Headlines

ರಿಪ್ಪನ್‌ಪೇಟೆ : ಸರ್ಕಾರಿ ಬಿಸಿಎಂ ಮಹಿಳಾ ಹಾಸ್ಟೆಲ್ ನಲ್ಲಿ ಬಿಜೆಪಿ ಪಕ್ಷದಿಂದ ಸದಸ್ಯತ್ವ ಅಭಿಯಾನ ಆರೋಪ – ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ|protest

ರಿಪ್ಪನ್‌ಪೇಟೆ : ಪಟ್ಟಣದ ಬಿಸಿಎಂ ವಿದ್ಯಾರ್ಥಿನಿಯರ ವಸತಿಗೃಹದಲ್ಲಿ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಅಭಿಯಾನದಡಿಯಲ್ಲಿ ಸದಸ್ಯತ್ವ ನೋಂದಣಿ ಮಾಡಿದ್ದಾರೆ ಎಂದು ಆರೋಪಿಸಿ ರಿಪ್ಪನ್‌ಪೇಟೆ ಕಾಂಗ್ರೆಸ್ ಘಟಕದ ವತಿಯಿಂದ ಹಾಸ್ಟೆಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.




ಸಾಮಾಜಿಕ ಜಾಲತಾಣದಲ್ಲಿ “ಭಾರತೀಯ ಜನತಾ ಪಕ್ಷ ಹೊಸನಗರ ಮಂಡಲ ಮಹಿಳಾ ಮೋರ್ಚ ವಿಜಯ ಸಂಕಲ್ಪ ಅಭಿಯಾನ ದಿನಾಂಕ 27 ರ ಶುಕ್ರವಾರ ರಿಪ್ಪನ್‌ಪೇಟೆಯ ಬಿಸಿಎಂ ಹಾಸ್ಟೆಲ್ ನಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಹಾಗೂ ಸುಮಾರು 31 ಸದಸ್ಯತ್ವ ನೋಂದಣಿ ಮಾಡಿಸಲಾಯಿತು” ಎಂಬ ಅಡಿಬರಹದ ಪೋಟೋ ವೈರಲ್ ಆಗಿತ್ತು.

                                      [ ವೈರಲ್ ಆದ ಪೋಟೋ]


ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಹಾಸ್ಟೆಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಾಗೂ ಹಾಸ್ಟೆಲ್ ವಾರ್ಡನ್ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ  ಮಾತನಾಡಿದ ಗ್ರಾಮ ಪಂಚಾಯತ್ ಸದಸ್ಯ ಡಿ ಇ ಮಧುಸೂಧನ್  ಬಿಜೆಪಿ ಪಕ್ಷ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಮಕ್ಕಳ ಮನಸ್ಸಲ್ಲಿ ರಾಜಕೀಯ ದ್ವೇಷ ಬಿತ್ತುತ್ತಿದೆ ಆದರಿಂದ ಕೂಡಲೇ ಘಟನೆಗೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ ಮಾತನಾಡಿ ಸರ್ಕಾರಿ ಬಿಸಿಎಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯರ ಸದಸ್ಯತ್ವ ನೋಂದಣಿ‌ ಮಾಡಲು ತಾಲೂಕಿನ ಆಡಳಿತ ಯಂತ್ರ ಬಿಜೆಪಿ ಪಕ್ಷಕ್ಕೆ ಸಹಕಾರ ನೀಡುತಿದ್ದೂ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದೆ.ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇಂತಹ ಹೀನ ಕೃತ್ಯಕ್ಕೆ ಸಹಕರಿಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳ ಬೇಕು ಇಲ್ಲದಿದ್ದಲ್ಲಿ ಸೋಮವಾರ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನೇತ್ರತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದರು.




ಈ ಪ್ರತಿಭಟನೆಯಲ್ಲಿ ತಾಲೂಕ್ (ಅ) ಘಟಕದ ಬ್ಲಾಕ್ ಅಧ್ಯಕ್ಷ ಆಸೀಪ್ ಬಾಷಾ ,ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ ಎಂ ಪರಮೇಶ್ , ಗ್ರಾಪಂ ಸದಸ್ಯರಾದ ಧನಲಕ್ಷ್ಮಿ ,ಗಣಪತಿ ,ಪ್ರಕಾಶ್ ಪಾಲೇಕಾರ್ ಮುಖಂಡರಾದ ರವೀಂದ್ರ ಕೆರೆಹಳ್ಳಿ ,ಶ್ರೀನಿವಾಸ್ ಆಚಾರ್ ,ರಮೇಶ್ ಫ್ಯಾನ್ಸಿ,ಮಂಜುನಾಥ್ ಮಳವಳ್ಳಿ ,ಮಾಲತೇಶ್ ,ಹೆಚ್ ಎನ್ ಉಮೇಶ್ ,ಕುಮಾರ್ ಮತ್ತು ಶ್ರೀಧರ್ ಇದ್ದರು.




ಬಿಸಿಎಂ ಹಾಸ್ಟೆಲ್ ಗೆ ವಿದ್ಯಾರ್ಥಿನಿಯರ ಕುಂದುಕೊರತೆಗಳನ್ನು ಆಲಿಸಲು ಗ್ರಾಪಂ ಉಪಾಧ್ಯಕ್ಷರು ಹಾಗೂ ಸದಸ್ಯರೊಂದಿಗೆ ತೆರಳಿ ಅವರ ಸಮಸ್ಯೆಗಳನ್ನು ಆಲಿಸಲಾಗಿತ್ತು.ಪಕ್ಷದ ಸದಸ್ಯತ್ವ ನೋಂದಣಿ ವಿಚಾರ ನನ್ನ ಗಮನಕ್ಕೆ ಬಂದಿಲ್ಲ…. ಮಂಜುಳಾ ಕೆ ರಾವ್ ಅಧ್ಯಕ್ಷರು .ಗ್ರಾಪಂ ರಿಪ್ಪನ್‌ಪೇಟೆ

Leave a Reply

Your email address will not be published. Required fields are marked *