SSLC ವಿಧ್ಯಾರ್ಥಿ ಶಾಲೆಯಿಂದ ನಾಪತ್ತೆ – ದೂರು ದಾಖಲು
ಹೊಸನಗರ ತಾಲೂಕು ಸೊನಲೆ ಸರ್ಕಾರಿ ಪ್ರೌಢಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಎನ್ ಆರ್ ಮನೋಜ ಅಲಿಯಾಸ್ ಮನು ಸೋಮವಾರ ಶಾಲೆಗೆ ತೆರಳಿದ್ದು ಮಧ್ಯಾಹ್ನ 12:45 ರ ವೇಳೆಗೆ ಶಾಲೆಯಿಂದ ಹೊರ ಬಂದಿದ್ದು ಶಾಲಾ ಅವಧಿ ಮುಗಿದು ಸಂಜೆಯಾದರೂ ಮನೆಗೆ ಬಾರದೇ ನಾಪತ್ತೆಯಾಗಿದ್ದಾನೆ.
ಮಗನು ಮನೆಗೆ ಬಾರದ ಕಾರಣ ಅವನ ತಂದೆ ತಾಯಿ ಮುಂಬಾರು ಗ್ರಾಮ ಪಂಚಾಯಿತಿಯ ಮಾವಿನಕಟ್ಟೆ ಬೇಹಳ್ಳಿಯ ರವಿ ಹಾಗೂ ಶಶಿಕಲಾ ಶಾಲೆಯಲ್ಲೂ ಅಕ್ಕ ಪಕ್ಕದ ಸಹಪಾಠಿಗಳ ಮನೆಗಳಲ್ಲಿ ವಿಚಾರಿಸಿದಾಗ ಮಧ್ಯಾಹ್ನದವರಿಗೂ ಶಾಲೆಗೆ ಬಂದಿದ್ದು ಮಧ್ಯಾಹ್ನ ನಂತರ ನಾಪತ್ತೆಯಾಗಿದ್ದು ತಿಳಿದು ಆತಂಕಗೊಂಡು ಸಂಬಂಧಿಕರಲ್ಲಿ ಪರಿಚಯಸ್ತರಲ್ಲಿ ವಿಚಾರಿಸಿದಾಗ ಆತನ ಬಗೆ ಎಲ್ಲೂ ಸುಳಿವು ಸಿಕ್ಕದೆ ವಿಚಲಿತರಾಗಿ ಮಂಗಳವಾರ ಮಧ್ಯಾಹ್ನ ಹೊಸನಗರ ಪೊಲೀಸ್ ಠಾಣೆಗೆ ತೆರಳಿ ಮಗ ಮನು ನಾಪತ್ತೆಯಾದ ಬಗ್ಗೆ ತಾಯಿ ಶಶಿಕಲಾ ಮಗನನ್ನು ಹುಡುಕಿ ಕೊಡುವಂತೆ ದೂರು ನೀಡಿದ್ದಾರೆ
5.7 ಅಡಿ ಎತ್ತರದ ಮನೋಜ ಅಲಿಯಾಸ್ ಮನು ಶಾಲೆಗೆ ಹೋಗುವಾಗ ಕಪ್ಪು ಬಿಳಿ ಬಣ್ಣದ ರೌಂಡ್ ನೆಕ್ ಟಿ-ಶರ್ಟ್ ತಿಳಿ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು ಕೋಲು ಮುಖ ಸಾಧಾರಣ ಮೈಕಟ್ಟು ಹೊಂದಿದ್ದು ಬಿಳಿಯ ಮೈಬಣ್ಣ ಹೊಂದಿದ್ದಾಗಿ ದೂರಿನಲ್ಲಿ ತಿಳಿಸಿ ಮಗನನ್ನು ಪತ್ತೆ ಮಾಡಿಕೊಡುವಂತೆ ಕೋರಿದ್ದಾರೆ
ಹೊಸನಗರ ಆರಕ್ಷಕ ಠಾಣೆಯ ಪೊಲೀಸರು ಮಿಸ್ಸಿಂಗ್ ದೂರು ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈತನ ಬಗ್ಗೆ ಸುಳಿವು ಸಿಕ್ಕವರು. 86608 71194 77606 82542 95912 18245. 94816 76073 ಈ ಮೊಬೈಲ್ ನಂಬರ್ ಗಳಿಗೆ ಮಾಹಿತಿ ನೀಡಬೇಕೆಂದು ಕೋರಿದ್ದಾರೆ