ಕೆಂಚನಾಲ ವ್ಯಾಪ್ತಿಯಲ್ಲಿ ಎರಡು ಕೆರೆಗಳ ಕಾಮಗಾರಿಗೆ ಶಂಕುಸ್ಥಾಪನೆ
ರಿಪ್ಪನ್‌ಪೇಟೆ – ಇಲ್ಲಿನ ಕೆಂಚನಾಲ ಗ್ರಾಪಂ ವ್ಯಾಪ್ತಿಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ರವರ ವಿಶೇಷ ಆಸಕ್ತಿಯಿಂದ ಮಂಜೂರಾಗಿರುವ ಎರಡು ಕೆರೆಗಳ ಕಾಮಗಾರಿಗೆ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಶಂಕುಸ್ಥಾಪನೆ ನೆರವೇರಿಸಿದರು.
ಕೆಂಚನಾಲ ಗ್ರಾಮ ಪಂಚಾಯತ್ ಕೆಂಚನಾಲ ಈರಣ್ಣನ ಕೆರೆ ಹಾಗೂ ಮಸರೂರು ವಡ್ಡಿನ ಕೆರೆ ಏರಿ ಮೇಲೆ ರಸ್ತೆ ಸುರಕ್ಷತಾ ಕಾಮಗಾರಿಗೆ (ರೋಡ್ ಸೇಫ್ಟಿ ಕ್ರಾಶ್ ಬ್ಯಾರಿಯರ್ ) ಹೊಸನಗರ ಲೋಕೋಪಯೋಗಿ ಇಲಾಖೆಯಿಂದ ಅಂದಾಜು ಮೊತ್ತ 25 ಲಕ್ಷ ಮಂಜೂರಾಗಿದ್ದು ಈ ಕಾಮಗಾರಿಗೆ ಗ್ರಾಪಂ ಅಧ್ಯಕ್ಷ ಶಂಕುಸ್ಥಾಪನೆ ನೆರವೇರಿಸಿದರು.
ಈ ಭಾಗದ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದ ಕರ್ನಾಟಕ ರಾಜ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ರವರಿಗೆ ಕೆಂಚನಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗರೀಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಹೂವಮ್ಮ ಸದಸ್ಯರಾದ ಮಹಮ್ಮದ್ ಷರೀಫ್ , ಪುಟ್ಟಮ್ಮ,ಕೃಷ್ಣೋಜಿರಾವ್, ರಮ್ಯ , ಪರಮೇಶ್ವರಪ್ಪ, ಉಷಾ, ಗೌರಮ್ಮ ಪಿಡಿಒ ರವಿಕುಮಾರ್ ಕಿರಿಯ ಇಂಜಿನಿಯರ್ ಕೊಟ್ರೇಶ್ , ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಸುನಿಲ್ ಕುಮಾರ್ ಹಾಗೂ ಗುತ್ತಿಗೆದಾರರ ಪವನ್ ಕುಮಾರ್ ಹಾಜರಿದ್ದರು.