರದ್ದೆ ಅಧ್ಯಯನದಲ್ಲಿ ಆಸಕ್ತಿ ಇವುಗಳು ಒತ್ತಡವನ್ನು ಕಡಿಮೆಗೊಳಿಸುವುದಲ್ಲದೆ ಮಾನಸಿಕ ನೆಮ್ಮದಿ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ದ್ವಿಗುಣಗೊಳಿಸುತ್ತವೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಶ್ರೇಷ್ಠ ಗ್ರಂಥ ಅಧ್ಯಯನದ ಆಸಕ್ತಿಯನ್ನು ಬೆಳೆಸುವಂತೆ ಕರೆ ನೀಡಿದರು.
ಕರ್ನಾಟಕದಲ್ಲಿ ವಿವಿಧ ಕ್ಷೆತ್ರದಲ್ಲಿ ಆತ್ಯುತ್ತಮ ಸೇವೆ ಮಾಡುವುದರ ಮೂಲಕ ಸಮಾಜದ ಶ್ರೇಯೋಭಿವೃದ್ದಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಸಾವಿರಾರು ಜೈನ ಕುಲಭಾಂದವರು ಇದ್ದರೂ ಸಹ ಅವರುಗಳನ್ನು ಸರ್ಕಾರ ಗುರುತಿಸದೇ ನಿರ್ಲಕ್ಷ್ಯ ವಹಿಸಿರುವುದು ಬೇಸರದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿನ ವಿವಿಧ ಕ್ಷೆತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ಜೈನ ಸಮುದಾಯದವರನ್ನು ಗುರುತಿಸಿ ಪ್ರೋತ್ಸಾಹಿಸುವಂತ ಅಭೂತ ಪೂರ್ವ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂದರು.
ಹೊಂಬುಜ ಜೈನಮಠದ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ರಾಷ್ಟ್ರ ಸಂತ ಅಚಾರ್ಯ ಶ್ರೀ 108 ಗುಣಧರನಂದಿ ಮುನಿಮಹಾರಾಜರು, ವಾತ್ಸಲ್ಯ ಮುನಿಶ್ರೀ 108 ಪುಣ್ಯಸಾಗರ ಮಹಾರಾಜರು ಅರ್ಯಿಕಾ 105 ನೂತನಮತಿ ಮಾತಾಜೀ ದಿವ್ಯ ಸಾನಿಧ್ಯ ವಹಿಸಿದ್ದರು.
ಅರಿಹಂತಗಿರಿ ದವಳಕೀರ್ತಿ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ವರೂರು ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಶಾಸಕ ಅಭಯಪಾಟೀಲ, ಸಂಜಯಪಾಟೀಲ, ವಿನೋಧದೊಡ್ಡಣವರ, ರವಿರಾಜ ಪಾಟೀಲ, ಸತೀಶಜೈನ್, ಅನಿಲಕಾಠ್ಮಂಡೋ, ಡಿ.ಆರ್.ಶಹಾ, ಎಂ.ಎಸ್.ಮೃತ್ಯುಂಜಯ, ಬಾಗಚಂದ್ ಸರಾವಗೀ, ಪದ್ಮಲತಾ ಡಾ.ನಿರಂಜನ್ ಜೈನ್, ಅನಿಲಶೇಠಿ, ಪುಷ್ಪರಾಜ ಜೈನ್, ಮುಖೇಶ್‌ಶಹಾ, ಸಂಜಯ ಬಾಕ್ಲೀವಾಲ, ಮನೋಜ್ ಪಾಟ್ನಿ, ರಾಜೇಂದ್ರಛಾವಾಡಾ, ಸರೋಜ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ರಾಷ್ಟ್ರ ಸಂತ ಅಚಾರ್ಯ ಶ್ರೀ 108 ಗುಣಧರನಂದಿ ಮುನಿಮಹಾರಾಜರಿಗೆ ಭಕ್ತವಾತ್ಸಲ್ಯ ಚೂಡಾಮಣಿ ಉಪಾಧಿಯನ್ನು ಸಮರ್ಪಿಸಲಾಯಿತು.