RIPPONPETE | ನ. 28, 29 ರಂದು ಅದ್ದೂರಿ ಕನ್ನಡ ರಾಜ್ಯೋತ್ಸವಕ್ಕೆ ಸಕಲ ಸಿದ್ದತೆ
ರಿಪ್ಪನ್‌ಪೇಟೆ: ಪಟ್ಟಣದಲ್ಲಿ ಕಲಾಕೌಸ್ತುಭ ಕನ್ನಡ ಸಂಘದ 39 ನೇ ವರ್ಷದ ವಾರ್ಷಿಕೋತ್ಸವ ಮತ್ತು 69 ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ನವಂಬರ್ 28 ಮತ್ತು 29 ರಂದು ಎರಡು ದಿನಗಳ ಕಾಲ ಏರ್ಪಡಿಸಲಾಗಿದೆ ಎಂದು ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನ. 28 ರಂದು ಗುರುವಾರ ಬೆಳಗ್ಗೆ 9 ಗಂಟೆಗೆ ಕನ್ನಡ ಭುವನೇಶ್ವರ ಭಾವಚಿತ್ರದ ಮೆರವಣಿಗೆ ಮೆರವಣಿಗೆಯಲ್ಲಿ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಮತ್ತು ಹೆಸರಾಂತ ಜಾನಪದ ಕಲಾತಂಡಗಳ ಭವ್ಯ ಮೆರವಣಿಗೆ ಯೊಂದಿಗೆ ಭವನೇಶ್ವರಿ ಸೇರಿದಂತೆ ವಿವಿಧ ವೇಷಭೂಷಣಗಳ ಸ್ಪರ್ಧೆಗಳನ್ನು ಯೋಜಿಸಲಾಗಿದೆ. ನಂತರ ಭೂಪಾಳಂ ಚಂದ್ರಶೇಖರಯ್ಯ ಸಭಾ ಭವನದಲ್ಲಿ ಸಮಾರಂಭದ ಉದ್ಘಾಟನೆ ಜರುಗಲಿದೆ ಎಂದರು.
28 ರ ರಾತ್ರಿ 8 ಗಂಟೆಗೆ ಅಂತರಾಷ್ಟ್ರೀಯ ಖ್ಯಾತಿಯ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಾವೆಂಜೆ ಯಕ್ಷಗಾನ ಮೇಳದವರಿಂದ ಕಾಲಮಿತಿ ಯಕ್ಷಗಾನ “ತ್ರಿಜನ್ಮ ಮೋಕ್ಷ” ಪ್ರದರ್ಶನ ಜರುಗಲಿದೆ.
ನ. 29 ರಂದು ಬೆಳಗ್ಗೆ 9 ಗಂಟೆಗೆ ತಾಲ್ಲೂಕು ಮಟ್ಟದ ಪುರುಷರಿಗಾಗಿ “ಸೈಕಲ್’ಸ್ಪರ್ಧೆ” ಹಾಗೂ 10 ಗಂಟೆಗೆ ಗಂಟೆಗೆ ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ದಿವಂಗತ| ಬಿಜು ಮಾರ್ಕೋಸ್ ಸ್ಮರಣಾರ್ಥ ಜಿಲ್ಲಾ ಮಟ್ಟದ ಅಹ್ವಾನಿತ ತಂಡಗಳ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ.
ಸಂಜೆ 6 ರಿಂದ 7 30 ರವರೆಗೆ ರವಿ ಮುರೂರು ಇವರಿಂದ ಸಂಗೀತ ಕಾರ್ಯಕ್ರಮ ನಂತರ ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಮನು ಹಂದಾಡಿ ಮತ್ತು ಹಿಂಡಿನರಿಂದ ‘ನಗೆ-ಸುಗ್ಗಿ’ ಕಾರ್ಯಕ್ರಮ ಜರುಗಲಿದೆ.
ಈ ಸಂಧರ್ಭದಲ್ಲಿ ಕಲಾ ಕೌಸ್ತುಭ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ಪಿ ,ಉಪಾಧ್ಯಕ್ಷ ರಾಮಚಂದ್ರ ಬಳೆಗಾರ್ ಪದಾಧಿಕಾರಿಗಳಾದ ಸತೀಶ್ ಎನ್ , ಪದ್ಮಾ ಸುರೇಶ್ , ನಾಗರತ್ನ ದೇವರಾಜ್ , ಕೆರೆಹಳ್ಳಿ ಮುರುಳಿ , ಉಮಾ ಸುರೇಶ್ , ರಾಘು ಆರ್ಟ್ಸ್ , ಗಣೇಶ್ ಕುಕ್ಕಳಲೆ ಹಾಗೂ ಇನ್ನಿತರರಿದ್ದರು.
ಈ ಎರಡು ದಿನಗಳ ಕಾಲ ಕೆಳಕಂಡ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲಿಚ್ಚಿ ಸುವವರು ಈ ಮೊಬೈಲ್ ನಂಬರ್‌ಗಳಿಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರವೀಂದ್ರ ಕೆರೆಹಳ್ಳಿ (9986773396)
ಸುದೀರ್ ಪಿ (8310135230),
ರಾಮಚಂದ್ರ ಬಳೆಗಾರ್ (9882442359)