ಫೆಂಗಲ್ ಚಂಡಮಾರುತ – ಶಿವಮೊಗ್ಗ ಜಿಲ್ಲಾದ್ಯಂತ ಡಿ.3 ರಂದು ಶಾಲಾ , ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಣೆ
ಶಿವಮೊಗ್ಗ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಹಿನ್ನಲೆಯಲ್ಲಿ ಅಧಿಕ ಮಳೆ ಸಂಭವವಾಗುವ ಹಿನ್ನಲೆಯಲ್ಲಿ ಜಿಲ್ಲಾದ್ಯಂತ ಪದವಿ, ಪದವಿ ಪೂರ್ವ ಕಾಲೇಜುಗಳು, 1-10 ನೇ ತರಗತಿ ಮತ್ತು ಅಂಗನವಾಡಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಈ ಕುರಿತು ಪ್ರಭಾರ ಜಿಲ್ಲಾ ಪಂಚಾಯತ್ ಸಿಇಒ ಹೇಮತ್ ಕುಮಾರ್ ಅಧಿಕ ಮಳೆ ಹಿನ್ನಲೆಯಲ್ಲಿ ರಜೆ ಘೋಷಿಸಿದ್ದಾರೆ. ಮುಂದಿನ ಎರಡು ದಿನಗಳು ಅಧಿಕ ಮಳೆಯಾಗುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಹವಮಾನ ಇಲಾಖೆ ಹೈ ಅಲರ್ಟ್ ಘೋಷಿಸಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಮಕ್ಕಳಿಗೆ ತೊಂದರೆಯಾಗದಂತೆ ಡಿ.3 ರಂದು ಇಂದು ಮಾತ್ರ ರಜೆ ಘೋಷಿಸಿದೆ. ಇಂದು ನೀಡಿದ ರಜೆಯನ್ನ ಮುಂದೆ ಬರುವ ಸಾರ್ವತ್ರಿಕ ರಜೆಗಳಲ್ಲಿ ಸರಿ ದೂಗಿಸಿಕೊಳ್ಳಲು ಸೂಚಿಸಲಾಗಿದೆ. ವಿಪತ್ತು ನಿರ್ವಹಣ ತುರ್ತು ಅಧಿಕೃತ ವಿಜ್ಞಾಪನೆಯಲ್ಲಿ ಡಿಸಿಯವರು ಸೂಚಿಸಿದ್ದಾರೆ.
ಫೆಂಗಲ್ ಚಂಡಮಾರುತವು ತಮಿಳುನಾಡು ಮತ್ತು ಪುದುಚೇರಿಯ ಕರಾವಳಿ ಭಾಗದಲ್ಲಿ ಅಬ್ಬರಿಸಿದ್ದ ಮಳೆ ಕಳೆದ ಎರಡು ದಿನದಿಂದ ರಾಜ್ಯದಲ್ಲಿ ಅಬ್ಬರಿಸುತ್ತಿದೆ. ಈ ನಡುವೆ ರಾಜಧಾನಿ ಬೆಂಗಳೂರಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ವಿಫರೀತ ಮಳೆ ಆರ್ಭಟ ಜೋರಾಗಿದೆ. ಹೀಗಾಗಿ ರಾಜ್ಯದ ಕೆಲವು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಈಗಾಗಲೇ ರಜೆ ಘೋಷಣೆ ಮಾಡಲಾಗಿದೆ.
ರಾಜ್ಯದ 14 ಜಿಲ್ಲೆಗಳಲ್ಲಿ ಡಿಸೆಂಬರ್ 2, 4 ಹಾಗೂ 4 ರಂದು ವ್ಯಾಪಕ ಹಾಗೂ ಭಾರೀ ಮಳೆಯಾಗಲಿರುವ ಕಾರಣ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.