ಬಿಜು ಮಾರ್ಕೋಸ್ ಸ್ಮರಣಾರ್ಥ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ
ರಿಪ್ಪನ್‌ಪೇಟೆಯಲ್ಲಿತಾಲ್ಲೂಕ್ ಮಟ್ಟದ ಸೈಕಲ್ ಪಂದ್ಯಾವಳಿ
ರಿಪ್ಪನ್‌ಪೇಟೆ;- ಇಲ್ಲಿನ ಕಲಾಕೌಸ್ತೂಭ ಕನ್ನಡ ಸಂಘದವರ ೩೧ ನೇ ವರ್ಷದ ವಾರ್ಷೀಕೋತ್ಸವ ಮತ್ತು 69 ನೇ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ದಿ.ಬಿಜು ಮಾರ್ಕೋಸ್ ಸ್ಮರಣಾರ್ಥ ಜಿಲ್ಲಾ ಮಟ್ಟದ ಅಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾವಳಿ ಜರುಗಿತು.
ಹಿರಿಯ ವಾಲಿಬಾಲ್ಅಟಗಾರರಾದ ಜಿ.ಎಸ್.ಶ್ರೀನಿವಾಸ ಮತ್ತು ಪ್ರಕಾಶ್ ರವರು ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಲ್ಎಸೆಯುವ ಮೂಲಕ ಚಾಲನೆ ನೀಡಿದರು.
ಈ ಟೂರ್ನಿಯಲ್ಲಿ ರಿಪ್ಪನ್‌ಪೇಟೆ ಸಿದ್ದಿವಿನಾಯಕ ತಂಡ ಪ್ರಥಮ ಹಾಗೂ ಭದ್ರಾವತಿ ತಂಡ ದ್ವಿತೀಯ ಸ್ಥಾನ ಪಡೆಯಿತು.
ಟಿ.ಆರ್.ಕೃಷ್ಣಪ್ಪ, ಪದ್ಮಾ ಸುರೇಶ್,ಕಲಾಕೌಸ್ತೂಭಕನ್ನಡ ಸಂಘದಅಧ್ಯಕ್ಷರವೀಂದ್ರ ಕೆರೆಹಳ್ಳಿ, ಪ್ರಧಾನ ಕಾರ್ಯದರ್ಶಿ ಪಿ.ಸುದೀರ್, ಎಂ.ಸುರೇಶಸಿಂಗ್,ದೇವರಾಜ್ ಕುಷನ್,ದಿವಾಕರ ಕೆದಲುಗುಡ್ಡೆ,ಮುರುಳಿಧರ,ಲೀಲಾಶಂಕರ್, ಶೈಲಾ ಅರ್.ಪ್ರಭು,ಗೀತಾಅಣ್ಣಪ್ಪ, ರೇಖಾರವಿ, ಅಶ್ವಿನಿ, ನಾಗರತ್ನದೇವರಾಜ್,ಉಮಾಸುರೇಶ್,ದೀಪಾಸುದೀರ್, ಸೀತಾ,ಗೀತಾ, ಇನ್ನಿತರರು ಹಾಜರಿದ್ದರು.
ರಿಪ್ಪನ್‌ಪೇಟೆಯಲ್ಲಿ ತಾಲ್ಲೂಕ್ ಮಟ್ಟದ ಸೈಕಲ್ ಪಂದ್ಯಾವಳಿ
ರಿಪ್ಪನ್‌ಪೇಟೆ : ಇಲ್ಲಿನ ಕಲಾಕೌಸ್ತೂಭಕನ್ನಡ ಸಂಘದವರ೩೧ ನೇ ವರ್ಷದ ವಾರ್ಷೀಕೋತ್ಸವ ಮತ್ತು ೬೯ ನೇ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದತಾಲ್ಲೂಕ್ ಮಟ್ಟದ ಸೈಕಲ್ ಸ್ಪರ್ಧೇಗೆ ಅರಸಾಳು ವಲಯಅರಣ್ಯಾಧಿಕಾರಿ ಶರಣಪ್ಪ ಕನ್ನಡ ಭಾವುಟಎತ್ತಿ ಹಿಡಿಯುವ ಮೂಲಕ ಚಾಲನೆ ನೀಡಿದರು.
ಸೈಕಲ್ ರೇಸ್ ನಲ್ಲಿ 70 ರ ಪ್ರಾಯದ ತಮ್ಮಯ್ಯ ಹಾಗೂ ಟಿ ಆರ್ ಕೃಷ್ಣಪ್ಪ ಪಾಲ್ಗೊಂಡು ತಮ್ಮಯ್ಯ ಹಾಲುಗುಡ್ಡೆ ರವರು ದ್ವಿತೀಯ ಸ್ಥಾನ ಪಡೆದಿದ್ದು ವಿಶೇಷವಾಗಿತ್ತು.
ಕಲಾಕೌಸ್ತೂಭ ಕನ್ನಡ ಸಂಘದ ಅಧ್ಯಕ್ಷರವೀಂದ್ರ ಕೆರೆಹಳ್ಳಿ, ಪ್ರಧಾನ ಕಾರ್ಯದರ್ಶಿ ಪಿ.ಸುದೀರ್, ಎಂ.ಸುರೇಶಸಿಂಗ್,ದೇವರಾಜ್ ಕುಷನ್,ದಿವಾಕರ,ಹಿರಿಯಣ್ಣಭಂಡಾರಿ,ಶ್ರೀನಿವಾಸ ಅಚಾರ್,ಸಂಘದ ಪದಾಧಿಕಾರಿಗಳು ಹಾಜರಿದ್ದರು.
ಮಕ್ಕಳಿಗೆ ಸಂಸ್ಕಾರದೊಂದಿಗೆ ಕಲಿಕೆಗೆ ಅನುಗುಣವಾಗಿ ಪ್ರೋತ್ಸಾಹಿಸಿ
ರಿಪ್ಪನ್‌ಪೇಟೆ ; ಸನಾತನ ಸಂಸ್ಕೃತಿ ಸಂಸ್ಕಾರವನ್ನು ಇಂದಿನ ಯುವ ಪೀಳಿಗಗೆ ತಿಳಿಸುವ ಕೆಲಸವನ್ನು ಪೋಷಕವರ್ಗ ಮಾಡಬೇಕು.ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುವ ಮೂಲಕ ಅವರಲ್ಲಿನಕಲಿಕೆಗನುಗುಣವಾಗಿ ಪ್ರೋತ್ಸಾಹಿಸಿ ಎಂದುಯಕ್ಷಗಾನಕಲಾವಿದ ಪಟ್ಲ ಸತೀಶ್ ಹೇಳಿದರು.
ರಿಪ್ಪನ್‌ಪೇಟೆಯಕಲಾಕೌಸ್ತೂಭಕನ್ನಡ ಸಂಘದ ವಾರ್ಷೀಕೋತ್ಸವ ಮತ್ತು೬೯ ನೇ ಕನ್ನಡರಾಜ್ಯೋತ್ಸವಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ವಿದ್ಯಾರ್ಥಿದಸೆಯಲ್ಲಿಯೇ ಮಕ್ಕಳಿಗೆ ಯಕ್ಷಗಾನರಂಗತರಬೇತಿ ನೀಡಿಅವರನ್ನು ಧರ್ಮ ಜಾಗೃತಗೊಳಿಸುವುದರಿಂದ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳಸಲು ಸಾಧ್ಯವೆಂದ ಅವರು ಶಾಲಾ ಹಂತದಲ್ಲಿಯಕ್ಷಗಾನದ ಕಲೆಯನ್ನು ವಿದ್ಯಾರ್ಥಿಗಳು ಮೈಗೊಡಿಸಿಕೊಳ್ಳುವಂತೆ ನಮ್ಮ ಸಂಸ್ಥೆ ಸ್ವಂತ ಖರ್ಚಿನಲ್ಲಿ ತಾಲ್ಲೂಕಿನ ಹಲವು ಶಾಲೆಗಳಿಗೆ ಹೋಗಿ ಉಚಿತ ತರಭೇತಿ ನೀಡಲಾಗಿದೆ ಎಂದರು.
ಕಲಾಕೌಸ್ತೂಭಕನ್ನಡ ಸಂಘದಆಧ್ಯಕ್ಷರವೀಂದ್ರ ಕೆರೆಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ಪಿ.ಸುದೀರ್, ಎನ್.ಸತೀಶ್, ಪದ್ಮಸುರೇಶ್, ರೇಖಾ ರವಿ,ನಾಗರತ್ನ ದೇವರಾಜ್, ಗೀತಾ, ಸೀತಾ, ಗೀತಾ ಅಣ್ಣಪ್ಪ,ಲೀಲಾಶಂಕರ್, ಆಶ್ವಿನಿ ಸತೀಶ್, ಉಮಾ ಸುರೇಶ್, ಲಕ್ಷಿö್ಮಶ್ರೀನಿವಾಸ, ಸಂದೀಪಶೆಟ್ಟಿ, ದೀಪಾಸುದೀರ್,ಅಚಾರ್, ಹಿರಿಯಣ್ಣಭAಡಾರಿ,ಕಲಾವತಿಚಂದ್ರಪ್ಪ,ಆಶಾ ಬಸವರಾಜ್, ದಿವಾಕರ, ರಾಘವೇಂದ್ರ ಪ್ರವೀಣ್ಅಚಾರ್,ಶೈಲಾಅರ್.ಪ್ರಭು, ರಾಘುಅರ್ಟ್ಸ್ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.