ಕಲಾ ಕೌಸ್ತುಭ ಕನ್ನಡ ಸಂಘದ ಲಕ್ಕಿ ಡ್ರಾ – ಸ್ಕೂಟಿ ವಿಜೇತಳಾದ ಬಡ ಮಹಿಳೆ
ರಿಪ್ಪನ್‌ಪೇಟೆ : ಇಲ್ಲಿನ ಕಲಾ ಕೌಸ್ತುಭ ಕನ್ನಡ ಸಂಘದ 31ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಲಕ್ಕಿ ಡ್ರಾ’ ಸ್ಪರ್ಧೆಯ ವಿಜೇತರನ್ನು ವಿನಾಯಕ ವೃತ್ತದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಡ್ರಾ ಮೂಲಕ ಆಯ್ಕೆ ಮಾಡಲಾಯಿತು.
ಲಕ್ಕಿ ಡ್ರಾ ದಲ್ಲಿ 265 ವಿಜೇತ ಸಂಖ್ಯೆಯಾಗಿದ್ದು ಎಲೆಕ್ಟ್ರಿಕ್ ಸ್ಕೂಟಿಯ ವಿಜೇತರಾಗಿ ತೀರ್ಥಹಳ್ಳಿ ರಸ್ತೆಯ ಗ್ರಾಮ ಪಂಚಾಯತಿ ಬಡಾವಣೆಯ ನಿವಾಸಿ ರಾಣಿ ಕೋಂ ರಾಮಚಂದ್ರ ಎಂಬುವವರು ಆಯ್ಕೆಯಾಗಿದ್ದಾರೆ.
ಈ ಸಂಧರ್ಭದಲ್ಲಿ ಕಲಾ ಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ರವೀಂದ್ರ ಕೆರೆಹಳ್ಳಿ , ಪದಾಧಿಕಾರಿಗಳಾದ ರಾಮಚಂದ್ರ ಬಳೆಗಾರ್ , ಸುರೇಶ್ ಸಿಂಗ್ , ಪದ್ಮಾ ಸುರೇಶ್ , ಮುರುಳಿ ಕೆರೆಹಳ್ಳಿ , ವರ್ಗೀಸ್ , ದಿವಾಕರ ಕೆದಲುಗುಡ್ಡೆ, ರೇಖಾ ರವಿ , ಉಮಾ ಸುರೇಶ್ , ಅಶ್ವಿನಿ ಸತೀಶ್ , ಶೈಲಾ ಪ್ರಭು , ಲಕ್ಷ್ಮಿ , ನಾಗರತ್ನ ದೇವರಾಜ್ ಹಾಗೂ ಇನ್ನಿತರರಿದ್ದರು.