Headlines

ರಿಪ್ಪನ್‌ಪೇಟೆಯಲ್ಲಿ ಇಂದು ಆಳ್ವಾಸ್ ನುಡಿಸಿರಿ ಹಬ್ಬ – ಭರದ ಸಿದ್ದತೆ : 15 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ|Ripponpet

ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಇಂದು ಆಳ್ವಾಸ್ ನುಡಿಸಿರಿ ಹಬ್ಬ ಆಯೋಜಿಸಲಾಗಿದೆ.ಈ ಕಾರ್ಯಕ್ರಮಕ್ಕೆ ಅಂದಾಜು 15 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.ಕಾರ್ಯಕ್ರಮದ ಸಿದ್ದತೆ ಭರದಿಂದ ಸಾಗಿದೆ. ಇಂದು ಸಂಜೆ ಸರಿಯಾಗಿ 5 ಗಂಟೆಗೆ ಪಟ್ಟಣದ ಸಾಗರ ರಸ್ತೆಯ ಚಿನ್ನೆಗೌಡ ಕ್ರೀಡಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಆಳ್ವಾಸ್ ಸಾಂಸ್ಕೃತಿಕ ಪ್ರದರ್ಶನದಲ್ಲಿ ಆಂಧ್ರದ ಜನಪದ, ಬಂಜಾರ ನೃತ್ಯ, ಮಣಿಪುರಿ ಸ್ಟಿಕ್‌ಡ್ಯಾನ್ಸ್, ಶಾಸ್ತ್ರೀಯ ನೃತ್ಯ, ನವದುರ್ಗೆ, ಮಲ್ಲಕಂಬ ಮತ್ತು ರೋಪ್ ಕಸರತ್ತು, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಣಿಪುರಿ ಧೋಲ್…

Read Full News

ಬಟ್ಟೆಮಲ್ಲಪ್ಪ ಸರ್ಕಲ್ ಗೆ ಬಂಗಾರಪ್ಪ ಸರ್ಕಲ್ ಎಂದು ನಾಮಕರಣ – ರಿಪ್ಪನ್‌ಪೇಟೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಆಟೊಗಳಿಗೆ ಉಚಿತ ಟಾಪ್ ವಿತರಣೆ|AAP

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಟ್ಟೆಮಲ್ಲಪ್ಪ ಗ್ರಾಮದ ಸರ್ಕಲ್ ಗೆ ನೂತನವಾಗಿ ಬಂಗಾರಪ್ಪ ಸರ್ಕಲ್ ಎಂದು ಅಧಿಕೃತವಾಗಿ ನಾಮಕರಣ ಮಾಡಲಾಯಿತು. ಹೊಸನಗರ ತಾಲೂಕ್ ಆಮ್ ಆದ್ಮಿ ಪಕ್ಷ ಘಟಕದ ವತಿಯಿಂದ ನೂತನ ಬಂಗಾರಪ್ಪ ಸರ್ಕಲ್ ಉದ್ಘಾಟಿಸಲಾಯಿತು. ಈ ಸಂಧರ್ಭದಲ್ಲಿ ಮಾತನಾಡಿದ ಆಮ್ ಆದ್ಮಿ ಪಕ್ಷದ ತಾಲೂಕ್ ಅಧ್ಯಕ್ಷ ಗಣೇಶ್ ಸೂಗೋಡು ಈ ದೇಶ ಕಂಡ ಅತ್ಯುತ್ತಮ ಮುಖ್ಯಮಂತ್ರಿ ಹಾಗೂ ಬಡವರ ಪಾಲಿನ ಆಶಾಕಿರಣವಾಗಿದ್ದ ದಿ|| ಬಂಗಾರಪ್ಪ ರವರ ಹೆಸರನ್ನು ಬಟ್ಟೆಮಲ್ಲಪ್ಪ ಸರ್ಕಲ್ ಗೆ ನಾಮಕರಣ ಮಾಡುವ ಮೂಲಕ…

Read Full News

ಕನ್ನಡ ಕಟ್ಟುವ ಕೆಲಸ ಎಲ್ಲಾರಿಂದಲೂ ಆಗಬೇಕು : ಹರತಾಳು ಹಾಲಪ್ಪ – ಗಣೇಶೋತ್ಸವದಲ್ಲಿ ಇರುವ ಐಕ್ಯತೆ ಕನ್ನಡ ಹಬ್ಬದಲ್ಲಿ ಯಾಕಿಲ್ಲ – ಕೆ ಎಸ್ ಪ್ರಶಾಂತ್|Ripponpet

ರಿಪ್ಪನ್‌ಪೇಟೆ : ಕನ್ನಡ ನಾಡು ನುಡಿ ಜಲ ಸಂಸ್ಕ್ರತಿಯನ್ನು ನಾಡಿನ ಪ್ರತಿಯೊಬ್ಬರು ಪ್ರೀತಿಸಿ ಬೆಳೆಸಿದಾಗ ಕನ್ನಡ ಭಾಷೆ ವಿಶ್ವ ಮಟ್ಟದಲ್ಲಿ ತೆರೆದುಕೊಳ್ಳುತ್ತದೆ. ಕನ್ನಡ ಕಟ್ಟುವ ಕೆಲಸ ಎಲ್ಲಾರಿಂದಲೂ ಆಗಬೇಕು ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ಇಂದು ಪಟ್ಟಣದ ಭೂಫಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಕಲಾ ಕೌಸ್ತುಭ ಕನ್ನಡ ಸಂಘ ಆಯೋಜಿಸಿದ್ದ 67ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ಕನ್ನಡಿಗರು ನಾಡು…

Read Full News

ಕಾಡುಕೋಣಗಳ ದಾಳಿಗೆ ಕೈಗೆ ಬಂದ ಫಸಲು ಪ್ರಾಣಿಗಳ ಪಾಲು – ರೈತರ ಆಂತಕ|wild corner

ರಿಪ್ಪನ್‌ಪೇಟೆ : ಆರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸವಾಪುರ ಗ್ರಾಮದಲ್ಲಿ ದಿಡೀರ್ ಪ್ರತ್ಯಕ್ಷವಾದ ಕಾಡುಕೋಣಗಳಿಂದಾಗಿ ರೈತರ ಭತ್ತದ ಗದ್ದೆ ಮತ್ತು ಅಡಿಕೆ ಬಾಳೆ ಕಾಡುಪ್ರಾಣಿಗಳ ಪಾಲಾಗುವಂತಾಗಿದ್ದು ರೈತರು ಅಂತಕಕ್ಕೆ ಕಾರಣವಾಗಿದೆ. ಮಳೆಗಾಲದಲ್ಲಿ ನಾಟಿ ಮಾಡಲಾದ ಭತ್ತದ ಫಸಲು ಕಟಾವಿಗೆ ಬಂದಿದ್ದು ರಾತ್ರಿ ಹೊತ್ತಿನಲ್ಲಿ ಕಾಡುಕೋಣ ಜಮೀನಿಗೆ ನುಗ್ಗಿ ಕಟಾವು ಮಾಡಲಾದ ಭತ್ತ ಭೂಮಿ ತಾಯಿಯ ಪಾಲಾಗುವಂತಾಗಿದೆ.ಅಲ್ಲದೆ ಆಡಿಕೆ ಗಿಡಗಳನ್ನು ಮುರಿದು ಹಾಕಿ ಬಾಳೆ ಸಹ ಕೈಗೆ ಸೀಗದಂತಾಗಿ ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಇAದು…

Read Full News

ಆತ್ಮೀಯ ಎಸ್ ಪಿ ಸರ್…. ನನಗೆ ಮದುವೆಯಾಗಲು ಹುಡುಗಿ ಹುಡುಕಿಕೊಡಿ – ಯುವಕನೊಬ್ಬ ಶಿವಮೊಗ್ಗದ ಎಸ್ ಪಿ ಗೆ ಬರೆದ ಪತ್ರ ವೈರಲ್|SP

ಜೀವನದಲ್ಲಿ ಮದುವೆ ಎನ್ನುವುದು ಒಂದು ಅತ್ಯಮೂಲ್ಯ ಘಟ್ಟ,ಸಾಮಾನ್ಯವಾಗಿ ವಧು ಬೇಕಾದರೆ ಮದುವೆ ಬ್ರೋಕರ್ ಬಳಿಯೋ, ಶಾದಿ ಡಾಟ್ ಕಾಂ  ಅಥವಾ ಮಾಧ್ಯಮಗಳಲ್ಲಿ ಜಾಹೀರಾತು ಕೊಡಬಹುದು,ಇನ್ನೂ ಮುಂದುವರೆದು ವಧೂವರರ ಸಮಾವೇಶಗಳಿಗೆ ಹೋಗಬಹುದು. ಆದರೆ ಇಲ್ಲೊಬ್ಬ ಭೂಪ ಶಿವಮೊಗ್ಗದ ಜಿಲ್ಲಾ ರಕ್ಷಣಾಧಿಕಾರಿ(SP)ಗೆ ಪತ್ರವನ್ನು ಬರೆದು ವಧು ಹುಡುಕಿ ಕೊಡಿ ಎಂದು ಮನವಿ ಮಾಡಿದ್ದಾರೆ. ಅದೂ ಗೊಲ್ಲ ಜಾತಿಯ ಹುಡುಗಿಯೇ ಬೇಕೆಂದು ಕೂಡ ಕಂಡಿಷನ್‌ ಕೂಡ ಹಾಕಿದ್ದಾನೆ. ನ.10 ರಂದು ಭದ್ರಾವತಿ ನಿವಾಸಿ ಪ್ರವೀಣ್ ಎಂಬಾತ ಎಸ್ಪಿ ಕಚೇರಿಯ ಟಪಾಲ್ ಸೆಕ್ಷನ್…

Read Full News

ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾವಳಿಗೆ ಆಯ್ಕೆಯಾದ ಕು.ಶ್ರೇಯಾ ಮತ್ತು ಕು.ಶ್ರಾವ್ಯ|Kabbadi

ರಿಪ್ಪನ್‌ಪೇಟೆ : ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿಯರಾದ ಶ್ರೇಯಾ ಬಿ ಆರ್ ನಾಯಕ್ ಮತ್ತು ಶ್ರಾವ್ಯ ಹೆಚ್ ಓ ರವರು ಕಬ್ಬಡಿ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನ 22 ರ ಮಂಗಳವಾರ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ನಡೆದ ರಾಜ್ಯಮಟ್ಟದ 14 ವರ್ಷ ವಯೋಮಿತಿಯೊಳಗಿನ ಬಾಲಕಿಯರ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಮುಂದಿನ ತಿಂಗಳು ಪಂಜಾಬ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾವಳಿಗೆ ಶ್ರೀ ಶಾರದ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿಯರಾದ ಶ್ರೇಯಾ…

Read Full News

ಬಹುದಿನಗಳ ಬೇಡಿಕೆಯ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಹರತಾಳು ಹಾಲಪ್ಪ|kenchanala

ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊನ್ನಕೊಪ್ಪ ಮತ್ತು ಮಾಣಿಕೆರೆ ಮಸರೂರು ಸಂಪರ್ಕದ 60 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಶಾಸಕ ಹಾಲಪ್ಪ ಹರತಾಳು ಚಾಲನೆ ನೀಡಿದರು. ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿ, ಹಳ್ಳಿ ಹಳ್ಳಿಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ದಿ ಸಾಧ್ಯವಾಗಿದ್ದು ಮೊದಲ ಆಧ್ಯತೆಯಾಗಿ ಗ್ರಾಮಗಳ ಅಭಿವೃದ್ದಿಗೆ ರಾಜ್ಯ ಮತ್ತು ಕೇಂದ್ರ ಸರ್ಕರ ಹೆಚ್ಚು ಒತ್ತು ನೀಡಿವೆ. ಬಹುದಿನಗಳ ಬೇಡಿಕೆಯನ್ನಾದರಿಸಿ ಅಧ್ಯತೆಯ ಮೇಲೆ ಕ್ಷೇತ್ರದ ಕೆರೆಹಳ್ಳಿ ಹೋಬಳಿಯ ಮಸರೂರು, ಮಾಣಿಕೆರೆ ಮತ್ತು ಹೊನ್ನಕೊಪ್ಪ, ಕೆಂಚನಾಲ…

Read Full News

ರಿಪ್ಪನ್‌ಪೇಟೆ : ಅದ್ಧೂರಿ ಕನ್ನಡ ರಾಜ್ಯೋತ್ಸವ ಸಂಭ್ರಮ – ಮೆರವಣಿಗೆಗೆ ಮೆರುಗು ನೀಡಿದ ಎತ್ತಿನಗಾಡಿ|Ripponpet

ರಿಪ್ಪನ್‌ಪೇಟೆ: ಪಟ್ಟಣದ ಕಲಾ ಕೌಸ್ತುಭ ಕನ್ನಡ ಸಂಘ ಶುಕ್ರವಾರ  ಆಯೋಜಿಸಿದ್ದ   67ನೇ ಕರ್ನಾಟಕ  ರಾಜ್ಯೋತ್ಸವದ ಅದ್ಧೂರಿ ಕನ್ನಡ  ಸಂಭ್ರಮ ಆಕರ್ಷಕ ಜಾನಪದ ಕಲಾ ಪ್ರಕಾರ ಗಳು ಹಾಗೂ ಜಟಕಾ ಬಂಡಿ ಭವ್ಯ ಮೆರವಣಿಗೆಗೆ ಮೆರಗು ನೀಡಿತ್ತು . ಕಲಾ ಕೌಸ್ತುಭ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ರಾಮಚಂದ್ರ (ಗ್ಯಾರೇಜ್ ರಾಮು) ಕನ್ನಡ ಧ್ವಜಾರೋಹಣ ನೆರವೇರಿಸಿದರು. ಬೆಳಿಗ್ಗೆ ಭುವನೇಶ್ವರಿ ದೇವಿಯ ಭವ್ಯ ಶೋಭಾ ಯಾತ್ರೆಗೆ ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ನಿರೂಪ್ ಕುಮಾರ್ ಚಾಲನೆ ನೀಡಿದರು.ಈ ಮೆರವಣಿಗೆಯಲ್ಲಿ…

Read Full News

ನಾಳೆ ಶಿವಮೊಗ್ಗಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ|CM

ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ನಾಳೆ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ.‌ ಮಧ್ಯಾಹ್ನದ ವೇಳೆಗೆ ಶಿವಮೊಗ್ಗಕ್ಕೆ ಆಗಮಿಸಿ ಸಂಜೆ ಬೆಂಗಳೂರಿಗೆ ನಿರ್ಗಮಿಸುತ್ತಿದ್ದಾರೆ. ನವೆಂಬರ್ 25 ರ ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹೊರಟು ಮಧ್ಯಾಹ್ನ 1.50 ಕ್ಕೆ ಶಿವಮೊಗ್ಗದ ಸಕ್ರ್ಯೂಟ್ ಹೌಸ್ ಹೆಲಿಪ್ಯಾಡ್ ತಲುಪುವರು. ನಂತರ ಬಿಜೆಪಿ ವತಿಯಿಂದ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಜೆ 4.15 ಕ್ಕೆ ಸಕ್ರ್ಯೂಟ್ ಹೌಸ್ ಹೆಲಿಪ್ಯಾಡ್‍ನಿಂದ ಹೊರಟು ಸಂಜೆ 5.35 ಕ್ಕೆ ಬೆಂಗಳೂರಿನ ಹೆಚ್‍ಎಎಲ್ ವಿಮಾನ ನಿಲ್ದಾಣ ತಲುಪುವರು…

Read Full News

ಜನಾಕ್ರೋಶ ಪಾದಯಾತ್ರೆ ಡಬಲ್ ಇಂಜಿನ್ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿದೆ : ಕಲಗೋಡು ರತ್ನಾಕರ್|Congress

ರಿಪ್ಪನ್‌ಪೇಟೆ : ಇದೇ 28 ರಂದು ಅಯನೂರಿನಿಂದ ಶಿವಮೊಗ್ಗಕ್ಕೆ ಹತ್ತು ಹಲವು ಸಮಸ್ಯೆಗಳ ಪರಿಹಾರಕ್ಕಾಗಿ ಜನಾಕ್ರೋಶ ಪಾದಯಾತ್ರೆ ಹಾಗೂ ಬೃಹತ್ ಸಮಾವೇಶವನ್ನು ಕೇಂದ್ರ ಮತ್ತು ರಾಜ್ಯದ ಡಬಲ್ ಇಂಜಿನ್ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಲಿದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕಲಗೋಡು ರತ್ನಾಕರ್ ಹೇಳಿದರು. ಉಳುವವನೇ ಹೊಲದೊಡೆಯ ಹೋರಾಟದ ಹಿನ್ನಲೆಯ ರಾಜ್ಯದ ಹಿರಿಯ ಸಮಾಜವಾದಿ ನಾಯಕ ಕಾಗೋಡು ತಿಮ್ಮಪ್ಪನವರ ಅಧ್ಯಕ್ಷತೆಯಲ್ಲಿ ನಡೆಯುವ ಜನಾಕ್ರೋಶ ಪಾದಯಾತ್ರೆ  ಕುರಿತು ಬೆಳ್ಳೂರು, ಅರಸಾಳು ಹಾಗೂ ಕೆಂಚನಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ…

Read Full News

ಸಾವಿರಾರು ಗರ್ಭಿಣಿಯರ ಪಾಲಿನ ಮಹಾದೇವತೆ ರಿಪ್ಪನ್‌ಪೇಟೆಯ ಸೂಲಗಿತ್ತಿ ಜಯಮ್ಮ- ಸಾವಿರಾರು ಹೆರಿಗೆ ಮಾಡಿಸಿರುವ ಗಟ್ಟಿಗಿತ್ತಿಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯಿಂದ ಸನ್ಮಾನ|Ripponpet

ರಿಪ್ಪನ್‌ಪೇಟೆ : ಅದೆಷ್ಟೋ ಜನರ ಪಾಲಿಗೆ ಆಕೆ ಮಹಾತಾಯಿ. ಸಾವಿರಾರು ಪುಟ್ಟ ಕಂದಮ್ಮಗಳಿಗೆ ಕೈಯೊಡ್ಡಿದ ಮಹಾಮಾತೆ. ಹೌದು ಅವರೇ ನಮ್ಮ ರಿಪ್ಪನ್‌ಪೇಟೆ ಪಟ್ಟಣದ ಹೆಮ್ಮೆಯ ಸೂಲಗಿತ್ತಿ ಜಯಲಕ್ಷ್ಮಿ. ಆಪತ್ಕಾಲದಲ್ಲಿ ಗರ್ಭಿಣಿ ಮಹಿಳೆಯರ ಸಹಾಯಕ್ಕೆ ಬರುವ ಈ ಸೂಲಗಿತ್ತಿಯ ಹೆಸರು ಜಯಲಕ್ಷ್ಮಿ,ಇವರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸೂಲಗಿತ್ತಿ ಜಯಮ್ಮ ಅಂತಾನೇ ಫೇಮಸ್​. ಸರಿಯಾಗಿ ವಿದ್ಯುತ್​​, ರಸ್ತೆ, ಆಸ್ಪತ್ರೆ ಇಲ್ಲದ ಕಾಲದಲ್ಲಿ ಕಾಡು-ಮೇಡು ದಾಟಿ ಪ್ರಸವ ವೇದನೆ ನಿವಾರಿಸುತ್ತಿದ್ದ ಗಟ್ಟಿಗಿತ್ತಿ. ಜಯಮ್ಮ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಹೊಸನಗರ…

Read Full News

ಸಾಗರ : ಹರತಾಳು ಹಾಲಪ್ಪರ ಜಾಗ ಒತ್ತುವರಿ ಮಾಡಲು ಬಿಜೆಪಿ ಕಡೆ ಮುಖ ಮಾಡಿದರಾ ಪ್ರಶಾಂತ್ !?Sagara

ಹರತಾಳು ಹಾಲಪ್ಪರ ಜಾಗ ಒತ್ತುವರಿ ಮಾಡಲು ಬಿಜೆಪಿ ಕಡೆ ಮುಖ ಮಾಡಿದ್ರಾ ಕೆ ಎಸ್ ಪ್ರಶಾಂತ್ !? ಸಾಗರ : ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ಪಕ್ಷಾಂತರ ಪರ್ವ ಪ್ರಾರಂಭವಾಗಿದೆ. ಕಳೆದ ವಾರ ಶಿಕಾರಿಪುರದ ಜೆಡಿಎಸ್ ಮುಖಂಡ ಹೆಚ್ ಟಿ ಬಳಿಗಾರ್ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಈಗ ಮಾಜಿ ಸಂಸದ ಕೆ ಜಿ ಶಿವಪ್ಪ ಅವರ ಸುಪುತ್ರ ಕೆ ಎಸ್ ಪ್ರಶಾಂತ್ ಅವರು ಸಂಘ ಪರಿವಾರವಾದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕ್ರಮದಲ್ಲಿ…

Read Full News

ಕಸ್ತೂರಿ ಕನ್ನಡ ಸಂಘದ ಆರೋಪ ರಾಜಕೀಯ ಪ್ರೇರಿತ – ನಿರೂಪ್ ಕುಮಾರ್|Ripponpet

ರಿಪ್ಪನ್‌ಪೇಟೆ : ಪಟ್ಟಣದ ಕಸ್ತೂರಿ ಕನ್ನಡ ಸಂಘದವರು ಕಳೆದ 28 ವರ್ಷಗಳಿಂದ ನಾಡು- ನುಡಿ ಜಲಕ್ಕೆ ಶ್ರಮಿಸಿದ ಕಲಾ ಕೌಸ್ತುಭ ಕನ್ನಡ ಸಂಘದ ಮೇಲೆ ಆರೋಪಿಸಿರುವುದು ರಾಜಕೀಯ ಪ್ರೇರಿತ ಎಂದು ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ನಿರೂಪ್ ಕುಮಾರ್ ಹೇಳಿದರು.   ಇಂದು ಪಟ್ಟಣದ ಕುವೆಂಪು ಸಭಾಂಗಣದಲ್ಲಿ ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು‌ ಕಸ್ತೂರಿ ಕನ್ನಡ ಸಂಘದವರು ಇಂದು ಪತ್ರೀಕಾ ಗೋಷ್ಟಿ ನಡೆಸಿ ಕಲಾ ಕೌಸ್ತುಭ ಕನ್ನಡ ಸಂಘವು ಅನ್ಯ ಭಾಷೆಗಳ ವೈಭವಿಕರಿಸುತ್ತಿದೆ ಎಂದು ಹೇಳಿರುವುದು‌…

Read Full News

ರಿಪ್ಪನ್‌ಪೇಟೆ : ಮದನ್ ಗೋಪಾಲ್ ವರದಿ ಯಥಾವತ್ ಅನುಷ್ಟಾನಕ್ಕೆ ಮಧು ಬಂಗಾರಪ್ಪ ಆಗ್ರಹ|Congress

ರಿಪ್ಪನ್‌ಪೇಟೆ;-ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರ ಅವಧಿಯಲ್ಲಿ ಬಗರ್‌ಹುಕುಂ ರೈತರ ಮತ್ತು ಶರಾವತಿ ಮುಳಗಡೆ ಸಂತ್ರಸ್ಥ ರೈತರಿಗೆ ಭೂ ಒಡೆತನ ನೀಡುವ ಮಧನ್‌ಗೋಪಾಲ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ ಜಾರಿಗೊಳಿಸಬೇಕು ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧುಬಂಗಾರಪ್ಪ ಅಗ್ರಹಿಸಿದರು. ರಿಪ್ಪನ್‌ಪೇಟೆಯ ಜ್ಯೋತಿ ಮಾಂಗಲ್ಯ ಮಂದಿರದಲ್ಲಿ ಅಯೋಜಿಸಲಾದ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಹಕ್ಕು ಪತ್ರ ಹಾಗೂ ಬಗರ್‌ಹುಕುಂ ರೈತರಿಗೆ ಹಕ್ಕು ಪತ್ರ ಸೇರಿದಂತೆ ಮಲೆನಾಡಿ ರೈತರ ಜನಾಕ್ರೋಶ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ…

Read Full News

ನವೆಂಬರ್ ತಿಂಗಳಿನಲ್ಲಿ ಅನ್ಯಭಾಷೆಗಳ ವೈಭವೀಕರಣ ಸಲ್ಲ – ಮೆಣಸೆ ಆನಂದ್|Ripponpet

ನವೆಂಬರ್ ತಿಂಗಳಲ್ಲಿ ಅನ್ಯ ಭಾಷೆಗಳ ವೈಭವೀಕರಣ ಸಲ್ಲ ರಿಪ್ಪನ್‌ಪೇಟೆ : ಕನ್ನಡ ಕಲರವದ ತಿಂಗಳಾದ ನವೆಂಬರ್ ನಲ್ಲಿ ಕನ್ನಡದ ಕಂಪು ರಾಜ್ಯಾದ್ಯಂತ ಮೇಳೈಸುತ್ತಿರುತ್ತದೆ.ಇಂತಹ ಸಂಧರ್ಭದಲ್ಲಿ ಕನ್ನಡ ಪರ ಸಂಘಟನೆಗಳು ಅನ್ಯ ಭಾಷೆಗಳ ವೈಭವಿಕರಿಸಿದರೆ ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಬಂದಂತಾಗುತ್ತದೆ ಎಂದು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಆನಂದ್ ಮೆಣಸೆ ಹೇಳಿದರು. ಇಂದು ಪಟ್ಟಣದ ಕುವೆಂಪು ಸಭಾಂಗಣದಲ್ಲಿ ಪತ್ರೀಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನೆಲ ಜಲ ಉಳಿವಿಗಾಗಿ ಹೋರಾಟ ಮಾಡುವುದು ಎಲ್ಲಾ ಕನ್ನಡ ಸಂಘಗಳ ಉದ್ದೇಶ. ಕಲಾ ಕೌಸ್ತುಭ…

Read Full News

ರಿಪ್ಪನ್‌ಪೇಟೆಯಲ್ಲಿ ನ.25,26 ರಂದು ಕಲಾಕೌಸ್ತುಭ ಕನ್ನಡ ಸಂಘದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ-ನ.27ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮಕ್ಕೆ ಭರದ ಸಿದ್ಧತೆ

ರಿಪ್ಪನ್‌ಪೇಟೆ : ಇಲ್ಲಿನ ಕಲಾಕೌಸ್ತುಭ ಕನ್ನಡ ಸಂಘದ 29ನೇ ವರ್ಷದ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನವೆಂಬರ್ 25 ಮತ್ತು 26 ರಂದು ಭೂಫಾಳಂ ಸಭಾ ಭವನದಲ್ಲಿ ಹಾಗೂ ನವೆಂಬರ್ 27 ರಂದು ಸಂಜೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜ್ ಚಿನ್ನೇಗೌಡ ಕ್ರೀಡಾಂಗಣದಲ್ಲಿ “ಆಳ್ವಾಸ್‌ ಸಾಂಸ್ಕೃತಿಕ ವೈಭವ’’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಲಾಕೌಸ್ತುಭ ಕನ್ನಡ ಸಂಘದ ಕಾರ್ಯದರ್ಶಿ ರವಿಚಂದ್ರ ಮತ್ತು ಆಳ್ವಾಸ್ ನುಡಿಸಿರಿ ವಿರಾಸತ್ ಸಂಚಾಲಕ ಎನ್.ಸತೀಶ್ ಜಂಟಿ ಪತ್ರೀಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ನವೆಂಬರ್ 25…

Read Full News

ಅತ್ತೆಯ ಸಾವಿನ ಸುದ್ದಿ ತಿಳಿದು ಅಳಿಯ ಹೃದಯಾಘಾತದಿಂದ ನಿಧನ|sagara

ಹೃದಯಾಘಾತದಿಂದ ಸೋದರತ್ತೆಯ ಮೃತಪಟ್ಟ ಸುದ್ದಿ ತಿಳಿದು ಅಳಿಯ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿ ನಡೆದಿದೆ. ಲಕ್ಷಮ್ಮ(58) ಮತ್ತು ಅವರ ಅಳಿಯ ಗುಲ್ಫತ್ ಸಿಂಗ್(45) ಮೃತಪಟ್ಟರಾಗಿದ್ದಾರೆ. ಬೆಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಹೊರಟಿದ್ದ ಲಕ್ಷಮ್ಮರನ್ನು ಗುಲ್ಫತ್ ಸಿಂಗ್ ಲಿಂಗನಮಕ್ಕಿಯಿಂದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದರು. ಬಸ್ಸು ಆನಂದಪುರ ಸಮೀಪ ತಲುಪಿದಾಗ ಲಕ್ಷಮ್ಮರಿಗೆ ಹೃದಯಾಘಾತಕ್ಕೀಡಾಗಿದ್ದು, ಅವರು ಅಲ್ಲೇ ಮೃತಪಟ್ಟರೆನ್ನಲಾಗಿದೆ. ಈ ವಿಚಾರವನ್ನು ಬಸ್ ನಿರ್ವಾಹಕ ಲಕ್ಷಮ್ಮ ಸಂಬಂಧಿಕರಿಗೆ ಕರೆ ಮಾಡಿ ತಿಳಿಸಿದ್ದಾನೆ. ಈ ಸುದ್ದಿಯನ್ನು ಸಂಬಂಧಿಕರು ಕರೆ ಮಾಡಿ…

Read Full News

ಮೆಗ್ಗಾನ್ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ – ಓರ್ವ ವಶಕ್ಕೆ|Assault on doctor

ಮೆಗ್ಗಾನ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ರೋಗಿಯ ಕಡೆಯವರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಹಿನ್ನಲೆಯಲ್ಲಿ ಹಲ್ಲೆ ನಡೆಸಿದ ವ್ಯಕ್ತಿ ಮಮ್ತಕೀಮ್ ಎಂಬಾತನನ್ನು ದೊಡ್ಡಪೇಟೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಲವು ದಿನಗಳ ಹಿಂದೆ ಆಯನೂರಿನ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅಬ್ದುಲ್ ರಶೀದ್ (65) ಇವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಉನ್ನತ ಚಿಕಿತ್ಸೆಗಾಗಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.ನಂತರ ಅವರನ್ನು ಮತ್ತೆ ಮೆಗ್ಗಾನ್ ಗೆ ದಾಖಲಿಸಿದ್ದರು ಆದರೆ ಭಾನುವಾರ ರಾತ್ರಿ ಅಬ್ದುಲ್ ರಶೀದ್…

Read Full News

ನಿದ್ದೆ ಬರುತ್ತಿಲ್ಲಾ ಎಂದು ಪೊಲೀಸ್ ಇಲಾಖೆಯ 112 ಗೆ ಕರೆ ಮಾಡಿದ ಭೂಪ – ಒಂದು ಗೊರಕೆಯ ಸ್ವಾರಸ್ಯಕರ ಕಥೆ!!! ಇಲ್ಲಿ ನೋಡಿ….

ತೀರ್ಥಹಳ್ಳಿ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಆಪತ್ಕಾಲದಲ್ಲಿ ಡಯಲ್ 112 ಹಾಗೂ 100 ಸೇವೆ ಒದಗಿಸಿದೆ.ಆದರೆ ಇಲ್ಲೊಬ್ಬ ಭೂಪ ರಾತ್ರಿ ನಿದ್ದೆ ಬರ್ತಿಲ್ಲಾ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ಹೌದು, ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಮಾಳೂರು ಪಟ್ಟಣ ಈ ವಿಚಿತ್ರ ಪ್ರಕರಣಕ್ಕೆ ಸಾಕ್ಷಿಯಾಗಿದೆ. ‘ನಿದ್ದೆ ಬರ್ತಿಲ್ಲಾ ಸಾರ್..’ ಎಂದು ಮಧ್ಯರಾತ್ರಿ ತುರ್ತು ಸೇವೆ 112 ನಂಬರ್‌ಗೆ ಇಂಥದ್ದೊಂದು ಕರೆ ಬಂದಾಗ ಪೊಲೀಸರು ತಲೆ ಚಚ್ಚಿಕೊಳ್ಳುವುದೊಂದೇ ಬಾಕಿ….

Read Full News

ಕನ್ನಡ ಭಾಷೆಗೆ ಮಡಿವಂತಿಕೆಯ ಬೇಲಿ ಬೇಡ – ಸರ್ಫ಼್ರಾಜ್ ಚಂದ್ರಗುತ್ತಿ|Ripponpet

ರಿಪ್ಪನ್‌ಪೇಟೆ : ಇಡೀ ಜಗತ್ತಿನಲ್ಲಿ ಕನ್ನಡ ತೆರೆದುಕೊಳ್ಳಬೇಕಾದರೆ ಕನ್ನಡಕ್ಕೆ ಮಡಿವಂತಿಕೆಯ ಬೇಲಿ ಬೇಡ ಎಂದು ಸಾಹಿತಿಗಳು ಹಾಗೂ ಉಪನ್ಯಾಸಕರಾದ ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು. ಪಟ್ಟಣದಲ್ಲಿ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ರಿಪ್ಪನ್ ಪೇಟೆ ರೋಟರಿ ಕ್ಲಬ್ ಇವರ ಸಹಯೋಗದಲ್ಲಿ ಶನಿವಾರ ಸಂಜೆ ನಡೆದ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಪ್ರಸ್ತುತ ಆಧುನಿಕ ಕಾಲದಲ್ಲಿ ಸಂಶೋಧನೆ, ವೈದ್ಯಕೀಯ ತಂತ್ರಜ್ಞಾನದಲ್ಲಿ ಕನ್ನಡ ಭಾಷೆ ಸರಳವಾಗಿ ಬಳಸುವಂತಾಗಬೇಕು. ಹೊಸ ಕಾಲಕ್ಕೆ ಕನ್ನಡ ಕಟ್ಟುವ ಕೆಲಸವಾಗಬೇಕು,ಕನ್ನಡ ಭಾಷೆಯಲ್ಲಿ…

Read Full News

ವಿಸ್ತಾರ ನ್ಯೂಸ್ ವಿಸ್ತಾರವಾಗಿ ಬೆಳೆಯಲಿ : ಹರತಾಳು ಹಾಲಪ್ಪ|Vistara

ರಿಪ್ಪನ್‌ಪೇಟೆ : ಸರ್ಕಾರದ ನಾಲ್ಕು ಅಂಗಗಳಲ್ಲಿ ನಾಲ್ಕನೆಯ ಅಂಗವಾದ ಮಾದ್ಯಮ ರಂಗಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಈಗಿನ ಕಾಲಘಟ್ಟದಲ್ಲಿ ಮಾದ್ಯಮಗಳು ನಿಖರ ಸುದ್ದಿ ಮತ್ತು ಜ್ಞಾನವನ್ನು ಪ್ರಸರಿಸುವ ಕಾರ್ಯವನ್ನು ಕೈಗೊಳ್ಳಬೇಕಾಗಿದೆ.ಆ ನಿಟ್ಟಿನಲ್ಲಿ ವಿಸ್ತಾರ ಚಾನಲ್ ಗಮನ ಹರಿಸಿ ಒಳ್ಳೆಯ ಸುದ್ದಿ ಮಾದ್ಯಮವಾಗಿ ಹೊರಬರಲಿ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.  ಪಟ್ಟಣದ ಆಶ್ರೀತಾ ಸಭಾಭವನದಲ್ಲಿ ವಿಸ್ತಾರ ವಾಹಿನಿ ಕನ್ನಡ ಸಂಭ್ರಮ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಬದಲಾದ ದಿನಮಾನಗಳಲ್ಲಿ ಎಲ್ಲವೂ ಕಲುಷಿತಗೊಂಡಿದೆ ಎನ್ನುವ…

Read Full News

ಅಮ್ಮನ ಘಟ್ಟ ಜೇನುಕಲ್ಲಮ್ಮ ದೇವಸ್ಥಾನವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿಪಡಿಸಲಾಗುವುದು : ಹಾಲಪ್ಪ ಹೆಚ್ ಹರತಾಳು|Halappa

ರಿಪ್ಪನ್‌ಪೇಟೆ : ಪುರಾಣ ಪ್ರಸಿದ್ಧವಾದ ಕೋಡೂರಿನ ಜೇನುಕಲ್ಲಮ್ಮ ಘಟ್ಟವನ್ನು ಪ್ರೇಕ್ಷಣೀಯ ಸ್ಥಳವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ಅಮ್ಮನಘಟ್ಟದ ಜೇನುಕಲ್ಲಮ್ಮ ಸಮುದಾಯ ಭವನದಲ್ಲಿ ಶನಿವಾರ ಮುಜರಾಯಿ ಮತ್ತು ಅಭಿವೃದ್ಧಿ ಸಮಿತಿಗಳ ಸಮನ್ವಯ ಸಭೆಯಲ್ಲಿ ಮಾತನಾಡಿ ದೇವಿಯ ದೇವಸ್ಥಾನವನ್ನು ಅಭಿವೃದ್ಧಿ ಪಡಿಸುವಲ್ಲಿ ಈ ಹಿಂದಿನ ಸಮಿತಿ ಕಾರ್ಯ ಪ್ರೌವೃತ್ತವಾಗಿತ್ತು. ಈಗಿನ ನೂತನ ಸಮಿತಿಯು ಅಭಿವೃದ್ಧಿಯ ಮುಂದಾಲೋಚನೆಯನ್ನು ಹೊಂದಿದ್ದು, ಯಾವುದೇ ಭಿನ್ನಾಭಿಪ್ರಾಯಗಳಿಲ್ಲದಂತೆ ಒಂದುಗೂಡಿ ಅಭಿವೃದ್ಧಿ ಕೆಲಸ ನಿರ್ವಹಿಸಲು ಸಲಹೆ ನೀಡಿದ್ದೇನೆ. ಸರ್ಕಾರದ…

Read Full News

ನಾಳೆ (20-11-2022) ರಿಪ್ಪನ್‌ಪೇಟೆಯಲ್ಲಿ ವಿಸ್ತಾರ ಕನ್ನಡ ಸಂಭ್ರಮ|vistara

ರಿಪ್ಪನ್‌ಪೇಟೆ : ನಾಡಿನ ಜನತೆಯ ನಿರೀಕ್ಷೆಯ “ವಿಸ್ತಾರ” ನ್ಯೂಸ್ ಚಾನೆಲ್ ನವೆಂಬರ್ 6 ರಂದು ಲೋಕಾರ್ಪಣೆಗೊಂಡಿದೆ. ಕನ್ನಡ ನಾಡು, ನುಡಿಗೆ ಸದಾ ಮಿಡಿಯುವ ಜೊತೆಗೆ “ನಿಖರ” “ಜನಪರ” ಧ್ಯೇಯದೊಂದಿಗೆ‌ ವಿಸ್ತಾರ ನ್ಯೂಸ್” ಕನ್ನಡಿಗರ ಮನೆ-ಮನ ತಲುಪಿದೆ. ವಿಸ್ತಾರ ಬಳಗವು ರಾಜ್ಯಾದ್ಯಂತ “ವಿಸ್ತಾರ ಕನ್ನಡ ಸಂಭ್ರಮ” ಕಾರ್ಯಕ್ರಮ ಆಯೋಜಿಸುತ್ತಿದೆ. ಹೊಸನಗರ ತಾಲ್ಲೂಕಿನ ವಿಸ್ತಾರ ಕನ್ನಡ ಸಂಭ್ರಮ ನವೆಂಬರ್ 20ರ ಭಾನುವಾರ ಬೆಳಗ್ಗೆ 10:00 ಕ್ಕೆ ಅಶ್ರಿತಾ ಸಭಾಭವನ ಹೊಸನಗರ ರಸ್ತೆ ರಿಪ್ಪನ್‌ಪೇಟೆ ಇಲ್ಲಿ ನಡೆಯಲಿದೆ. ಬೆಳಗ್ಗೆ 10:30 ಪ್ರಖ್ಯಾತ…

Read Full News

ಬಿಜೆಪಿ ತೆಕ್ಕೆಗೆ ಜಾರಿದ ಶಿಕಾರಿಪುರ ಜೆಡಿಎಸ್ ಅಭ್ಯರ್ಥಿ ಹೆಚ್ ಟಿ ಬಳಿಗಾರ್ |shikaripura

ಶಿಕಾರಿಪುರದಲ್ಲಿ ಜೆಡಿಎಸ್​ ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿಯನ್ನೇ ಬಿಜೆಪಿ ತನ್ನತ್ತಾ ಸೆಳೆದು ಜೆಡಿಎಸ್​ಗೆ ಶಾಕ್ ನೀಡಿದೆ.  ಶಿಕಾರಿಪುರದ ಅಭ್ಯರ್ಥಿಯಾಗಿದ್ದ ಹೆಚ್.ಟಿ. ಬಳಿಗಾರ್ ಕಳೆದ ಎರಡು ಬಾರಿ ಜೆಡಿಎಸ್​ನಿಂದ ಸ್ಪರ್ಧಿಸಿದ್ದರು.ಆದರೆ ಈ ಬಾರಿ ಬಿಜೆಪಿ ಹೆಚ್ ಟಿ ಬಳಿಗಾರ್​ರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ನೂರಾರು ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಅಧಿಕೃತವಾಗಿ ಚಳಿಗಾರ್ ಬಿಜೆಪಿಯನ್ನು ಸೇರಿದ್ದಾರೆ.  ಈ ವೇಳೆ ಗೃಹಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಉಪಸ್ಥಿತರಿದ್ದರು. ಚುನಾವಣೆಗೆ ನಾಲ್ಕೈದು ತಿಂಗಳಿರುವಾಗಲೇ…

Read Full News

ತೀರ್ಥಹಳ್ಳಿಯಲ್ಲಿ ಕೋರ್ಟ್ ಕಟ್ಟಡವನ್ನೇ ಗೋಡೌನ್ ಮಾಡಿಕೊಂಡಿದ್ದ ಗುಜರಿ ವ್ಯಾಪಾರಿ – ಆರೋಪಿಗೆ ನ್ಯಾಯಂಗ ಬಂಧನ|Thirthahalli

ನ್ಯಾಯಾಲಯದ ಕಟ್ಟಡವನ್ನು ಗೋಡೌನ್ ಮಾಡಿ ಕೊಂಡಿದ್ದ ವ್ಯಕ್ತಿಯೊಬ್ಬನಿಗೆ ತೀರ್ಥಹಳ್ಳಿ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿ, ಬಿಗ್ ಶಾಕ್ ನೀಡಿರುವಂತ ಘಟನೆ ನಡೆದಿದೆ. ತೀರ್ಥಹಳ್ಳಿ ಪಟ್ಟಣದ ಶಿಬಿನಕೆರೆಯಲ್ಲಿ ಹೊಸ ನ್ಯಾಯಾಲಯವಾದ ಪ್ರಯುಕ್ತ ಸೊಪ್ಪು ಗುಡ್ಡೆಯಲ್ಲಿರುವ ಹಳೆ ನ್ಯಾಯಾಲಯದ ಕಟ್ಟಡದಲ್ಲಿ ಬೀಗಗಳನ್ನು ಹಾಕಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿತ ಮತ್ತು ನಿಷೇಧಿತ ಪ್ರದೇಶವೆಂದು ಕಟ್ಟಡಗಳಿಗೆ ಬೀಗಗಳನ್ನು ಹಾಕಲಾಗಿತ್ತು. ನ್ಯಾಯಾಲಯದ ಕಟ್ಟಡದ ಆವರಣದಲ್ಲಿ ಅನೇಕರು ತಮ್ಮ ಕಾರುಗಳನ್ನು ಅಕ್ರಮ ಪಾರ್ಕಿಂಗ್ ಮಾಡಿಕೊಂಡಿದ್ದರು. ಇದಲ್ಲದೆ ಸೊಪ್ಪುಗುಡ್ಡೆ ಎರಡನೇ ಕ್ರಾಸ್ ನಿವಾಸಿ ಮೇರಾ ರಾಮ್ ಬಿನ್…

Read Full News

ಸಮಾಜಕ್ಕೆ ನಿಖರ ಸುದ್ದಿ ಮತ್ತು ಜ್ಞಾನವನ್ನು‌ ಪ್ರಸರಿಸುವ ವಾಹಿನಿಗಳ ಅಗತ್ಯತೆ ಇದೆ – ಶಾಸಕ ಹರತಾಳು ಹಾಲಪ್ಪ|sagara

ಸಾಗರ : ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸುದ್ದಿ‌ಮಾಧ್ಯಮಗಳು ಪೈಪೋಟಿಗೆ ಬಿದ್ದು ಸುದ್ದಿಗಳನ್ನು ನೀಡುವುದರ ಜೊತೆಗೆ ಸಮಾಜಕ್ಕೆ ನಿಖರ ಸುದ್ದಿ ಮತ್ತು ಜ್ಞಾನವನ್ನು ಪ್ರಸರಿಸುವ ಅಗತ್ಯ ಇದೆ. ಜನರು ವಾಹಿನಿಗಳ ಮೇಲೆ ಇರಿಸಿಕೊಂಡಿರುವ ನಂಬಿಕೆ ಶಾಶ್ವತವಾಗಿ ಉಳಿಸಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ವಿಸ್ತಾರ ಚಾನಲ್ ಗಮನ ಹರಿಸಬೇಕು ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.  ಪಟ್ಟಣದ ನಗರಸಭೆ ರಂಗಮಂದಿರದಲ್ಲಿ ಗುರುವಾರ ವಿಸ್ತಾರ ವಾಹಿನಿ ಕನ್ನಡ ಸಂಭ್ರಮ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದ ಅವರು…

Read Full News

ನ.22 ಕ್ಕೆ ಅಡಕೆ ಬೆಳೆಯ ಎಲೆಚುಕ್ಕೆ ರೋಗದ ಅಧ್ಯಯನಕ್ಕೆ ಕೇಂದ್ರ ತಂಡ ತೀರ್ಥಹಳ್ಳಿಗೆ ಆಗಮನ : ಆರಗ ಜ್ಞಾನೇಂದ್ರ|Araga

ರಾಜ್ಯದಲ್ಲಿ ಅಡಿಕೆ ತೋಟಗಳಲ್ಲಿ ಹಬ್ಬಿರುವ ಎಲೆಚುಕ್ಕೆ ರೋಗದ ಬಗ್ಗೆ ಅಧ್ಯಯನ ನಡೆಸಿ, ಪರಿಹಾರ ಕಂಡುಕೊಳ್ಳಲು ಕೇಂದ್ರ ಸರಕಾರದ ಏಳು ಮಂದಿ ತಜ್ಞರನ್ನು ಒಳಗೊಂಡ ತಜ್ನರ ಸಮಿತಿ ಮುಂದಿನ ವಾರ ರಾಜ್ಯಕ್ಕೆ ಆಗಮಿಸಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜತೆ ಇಂದು ಮಾತನಾಡಿರುವ ಸಚಿವರು ಮಲೆನಾಡು ಹಾಗೂ ಕರಾವಳಿ ಭಾಗದ ರೈತರು ಎದುರಿಸುತ್ತಿರುವ ಸಂಕಷ್ಟಕ್ಕೆ ಕೇಂದ್ರ ಸರಕಾರ ತಕ್ಷಣ ಸ್ಪಂದಿಸಿದ್ದು ಅಡಿಕೆ ಬೆಳೆಗೆ ಎದುರಾಗಿರುವ ರೋಗ ನಿವಾರಣೆಗೆ ಸಮಿತಿ ಪರಿಹಾರ ಕಂಡುಕೊಳ್ಳಲು…

Read Full News

ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಕಾಫಿ ಸವಿದ ಗೃಹ ಸಚಿವ ಆರಗ ಜ್ಞಾನೇಂದ್ರ – ಸೆಲ್ಫಿಗಾಗಿ ಮುಗಿಬಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರು|Ripponpet

ರಿಪ್ಪನ್ ಪೇಟೆ :ಆನವಟ್ಟಿಯಲ್ಲಿ ಜನ ಸಂಕಲ್ಪ  ಕಾರ್ಯಕ್ರಮ ಮುಗಿಸಿಕೊಂಡು ತೀರ್ಥಹಳ್ಳಿ ಗೆ ತೆರಳುವ ಮಾರ್ಗ ಮಧ್ಯದಲ್ಲಿ ರಿಪ್ಪನ್ ಪೇಟೆಯ ವಿನಾಯಕ ವೃತ್ತದ ಗಣೇಶ್ ಪ್ರಸಾದ್ ಹೊಟೇಲ್ ನಲ್ಲಿ  ಇಂದು ಸಂಜೆ ರಾಜ್ಯ ಗೃಹ ಸಚಿವರಾದ  ಆರಗ ಜ್ಞಾನೇಂದ್ರ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಕುಶಲೋಪರಿ ವಿಚಾರಿಸಿದರು. ಹೊಟೇಲ್ ನಲ್ಲಿ ಕಾಫ಼ಿ ಸವಿಯುವುದರೊಂದಿಗೆ ಜನಸಾಮಾನ್ಯರೊಂದಿಗೆ ಬೆರೆತು ಸರಳತೆ ಮೆರೆದಿದ್ದಾರೆ.ಈ ಸಂಧರ್ಭದಲ್ಲಿ ಜನಸಾಮಾನ್ಯರು ಗೃಹ ಸಚಿವರೊಂದಿಗೆ ಸೆಲ್ಪಿಗೆ ಮುಂದಾದಗ ನಗುಮೊಗದಲ್ಲೇ ಎಲ್ಲಾರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡರು. ಗೃಹ ಸಚಿವರ ಆಗಮನದ ಸುದ್ದಿ ತಿಳಿಯುತಿದ್ದಂತೆ…

Read Full News

ರಿಪ್ಪನ್ ಪೇಟೆ : ಗುಡ್ ಶಫರ್ಡ್ ಶಾಲೆಯಲ್ಲಿ ಸಂಭ್ರಮದ ವಿಭಿನ್ನ ರೀತಿಯಲ್ಲಿ ಮಕ್ಕಳ ದಿನಾಚರಣೆ|Ripponpet

ರಿಪ್ಪನ್ ಪೇಟೆ : ಪಟ್ಟಣದ ಗುಡ್ ಶೆಫರ್ಡ್ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಡಗರ ಹಾಗೂ ಸಂಭ್ರಮದಿಂದ ವಿನೂತನವಾಗಿ ಆಚರಿಸಲಾಯಿತು. ಮಕ್ಕಳಿಂದ ಮಕ್ಕಳಿಗಾಗಿ ಆಯೋಜನಗೊಂಡ ಈ ಕಾರ್ಯಕ್ರಮವು ಶಿಕ್ಷಕರ ಹಾಗೂ ಪೋಷಕರ ವರ್ಗದವರ ಮನಸೂರೆಗೊಂಡಿತು. ಕಾರ್ಯಕ್ರಮದ ಅಧ್ಯಕ್ಷತೆ. ಕಾರ್ಯಕ್ರಮದ ಪ್ರಾಸ್ತವಿಕ ನುಡಿ, ಕಾರ್ಯಕ್ರಮದ ಮುಖ್ಯ ಅತಿಥಿಗಳು, ಕಾರ್ಯಕ್ರಮದಲ್ಲಿನ ಪ್ರಾರ್ಥನೆ ನಿರೂಪಣೆ, ಸ್ವಾಗತ,ಎಲ್ಲಾವನ್ನು ಮಕ್ಕಳೇ ನೆರವೇರಿಸಿದರು. ಮಕ್ಕಳಿಂದ ವಿವಿಧ ಛದ್ಮವೇಷ, ಏಕಪಾತ್ರಾಭಿನಯ, ಹಾಡು, ಡಾನ್ಸ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ವಿದ್ಯಾರ್ಥಿಗಳಿಂದ ದೀಪ ಬೆಳಗಿಸುವುದರ ಮೂಲಕ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಾಯಿತು  ಅಧ್ಯಕ್ಷತೆಯನ್ನು  ಆರಾಧ್ಯ ಎಸ್….

Read Full News

ಹೋರಾಟದ ಮೂಲಕ ಬಂದ ನನ್ನನ್ನೇ ಜನ ಸೋಲಿಸಿದ್ದರು – ಈ ಬಾರಿ ನನ್ನನ್ನು ಗೆಲ್ಲಿಸುತ್ತಾರೋ ನೋಡಬೇಕು : ಕಾಗೋಡು ತಿಮ್ಮಪ್ಪ| Kagodu

ಶಿವಮೊಗ್ಗ: ನಾನು ಹೋರಾಟದ ಮೂಲಕ ಅಧಿಕಾರಕ್ಕೆ ಬಂದವನು, ಆದರೆ ಜನ ನನ್ನ ಮೇಲೆ ಕೋಪಗೊಂಡು ಹೋದ ಬಾರಿ ಸೋಲಿಸಿದ್ದರು. ಈ ಬಾರಿ ಜನ ಏನು ಮಾಡುತ್ತಾರೆ ನೋಡೋಣ. ಇದರಿಂದ ನಾನು ಈ ಭಾರಿ ಚುನಾವಣಾ ಆಕಾಂಕ್ಷಿ ಎಂದು ಟಿಕೆಟ್​ಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾಭಾವಿಕವಾಗಿ ನಾನು ಅರ್ಜಿ ಸಲ್ಲಿಸಿದ್ದೇನೆ. ಟಿಕೆಟ್​ ಬೇಕಾದವರು ಕೆಲಸ ಮಾಡಬೇಕು, ಪಕ್ಷದ ಕೆಲಸದಲ್ಲಿ ತನ್ನನ್ನು ತೂಡಗಿಸಿಕೊಳ್ಳಬೇಕು. ಆಗ ಆತ ನಾಯಕವಾಗಿ…

Read Full News