ಹೊಸನಗರ : ಕಚೇರಿಯಲ್ಲಿ ಲಂಚ ಪಡೆಯುತಿದ್ದ ನ್ಯಾಯಲಯದ ಎಪಿಪಿ ಲೋಕಾಯುಕ್ತ  ಬಲೆಗೆ

ಹೊಸನಗರ : ಕಚೇರಿಯಲ್ಲಿ ಲಂಚ ಪಡೆಯುತಿದ್ದ ನ್ಯಾಯಲಯದ ಎಪಿಪಿ ಲೋಕಾಯುಕ್ತ  ಬಲೆಗೆ

ರಿಪ್ಪನ್‌ಪೇಟೆ :  ರಬ್ಬರ್ ಮರ ಲೀಜ್ ವಿಚಾರವಾಗಿ ಇದ್ದ ಜಗಳದ ಕೇಸನ್ನು  ರಾಜಿ ಮೂಲಕ ಬೇಗ ಮುಗಿಸಿಕೊಡುತ್ತೇನೆ ಎಂದು ಹೇಳಿ ಪಿರ್ಯಾದಿಯಿಂದ ಲಂಚ ಪಡೆಯುತ್ತಿದ್ದ  ಹೊಸನಗರ ನ್ಯಾಯಾಲಯದ ಸಹಾಯಕ  ಸರ್ಕಾರಿ ಅಭಿಯೋಜಕ ರವಿ ಎನ್ನುವವರನ್ನು ಲೋಕಾಯುಕ್ತ  ಪೊಲೀಸರು ಶುಕ್ರವರ ಸಂಜೆ ನ್ಯಾಯಾಲಯದ ಆವರಣದಲ್ಲೇ ಬಂಧಿಸಿದ್ದಾರೆ.

ರಿಪ್ಪನ್‌ಪೇಟೆಯ ಕೆರೆಹಳ್ಳಿ ಗ್ರಾಮದ ಅಂಜನ್‌ಕುಮಾರ್ ರವರ ಅವರ  ಕೇಸ್ ಮುಗಿಸಿಕೊಡಬೇಕಾದರೆ 5,೦೦೦ ರೂ ಕೊಡಬೇಕು ಎಂದು ಹೇಳಿ, ಪಿರ್ಯಾದುದಾರರ ಹತ್ತಿರ 1,೦೦೦ ರೂ ಹಣವನ್ನು ಆರೋಪಿ ಮೊದಲೇ ಪಡೆದಿದ್ದರು. ಇಂದು ಮತ್ತೆ ನ್ಯಾಯಾಲಯಕ್ಕೆ  ನಾಯರ್ ಬಂದಾಗ 3 ಸಾವಿರ ರೂ. ಲಂಚಕ್ಕೆ ಬೇಡಿಕೆ  ಇಟ್ಟಿದ್ದರು.  ತನ್ನ ಮೊಬೈಲ್‌ನಲ್ಲಿ ಆಡಿಯೋ ವೀಡಿಯೋ ರೆಕಾರ್ಡ್ ಮಾಡಿಕೊಂಡು ಲೋಕಾಯುಕ್ತರಿಗೆ  ನಾಯರ್ ನೀಡಿದ್ದರು.

ಆಪಾದಿತ ಸರ್ಕಾರಿ ನೌಕರ ಕಚೇರಿಯಲ್ಲೇ ಹಣ ಪಡೆಯುವಾಗ  ಟ್ರ್ಯಾಪ್ ಮಾಡಿ ಲಂಚದ ಹಣವನ್ನು ಜಪ್ತಿ ಪಡಿಸಿಕೊಳ್ಲಲಾಗಿದೆ. ಆಪಾದಿತ ಸರ್ಕಾರಿ ನೌಕರನನ್ನು ತನಿಖೆ ಸಂಬಂಧ ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು  ಲೋಕಾಯುಕ್ತ  ಸಿಪಿಐ ಪ್ರಕಾಶ್  ಕೈಗೊಂಡಿದ್ದಾರೆ.

ಕಾರ್ಯಾಚರಣೆಯನ್ನು ಡಿಎಸ್ಪಿ ಮಂಜುನಾಥ ಚೌಧರಿ  ನೇತೃತ್ವದಲ್ಲಿ ನಡೆಸಲಾಗಿದೆ. ಸಿಪಿಐ ಪ್ರಕಾಶ್,  ಹೆಚ್.ಎಸ್ ಸುರೇಶ್, ಸಿಬ್ಬಂದಿ
ಇದರಲ್ಲಿ ಪಾಲ್ಗೊಂಡಿದ್ದರು.
…………………..

Leave a Reply

Your email address will not be published. Required fields are marked *