RIPPONPETE | ಕಲಾ ಕೌಸ್ತುಭ ಕನ್ನಡ ಸಂಘದ ಲಕ್ಕಿ ಡ್ರಾ – ಬಹುಮಾನ ವಿಜೇತಳಿಗೆ ಸ್ಕೂಟಿ ಹಸ್ತಾಂತರಿಸಿದ ಶಾಸಕ ಬೇಳೂರು
ರಿಪ್ಪನ್‌ಪೇಟೆ : ಇಲ್ಲಿನ ಕಲಾ ಕೌಸ್ತುಭ ಕನ್ನಡ ಸಂಘದ 31ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಲಕ್ಕಿ ಡ್ರಾ’ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಬಡ ಮಹಿಳೆಗೆ ಕರ್ನಾಟಕ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಬಹುಮಾನ ಹಸ್ತಾಂತರಿಸಿದರು.
ಪಟ್ಟಣದ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಲಾ ಕೌಸ್ತುಭ ಕನ್ನಡ ಸಂಘ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಲಕ್ಕಿ ಡ್ರಾ ದಲ್ಲಿ ತೀರ್ಥಹಳ್ಳಿ ರಸ್ತೆಯ ಗ್ರಾಮ ಪಂಚಾಯತಿ ಬಡಾವಣೆಯ ನಿವಾಸಿ ರಾಣಿ ಕೋಂ ರಾಮಚಂದ್ರ ಎಂಬುವ ಬಡ ಮಹಿಳೆ ವಿಜೇತಳಾಗಿದ್ದು ಅವರಿಗೆ ಬಹುಮಾನ ಹಸ್ತಾಂತರಿಸಿದರು.
ನಂತರ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ರಾಜ್ಯೋತ್ಸವ ಸಮಿತಿಯವರು ಆಯೋಜಿಸಿದ್ದ ಲಕ್ಕಿ ಡ್ರಾ ದಲ್ಲಿ ಬಡ ಮಹಿಳೆಯಾದ ರಾಣಿ ರವರಿಗೆ ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ, ಸ್ವಾಮಿ ಸಿದ್ದಿವಿನಾಯಕ ಕೃಪೆಯಿಂದ ಅರ್ಹರಿಗೆ ಬಹುಮಾನ ಸಂದಿದೆ , ರಾಜ್ಯೋತ್ಸವ ಕಾರ್ಯಕ್ರಮವು ಸಾರ್ಥಕವಾದಂತೆ ಎಂದು ಡ್ರಾ ವಿಜೇತ ಮಹಿಳೆಗೆ ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ ,ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ,ಎಂ ಎಂ ಪರಮೇಶ್ , ಆಸೀಫ಼್ ಭಾಷಾ ಪದಾಧಿಕಾರಿಗಳಾದ ರಾಮಚಂದ್ರ ಬಳೆಗಾರ್ , ಪದ್ಮಾ ಸುರೇಶ್ , ಮುರುಳಿ ಕೆರೆಹಳ್ಳಿ , ವರ್ಗೀಸ್ , ದಿವಾಕರ ಕೆದಲುಗುಡ್ಡೆ, ರೇಖಾ ರವಿ , ಉಮಾ ಸುರೇಶ್ , ಅಶ್ವಿನಿ ಸತೀಶ್ , ಶೈಲಾ ಪ್ರಭು , ನಾಗರತ್ನ ದೇವರಾಜ್ , ಹಿರಿಯಣ್ಣ ಭಂಡಾರಿ ಹಾಗೂ ಇನ್ನಿತರರಿದ್ದರು.