ಶಿವಮೊಗ್ಗ: ನಗರದ ಸುಬ್ಬಯ್ಯ ಆಸ್ಪತ್ರೆಯಲ್ಲಿ ಹೆರಿಗೆಯಾದ ಕೆಲವೇ ಗಂಟೆಯಲ್ಲಿ ನವಜಾತ ಶಿಶು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯದಿಂದಲೇ ಮಗು ಸಾವಿಗೀಡಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಪೂಜಿ ನಗರದ ಭಾಗ್ಯ ಮತ್ತು ನಾಗರಾಜ್ ದಂಪತಿಗಳಿಗೆ ಚೊಚ್ಚಲ ಗಂಡು ಮಗುವಿಗೆ ನಿನ್ನೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿದ ತಕ್ಷಣ ತೂಕಹಾಕಿಲ್ಲ ಮಗುವಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೆ ವೈದ್ಯರೇ ಸಾವಿಗೆ ಕಾರಣವಾಗಿದ್ದಾರೆ ಎಂದು ಪೋಷಕರು ಮತ್ತು ಪೋಷಕರ ಕಡೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಗು ಸಾವಿಗೆ ಮುಂಚೆ ವೈದ್ಯರು ಉಸಿರಾಟ ತೊಂದರೆ ಆಗಿದೆ ಎಂದು ಪೋಷಕರಿಗೆ ತಿಳಿಸಿ ಮೆಗ್ಗಾನ್ ಗೆ ಕರೆದುಕೊಂಡು ಹೋಗಿದ್ದಾರೆ. ಇದಮ್ನ ಪೋಷಕರಿಗೆ ತಿಳಿಸಿಲ್ಲ. ನಂತರ ತಿಳಿಸಿದ್ದಾರೆ. ಮಗುವಿಗೆ ಏನು ಸಮಸ್ಯೆ ಆಗಿದೆ. ಸಮಸ್ಯೆಗೆ ಚಿಕಿತ್ಸೆ ಏನು ಕೊಡಬೇಕು ಎಂದು ಆಸ್ಪತ್ರೆಯವರಿಗೆ ತಿಳಿದಿಲ್ಲ ಎಂದು ಪೋಷಕರು ಆರೋಪಿಸಿದ್ದಾರೆ.
ನಿರ್ಲಕ್ಷ ತೋರಿದ ಸುಬ್ಬಯ್ಯ ಆಸ್ಪತ್ರೆಯ ವೈದ್ಯರ ಅಷ್ಟು ಜನರ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಮಗು ಸತ್ತು 5 ಗಂಟೆ ಕಳೆದರೂ ಸ್ಥಳಕ್ಕೆ ಒಬ್ಬ ವೈದ್ಯರು ಬಂದಿಲ್ಲವೆಂದು ಆರೋಪಿಸಿ ಪೋಷಕರ ಕಡೆಯವರು ಆಸ್ಪತ್ರೆಯ ಬಾಗಿಲಿನ ಗ್ಲಾಜುಗಳನ್ನ ಪುಡಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಆಸ್ಪತ್ರೆಯಲ್ಲಿ ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನೂಕುನುಗ್ಗಲು ಮಾಡಿದ್ದರಿಂದ ಐಸಿಯು ಡೋರ್ ಗ್ಲಾಸ್ ಚೂರು ಚೂರಾಗಿದೆ.