ರಿಪ್ಪನ್ಪೇಟೆ : ಇಲ್ಲಿನ ಬಿಸಿಎಂ ವಿದ್ಯಾರ್ಥಿನಿ ನಿಲಯದಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಸದಸ್ಯತ್ವ ಅಭಿಯಾನ ನಡೆಸಿರುವ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸದಸ್ಯತ್ವವನ್ನು ಕೂಡಲೇ ವಜಾ ಮಾಡುವಂತೆ ಹೊಸನಗರ ತಾಲೂಕ್ ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ನಾಡಕಛೇರಿ ಉಪತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಹೊಸನಗರ ತಾಲ್ಲೂಕು ಎಎಪಿ ಪಕ್ಷದ ಅಧ್ಯಕ್ಷ ಗಣೇಶ್ ಸೋಗೋಡು 27-01-2023 ರ ಶುಕ್ರವಾರ ಸಂಜೆ ಪಟ್ಟಣದ ಬಿಸಿಎಂ ವಿದ್ಯಾರ್ಥಿನಿಯರ ಹಾಸ್ಟೆಲ್ ಗೆ ಬಿಜೆಪಿ ಮಹಿಳಾ ಮುಖಂಡರು ಪಕ್ಷದ ಸಭೆ ನಡೆಸಿ ಕೆಲವು ವಿದ್ಯಾರ್ಥಿನಿಯರಿಗೆ ಬಿಜೆಪಿ ಪಕ್ಷದ ಸದಸ್ಯತ್ವ ನೋಂದಣಿ ಮಾಡಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಈ ಸಂಧರ್ಭದಲ್ಲಿ ಪಟ್ಟಣದ ಪ್ರಥಮ ಪ್ರಜೆಯಾದ ಗ್ರಾಪಂ ಅಧ್ಯಕ್ಷರು ,ಉಪಾಧ್ಯಕ್ಷರು ಮತ್ತು ಕೆಲ ಸದಸ್ಯರು ಉಪಸ್ಥಿತರಿದ್ದು ಆಡಳಿತವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.
ಸರ್ಕಾರಿ ಹಾಸ್ಟೆಲ್ ನಲ್ಲಿ ಸದಸ್ಯತ್ವ ಅಭಿಯಾನ ನಡೆಸಿರುವುದು ಅಕ್ಷಮ್ಯ ಅಪರಾಧ ಸರ್ಕಾರಿ ಕಛೇರಿ ಮತ್ತು ಶೈಕ್ಷಣಿಕ ಕೇಂದ್ರಗಳಲ್ಲಿ ಪಕ್ಷ ರಾಜಕಾರಣ ಮಾಡುವುದು ನಿಷೇಧವಿದ್ದರೂ ನಿಯಮವನ್ನು ಉಲ್ಲಂಘಿಸಿರುವ ಜನಪ್ರತಿನಿಧಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಖಂಡನೀಯವೆಂದು ಆರೋಪಿಸಿ ತಕ್ಷಣ ಮೇಲ್ಕಂಡ ಗ್ರಾಮ ಪಂಚಾಯ್ತಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ,ಸದಸ್ಯರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಎಎಪಿ ಪಕ್ಷದ ಮುಖಂಡ ಟಿ.ಆರ್.ಕೃಷ್ಣಪ್ಪ, ಮುಖಂಡರಾದ ಸಂತೋಷ ಆಶ್ರೀತಾ , ಹಸನಬ್ಬ, ಚೇತನಕುಮಾರ್, ಈಶ್ವರಪ್ಪ,ನದೀಮ್ ಮತ್ತು ಇನ್ನಿತರರು ಹಾಜರಿದ್ದರು.