ಜೈನ ಬೀಜಾಕ್ಷರಿ ಮಂತ್ರ ನಿತ್ಯ ಪಠಣದಿಂದ ಆನಂತ ಶಕ್ತಿ ವೃದ್ದಿ|hombuja

ರಿಪ್ಪನ್‌ಪೇಟೆ;- ಜೈನ ಬೀಜಾಕ್ಷರಿ ಮಂತ್ರವನ್ನು ನಿತ್ಯ ಪಠಣಮಾಡುವುದರಿಂದ  ನಮಗೆ ಎದುರಾಗಿರುವ ನೂರೆಂಟು ಸಮಸ್ಯೆಗಳು ಪರಿಹಾರವಾಗುವುದು ಎಂದು ರಾಷ್ಟ ಸಂತ ಅಚಾರ್ಯ 108 ಗುಣಧರನಂದಿ ಮುನಿಮಹಾರಾಜರು ಹೇಳಿದರು.  

ಸಮೀಪದ ಹೊಂಬುಜ ಅತಿಶಯ ಮಹಾಷೇತ್ರದಲ್ಲಿ ಚತುರ್ವಿಂಶತಿ ತೀರ್ಥಂಕರರ ಜಿನಬಿಂಬಗಳ ಪಂಚಕಲ್ಯಾಣ ಪೂರ್ವಕ ಮಹೋತ್ಸವದ ಶುಕ್ರವಾರ ಕೊನೆಯ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನಿಧ್ಯವಹಿಸಿ ಅಶೀರ್ವಚನ ನೀಡಿ ಹೊಂಬುಜ ಜೈನಮಠದಲ್ಲಿ ನಡೆದ ಪಂಚಕಲ್ಯಾಣ ಮಹೋತ್ಸವು ದೇವರಾಯ ಇಂದ್ರ ಸಾಕ್ಷಾತ್ಕಾರ ಮಾಡಿದಂತಾಗಿದ್ದು ಈ ಪುಣ್ಯ ಕಾರ್ಯ ಜನಮಾನಸದಲ್ಲಿ ನುರಾರು ವರ್ಷ ಕಾಲ ಉಳಿಯುವಂತಾಗಿದೆ ಎಂದು ಭಾವಿಸಿದ್ದು ಜೈನ ಬೀಜಾಕ್ಷರ ಮಂತ್ರ ಪಠಣದಿಂದ ಅನಂತ ಶಕ್ತಿ ವೃದ್ದಿಯಾಗುವುದು ಮತ್ತು ಸಂಕಷ್ಟಗಳು ಪರಿಹಾರವಾಗುವವು ಎಂದು ಹೇಳಿದರು.

ಜೈನ ಇತಿಹಾಸ ತತ್ವ ಹೊಂದಿದ ಕುತುಬ್‌ಮೀನಾರ್‌ನಂತೆ ಜಗತ್ತಿನಲ್ಲಿ ಜೈನ ಮೌಲ್ಯ ತತ್ವ ಎರಡು ಪಟ್ಟು 451 ಅಡಿ ಎತ್ತರದ ಸುಮೇರು ಪರ್ವತ ನಿರ್ಮಾಣವಾಗುತ್ತಿದ್ದು ಬರುವ ಜುಲೈನಲ್ಲಿ ಸ್ಥಾಪನೆಗೊಳ್ಳಲಿದೆ ಎಂದ ಅವರು ಮಾತೆ ಪದ್ಮಾವತಿಯಲ್ಲಿ ಬೇಡುತ್ತೇನೆ ಹೊರತು ಬೇರೆವರಲ್ಲಿ ಬೇಡುವುದಿಲ್ಲ ಜಗನ್ಮಾತೆ ತಾಯಿ ಕರುಣಿಸಿದರಲ್ಲಿ  ತೃಪ್ತಿಪಡುತ್ತೇನೆ ಎಂದರು.

ಮುಸ್ಲಿಂ.ಕ್ರಿಶ್ಚಿಯನ್ ಮತ್ತು ಜೈನ ದರ್ಮದವರನ್ನು ಸರ್ಕಾರ ಅಲ್ಪಸಂಖ್ಯಾತರೆಂದು ಪರಿಗಣಿಸಿ 400 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದರೂ ಕೂಡಾ ನಮ್ಮ ಜೈನ ಸಮಾಜದ ಬಡವರಿಗೆ 400 ರೂಪಾಯಿ ಸಹ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶ್ರೀಕ್ಷೇತ್ರ ಕಲಿಯುಗದ ಮಂತ್ರ ಶಕ್ತಿಯ ಕೇಂದ್ರವಾಗಿ ಹೊಂಬುಜ ಪದ್ಮಾವತಿ ದೇವಿ ನೆಲೆಸಿ  ಭಕ್ತರ ಇಷ್ಟಾರ್ಥವನ್ನು ಪರಿಹರಿಸುತ್ತಿದ್ದಾಳೆಂದರು.
ಹೊAಬುಜ ಜೈನಮಠದ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿ ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.

ವಾತ್ಸಲ್ಯ ಮುನಿಶ್ರೀ 108 ಪುಣ್ಯಸಾಗರ ಮಹಾರಾಜರು ಅರ್ಯಿಕಾ 105 ನೂತನಮತಿ ಮಾತಾಜೀ ದಿವ್ಯ ಸಾನಿಧ್ಯ ವಹಿಸಿದ್ದರು.

ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಪದ್ಮರಾಜ ಎನ್.ದೇಸಾಯಿ,ಡಾ.ಜೀವಂಧರಜೈನ,ಇಂಪಾಲ್ ವಿಜಯಪಾಟ್ನಿ,ಧನ್ಯಕುಮಾರ ಗುಂಡೆ,ವಿಜಯಕುಚನೂರೆ,ಆಶೋಕ ಪಾಪಡಿವಾಲ್,ರಜನೀಶ್‌ಜೈನ್,ಶಿವಮೊಗ್ಗ ದಿಗಂಬರ ಜೈನ ಸಂಘದ ಅಧ್ಯಕ್ಷ ಪ್ರಭಾಕರಗೋಗಿ,ಭದ್ರಾವತಿ ದಿಗಂಬರ ಜೈನ ಸಂಘದ ಅದ್ಯಕ್ಷ ಪ್ರಕಾಶಚಂದ್‌ಜೈನ್  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಿ.ಡಿ.ಆಶೋಕಕುಮಾರ ಸ್ವಾಗತಿಸಿದರು.ಯಶೋಧರ ಇಂದ್ರ ವಂದಿಸಿದರು.

 ಪ್ರತಿಷ್ಟಾ ಮಹೋತ್ಸವ : ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಇಂದು 108 ಗುಣಧರನಂದಿ ಮುನಿಮಹಾರಾಜರು ಮತ್ತು 108 ಪುಣ್ಯಸಾಗರ ಮಹಾರಾಜರು ಹಾಗೂ 105 ನೂತನಮತಿ ಮಾತಾಜೀ ದಿವ್ಯ ಸಾನಿಧ್ಯದಲ್ಲಿ ಹೊಂಬುಜ ಜೈನ ಮಠದ ಪೀಠಾಧ್ಯಕ್ಷರಾದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಜವರ ನೇತೃತ್ವದಲ್ಲಿ ಬೆಳಗ್ಗೆ ಸುಪ್ರಭಾತ,ನಿತ್ಯವಿಧಿ.ಜಲಯಾತ್ರಾ ಮಹೋತ್ಸವ ಜಿನಮಂದಿರದಲ್ಲಿ  ಅಭೀಷೇಕ. ಮಂಟಪದಲ್ಲಿ ಮಾನಸ್ತಂಭ ಬಿಂಬಗಳ ಪ್ರತಿಷ್ಠಾಪನೆ ನಿರ್ವಾಣ ಕಲ್ಯಾಣ,ಲಘು ಸಿದ್ದಚಕ್ರ ವಿಧಾನ 108 ಕಳಸಗಳಿಂದ ಮಂಟಪದಲ್ಲಿ ಮಹಾಭಿಷೇಕ ದ್ವಜಾ ಅರೋಹಣ ಸಂಘಪೂಜೆ.ವಿಸರ್ಜನೆ  ಜರುಗಿತು. 
 . 
  

 
  

Leave a Reply

Your email address will not be published. Required fields are marked *