ಬ್ಯಾಂಕ್–ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಲಿ : ರೂಪೇಶ್ ರಾಜಣ್ಣ
ಬ್ಯಾಂಕ್–ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಲಿ : ರೂಪೇಶ್ ರಾಜಣ್ಣ ಕಲಾ ಕೌಸ್ತುಭ ಕನ್ನಡ ರಾಜೋತ್ಸವದ ಸಮಾರೋಪ ಸಮಾರಂಭ ರಿಪ್ಪನ್‌ಪೇಟೆ: “ಕನ್ನಡ ನಮ್ಮ ಮಾತೃಭಾಷೆ ಮಾತ್ರವಲ್ಲ, ಭಾವನೆಗಳ ಅಭಿವ್ಯಕ್ತಿ. ಎರಡು ಸಾವಿರ ವರ್ಷಗಳ ಪಾರಂಪರ್ಯ ಹೊಂದಿರುವ ನಮ್ಮ ಕನ್ನಡ ಭಾಷೆ ಅತ್ಯಂತ ಪುರಾತನ,” ಎಂದು ರಾಜ್ಯ ಯುವ ಕರ್ನಾಟಕ ವೇದಿಕೆಯ ಸಂಸ್ಥಾಪಕ-ರಾಜ್ಯಾಧ್ಯಕ್ಷ ಹಾಗೂ ಕನ್ನಡಪರ ಹೋರಾಟಗಾರ, ಬಿಗ್ ಬಾಸ್ 9 ಫೈನಲಿಸ್ಟ್ ರೂಪೇಶ್ ರಾಜಣ್ಣ ಹೇಳಿದ್ದಾರೆ. ಕಲಾಕೌಸ್ತುಭ ಕನ್ನಡ ಸಂಘದ 32ನೇ ವಾರ್ಷಿಕೋತ್ಸವ ಹಾಗೂ 70ನೇ ಕನ್ನಡ ರಾಜ್ಯೋತ್ಸವ…