Headlines

ರಿಪ್ಪನ್‌ಪೇಟೆ | ಅದ್ಧೂರಿ ಕನ್ನಡ ರಾಜ್ಯೋತ್ಸವ ಸಂಭ್ರಮ – ಮೆರವಣಿಗೆಗೆ ಮೆರುಗು ನೀಡಿದ ಚಂಡೆ ನೃತ್ಯ

ರಿಪ್ಪನ್‌ಪೇಟೆ : ಅದ್ಧೂರಿ ಕನ್ನಡ ರಾಜ್ಯೋತ್ಸವ ಸಂಭ್ರಮ – ಮೆರವಣಿಗೆಗೆ ಮೆರುಗು ನೀಡಿದ ಚಂಡೆ ನೃತ್ಯ

ರಿಪ್ಪನ್‌ಪೇಟೆ: ಪಟ್ಟಣದ ಕಲಾ ಕೌಸ್ತುಭ ಕನ್ನಡ ಸಂಘ ಗುರುವಾರ  ಆಯೋಜಿಸಿದ್ದ  ಕರ್ನಾಟಕ  ರಾಜ್ಯೋತ್ಸವದ ಅದ್ಧೂರಿ ಕನ್ನಡ  ಸಂಭ್ರಮದಲ್ಲಿ ಚಂಡೆ ನೃತ್ಯ,ವಿದ್ಯಾರ್ಥಿಗಳ ವಾದ್ಯ ಘೋಷ್ ಮೆರವಣಿಗೆಗೆ ಮೆರಗು ನೀಡಿತ್ತು.

ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷರಾದ ರವೀಂದ್ರ ಕೆರೆಹಳ್ಳಿ ಕನ್ನಡ ಧ್ವಜಾರೋಹಣ ನೆರವೇರಿಸಿದರು.

ಬೆಳಿಗ್ಗೆ ಭುವನೇಶ್ವರಿ ದೇವಿಯ ಭವ್ಯ ಶೋಭಾ ಯಾತ್ರೆಗೆ ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರಾದ ಸೈಯದ್ ಅಫ಼್ರೋಜ್ ಚಾಲನೆ ನೀಡಿದರು.ಈ ಮೆರವಣಿಗೆಯಲ್ಲಿ ಚಂಡೆ ನೃತ್ಯ, ವಿವಿಧ ಶಾಲಾ ಕಾಲೇಜುಗಳ ವಾದ್ಯ ಘೋಷ್  ಮೆರವಣಿಗೆಗೆ  ಸಾಥ್ ನೀಡಿದವು.

ತೆರೆದ ವಾಹನದಲ್ಲಿ  ಅನಾವರಣಗೊಂಡ ಭಾರೀ ಗಾತ್ರದ ತಾಯಿ ಭುವನೇಶ್ವರಿ  ಹಾಗೂ  ರಾಷ್ಟ್ರ ಶಕ, ಪುರುಷರ ವಿವಿಧ ವೇಷ ಭೂಷಣಗಳ ಧಿರಿಸು  ತೊಟ್ಟು ಸಂಭ್ರಮಿಸಿದ ಪುಟಾಣಿಗಳ ಸಾಲು , ಸಹಸ್ರಾರು ಸಂಖ್ಯೆಯ ಶಾಲಾ, ಕಾಲೇಜು  ವಿದ್ಯಾರ್ಥಿಗಳ ಪಥಸಂಚಲನದ ಅಕರ್ಷಣೆಯ ಮೆರವಣಿಗೆ  ದಾರಿಹೋಕರನ್ನು ತನ್ನತ್ತ ಸೆಳೆಯುವಂತೆ ಮಾಡಿತ್ತು.

ನಂತರ ನಡೆದ ಸಭಾ ಕಾರ್ಯಕ್ರಮವನ್ನು ಪಿಎಸ್‌ಐ ಪ್ರವೀಣ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಈ ಸಂಧರ್ಭದಲ್ಲಿ ಮಕ್ಕಳಿಂದ ವಿವಿಧ ವೇಷಭೂಷಣ ಕಾರ್ಯಕ್ರಮ ನಡೆಯಿತು.

ಈ ಸಂಧರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ , ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ , ಕಂದಾಯ ಇಲಾಖೆಯ ಸೈಯದ್ ಅಫ಼್ರೋಜ್ ,ಉಪನ್ಯಾಸಕಿ ಗೋಪಮ್ಮ, ಗ್ರಾಪಂ ಸದಸ್ಯರಾದ ಮಂಜುಳಾ ಕೆ ರಾವ್ , ಮಹಾಲಕ್ಷ್ಮಿ ಅಣ್ಣಪ್ಪ , ದೀಪಾ ಸುಧೀರ್ ,ಅಶ್ವಿನಿ ರವಿಶಂಕರ್ ,ದಾನಮ್ಮ ಕಲಾ ಕೌಸ್ತುಭ ಕನ್ನಡ ಸಂಘದ ಮಾಜಿ ಅಧ್ಯಕ್ಷೆ ಲೀಲಾ ಶಂಕರ್,ಪದ್ಮಾ ಸುರೇಶ್,ಎಂ ಬಿ ಮಂಜುನಾಥ್ , ಸುರೇಶ್ ಸಿಂಗ್,ನಾಗರತ್ನ ದೇವರಾಜ್,ಹಿರಿಯಣ್ಣ ಭಂಡಾರಿ, ಉಮಾ ಸುರೇಶ್ ,ಲಕ್ಷ್ಮಿ ಶ್ರೀನಿವಾಸ್ ,ರಾಮಚಂದ್ರ ಬಿ ,ಸುಧೀರ್ ಪಿ  ಸೇರಿದಂತೆ ಆಟೊ ಚಾಲಕರ ಮತ್ತು ಮಾಲಕರ ಸಂಘದ ಸದಸ್ಯರು , ವಿವಿಧ ಸಂಘ ಸಂಸ್ಥೆಗಳ ಮತ್ತು ಸರ್ಕಾರಿ ಹಾಗೂ ಖಾಸಗಿ  ಶಾಲಾ ಕಾಲೇಜ್  ಶಿಕ್ಷಣ ಸಂಸ್ಥೆಯ ಪ್ರಮುಖರು ಕರ್ನಾಟಕ  ರಾಜ್ಯೋತ್ಸವದ ಮೆರವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *