ಬ್ಯಾಂಕ್–ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಲಿ : ರೂಪೇಶ್ ರಾಜಣ್ಣ
ಕಲಾ ಕೌಸ್ತುಭ ಕನ್ನಡ ರಾಜೋತ್ಸವದ ಸಮಾರೋಪ ಸಮಾರಂಭ
ರಿಪ್ಪನ್‌ಪೇಟೆ: “ಕನ್ನಡ ನಮ್ಮ ಮಾತೃಭಾಷೆ ಮಾತ್ರವಲ್ಲ, ಭಾವನೆಗಳ ಅಭಿವ್ಯಕ್ತಿ. ಎರಡು ಸಾವಿರ ವರ್ಷಗಳ ಪಾರಂಪರ್ಯ ಹೊಂದಿರುವ ನಮ್ಮ ಕನ್ನಡ ಭಾಷೆ ಅತ್ಯಂತ ಪುರಾತನ,” ಎಂದು ರಾಜ್ಯ ಯುವ ಕರ್ನಾಟಕ ವೇದಿಕೆಯ ಸಂಸ್ಥಾಪಕ-ರಾಜ್ಯಾಧ್ಯಕ್ಷ ಹಾಗೂ ಕನ್ನಡಪರ ಹೋರಾಟಗಾರ, ಬಿಗ್ ಬಾಸ್ 9 ಫೈನಲಿಸ್ಟ್ ರೂಪೇಶ್ ರಾಜಣ್ಣ ಹೇಳಿದ್ದಾರೆ.
ಕಲಾಕೌಸ್ತುಭ ಕನ್ನಡ ಸಂಘದ 32ನೇ ವಾರ್ಷಿಕೋತ್ಸವ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಸಮಾರೋಪದಲ್ಲಿ ವಿಶೇಷ ಅತಿಥಿಯಾಗಿ ಮಾತನಾಡಿದ ಅವರು, “ಕರ್ನಾಟಕದಲ್ಲಿ ವಿಭಿನ್ನತೆಯಲ್ಲಿಯೂ ಏಕತೆ ಕಾಣಬಹುದು. ಅನ್ಯಭಾಷಿಕರು ಇಲ್ಲಿ ವಾಸಿಸುತ್ತಾ ತಮ್ಮ ಭಾಷೆಯಲ್ಲೇ ವ್ಯವಹರಿಸುತ್ತಾರೆ. ಆದರೆ ಕನ್ನಡಿಗರು ಬೇರೆಡೆ ಹೋದರೆ ಕನ್ನಡ ಮಾತನಾಡಲು ಸಂಕಷ್ಟ ಎದುರಿಸುತ್ತಾರೆ. ಇದು ವ್ಯತಿರಿಕ್ತ ಸ್ಥಿತಿ,” ಎಂದು ವಿಷಾದ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬ್ಯಾಂಕ್, ರೈಲ್ವೆ, ಅಂಚೆ ಸೇರಿದಂತೆ ಹಲವು ಸರ್ಕಾರಿ ಕಚೇರಿಗಳಲ್ಲಿ ಉದ್ಯೋಗಿಗಳು ಕನ್ನಡ ಬದಲು ಬೇರೆ ಭಾಷೆಯಲ್ಲಿ ವ್ಯವಹರಿಸುವುದನ್ನು ಟೀಕಿಸಿದ ಅವರು, “ನಮ್ಮ ನಾಡಿನಲ್ಲಿದ್ದರೆ ಕನ್ನಡದಲ್ಲೇ ಸೇವೆ ನೀಡಬೇಕು. ಇದಕ್ಕಾಗಿ ಹೋರಾಟ ಅನಿವಾರ್ಯ,” ಎಂದು ಎಚ್ಚರಿಕೆ ನೀಡಿದರು. ಬೆಳಗಾವಿಯಲ್ಲಿ ಮರಾಠಿಗರಿಂದ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಉಲ್ಲೇಖಿಸಿ, “ಇದಕ್ಕೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸಲು ನಮ್ಮ ಸಂಘಟನೆ ಸಿದ್ಧ,” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಮರುಳಿಧರ ಕೆರೆಹಳ್ಳಿ ವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ತು ರಾಜ್ಯಾಧ್ಯಕ್ಷ ಡಾ. ರವಿಶೆಟ್ಟಿ ಬೈಂದೂರು ಬಹುಮಾನ ವಿತರಿಸಿ, “ಕನ್ನಡ ಉಳಿಯಬೇಕಾದರೆ ನಾವು ಕಟ್ಟಿಬದ್ದರಾಗಬೇಕು. ಗ್ರಾಮಗಳಲ್ಲಿ ಕನ್ನಡ ಜೀವಂತವಾಗಿದೆಯಾದರೂ ನಗರಗಳಲ್ಲಿ ಅದರ ಬಳಕೆ ಕಡಿಮೆಯಾಗುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಿದರು.
ಅತಿಥಿಗಳಾಗಿ ಕೆ.ಎಸ್. ಪ್ರಶಾಂತ್, ಯತೀಶ್ ಬಿ.ಎನ್.ಗೌಡ, ನಿತಿನ್ ನಾರಾಯಣಗೌಡ, ಮಹೇಂದ್ರ ಎಂ., ಸಿ. ಚಂದ್ರುಬಾಬು, ಎಂ.ಬಿ. ಮಂಜುನಾಥ, ಯಶಸ್ವತಿ ವೃಷಭರಾಜ್ ಜೈನ್, ಸುಂದರೇಶ್, ಜಿ.ಡಿ. ಮಲ್ಲಿಕಾರ್ಜುನ, ದೀಪಾ ಸುಧೀರ್, ಆಶ್ವಿನಿ ರವಿಶಂಕರ್, ವನಮಾಲ, ಬಿ. ರಾಮಚಂದ್ರ ಬಳೆಗಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ರಾಜ್ಯೋತ್ಸವ ಸನ್ಮಾನ:



ಭದ್ರಣ್ಣ ದೊಡ್ಡಿನಕೊಪ್ಪ, ದ್ಯಾವಪ್ಪಗೌಡರು, ಕೃಷಿ ತಜ್ಞ ಆನಂತಮೂರ್ತಿ ಜವಳಿ, ನಿವೃತ್ತ ಉಪನ್ಯಾಸಕಿ ಜಿ.ಎಸ್. ಸರೋಜಮ್ಮ, ನಿವೃತ್ತ ಯೋಧ ಗಿರೀಶ್, ಗಿನ್ನೆಸ್ ದಾಖಲೆಗಾರ್ತಿ ಕವನ, ಪ್ರಗತಿಪರ ರೈತ ಪ್ರಶಸ್ತಿ ವಿಜೇತೆ ಕಮಲಮ್ಮ ಟೀಕಪ್ಪ ಕಾರಗೋಡು, ಮಾಣಿಕೆರೆ ಪ್ರಕಾಶಗೌಡ, ಕ್ರಿಕೆಟ್ ವಿಶ್ವಕಪ್ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಕಾವ್ಯ ರವರ ತಂದೆ ವೆಂಕಟೇಶ್ ಅಚಾರ್, ಡಾ. ಅರ್. ಗಣೇಶ್ ಹಾಗೂ ಕಬ್ಬಡಿಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಾಲ್ವರು ಪ್ರತಿಭೆಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕು. ಕುಮದಾ ಪ್ರಾರ್ಥನೆ ಸಲ್ಲಿಸಿದರು, ಉಮಾಸುರೇಶ್ ಸ್ವಾಗತಿಸಿದರು, ಶಿಕ್ಷಕಿ ಅಂಭಿಕಾ ನಿರೂಪಿಸಿದರು, ಎಂ. ಸುರೇಶ್‌ಸಿಂಗ್ ಪ್ರಾಸ್ತಾವಿಕ ಮಾತನಾಡಿದರು, ನಾಗರತ್ನ ದೇವರಾಜ್ ವಂದಿಸಿದರು.
ನಂತರ ಮಂಗಳೂರು ಕುಳಾಯಿ ಕಲಾಕುಂಭ ತಂಡದಿಂದ ಪಂಜುರ್ಲಿ ಪೌರಾಣಿಕ ಕನ್ನಡ ನಾಟಕ ಪ್ರದರ್ಶನ ಜರುಗಿತು.
ಈ ಸಂಧರ್ಭದಲ್ಲಿ ಎಂ.ಸುರೇಶ್‌ಸಿಂಗ್,ರವೀಂದ್ರ ಕೆರೆಹಳ್ಳಿ , ಪದ್ಮಸುರೇಶ್, ಉಮಾಸುರೇಶ್, ಸೀತಮ್ಮ,ನಿರಂಜನ್ ಕನ್ನಡಿಗ , ಗೀತಾಕರಿಬಸಪ್ಪ, ಲೀಲಾಉಮಾಶಂಕರ್, ರವೀಂದ್ರಕೆರೆಹಳ್ಳಿ, ನಾಗರತ್ನ ದೇವರಾಜ್, ಶೈಲಾ ಆರ್.ಪ್ರಭು,ಲಕ್ಷಿö್ಮ ಶ್ರೀನಿವಾಸ್ ಅಚಾರ್, ಪದ್ಮಾಕುಮಾರ್,ರಾಘ ಆರ್ಟ್ಸ್, ರೇಖಾರವಿ,ಗೀತಾ ಅಣ್ಣಪ್ಪ, ವೇದಾವತಿ, ನಾಗರಾಜ ಕೆದಲುಗುಡ್ಡೆ, ಗನ್ನಿಸಾಬ್‌ಕೆಂಚನಾಲ, ಸತೀಶ್ ಹುಳಗದ್ದೆ,ಯೋಗೇಂದ್ರಪ್ಪಗೌಡ,ಅಶಾಬಸವರಾಜ,ರಾಘು ಆರ್ಟ್ಸ್ ವರ್ಗೀಶ್ ಪಿ.ಜೆ, ದಿವಾಕರ್, ಚಂದ್ರು ಸಿದ್ದಪ್ಪನಗುಡಿ, ಸಂದೀಪ್‌ಶೆಟ್ಟಿ, ಭೀಮರಾಜ್,ಶ್ರೀನಿವಾಸ್,ಮಂಜು,ನವೀನ್,ನಿತೀನ್ ಎಂ.ಗೌಡ, ಸನೂಫ್‌ಸಿಂಗ್,ಮಹೇಶ್ ಏಜೆಂಟ್,ಆದರ್ಶ ಕೆ.ಇನ್ನಿತರರು ಹಾಜರಿದ್ದರು.



