Headlines

ರಿಪ್ಪನ್‌ಪೇಟೆ ವ್ಯಾಪ್ತಿಯ ಎರಡು ಮನೆಗಳಲ್ಲಿ ಕಳ್ಳತನ; ಬಂಗಾರ, ಬೆಳ್ಳಿ, ನಗದು ದೋಚಿದ ಕಳ್ಳರು

ರಿಪ್ಪನ್‌ಪೇಟೆ ವ್ಯಾಪ್ತಿಯ ಎರಡು ಮನೆಗಳಲ್ಲಿ ಕಳ್ಳತನ; ಬಂಗಾರ, ಬೆಳ್ಳಿ, ನಗದು ದೋಚಿದ ಕಳ್ಳರು

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೇ ದಿನ ಎರಡು ಮನೆಯಲ್ಲಿ ಸರಣಿ ಕಳ್ಳತನವಾಗಿರುವ (Theft Case) ಘಟನೆ ಜರುಗಿದೆ.

ಘಟನೆ 1

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ತಳಲೆ ಸಮೀಪದ ಕಗ್ಗಲಿ  ಗ್ರಾಮದ ನ.30 ರಂದು ಅಶೋಕ್ ಎನ್ ಎಂಬುವವರ ಮನೆಗೆ ಹಾಕಿದ್ದ ಬೀಗವನ್ನು ಮುರಿದು ಬೀರುವಿನಲ್ಲಿ ಇದ್ದ 24 ಗ್ರಾಂ ಬಂಗಾರ, 15 ಸಾವಿರ ನಗದು, 85 ಗ್ರಾಂ ಬೆಳ್ಳಿ ಅನ್ನು ಕಳವು ಮಾಡಿದ್ದಾರೆ. ಗದ್ದೆ ಕೆಲಸಕ್ಕೆ ತೆರಳಿದ್ದ ಅಶೋಕ್ ಪತ್ನಿ ಲ್ ಅವರು ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದ್ದು,ಒಟ್ಟು 72 ಸಾವಿರ ರೂ ಮೌಲ್ಯದ ಚಿನ್ನಾಭರಣ ,9 ಸಾವಿರ ರೂ‌ ಮೌಲ್ಯದ ಬೆಳ್ಳಿ ಹಾಗೂ 15 ಸಾವಿರ ರೂ ನಗದು ಕಳ್ಳತನವಾಗಿರುವ ಬಗ್ಗೆ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆ 2

ಇದರಂತೆ ಅದೇ ದಿನ ಅರಸಾಳು ಗ್ರಾಪಂ ವ್ಯಾಪ್ತಿಯ ತಂಗಳವಾಡಿ ಗ್ರಾಮದಲ್ಲಿ ಶ್ರೀನಾಥ್ ಎಂಬುವವರು ಮನೆಗೆ ಬೀಗ ಹಾಕಿ ಹೊರಗಡೆ ಹೋದಾಗ ಖದೀಮರು ಮನೆಯ ಮುಖ್ಯ ಬಾಗಿಲಿನ ಚಿಲಕ ಮುರಿದು ಒಳನುಗ್ಗಿ ಮನೆಯಲ್ಲಿದ್ದ 9 ಗ್ರಾಂ ಬಂಗಾರ ,40 ಗ್ರಾಂ ಬೆಳ್ಳಿ ಕಳ್ಳತನ ಮಾಡಿದ್ದಾರೆ.ಹೊಸನಗರದ ಧರ್ಮಸ್ಥಳ ಸಂಘಕ್ಕೆ ತೆರಳಿದ್ದ ಶ್ರೀನಾಥ್ ಪತ್ನಿ ಹಿಂದಿರುಗಿ ನೋಡಿದಾಗ ಮನೆ ಕಳ್ಳತನವಾಗಿರುವುದು ಕಂಡುಬಂದಿದ್ದು ಕೂಡಲೇ ರಿಪ್ಪನ್‌ಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಈ ಕುರಿತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ. ಈ ಸರಣಿ ಕಳ್ಳತನದ ಜಾಡು ಪತ್ತೆ ಹಚ್ಚಲು ಠಾಣೆಯ ಪಿಎಸ್‌ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳು, ಶ್ವಾನ ಮತ್ತು ಬೆರಳಚ್ಚುಗಾರರ ತಂಡ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *