Headlines

ರಿಪ್ಪನ್‌ಪೇಟೆ : ಬೆನವಳ್ಳಿಯಲ್ಲಿ ಜಿಂಕೆ ಬೇಟೆ – ಮಾಂಸ ಸಮೇತ ಓರ್ವನ ಬಂಧನ|arrested

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬೆನವಳ್ಳಿ ಗ್ರಾಮದಲ್ಲಿ  ಜಿಂಕೆ ಭೇಟೆಯಾಡಿ ಮಾಂಸವನ್ನು ಬಳಸಿಕೊಳ್ಳುತಿದ್ದ ಆರೋಪದಲ್ಲಿ ಓರ್ವನನ್ನು ಬಂಧಿಸಿದ್ದಾರೆ. ಬೆನವಳ್ಳಿ ಗ್ರಾಮದ ಮನೋಹರ್ (34) ಬಂಧಿತ ಆರೋಪಿ.ಇನ್ನೋರ್ವ ಆರೋಪಿ ಬೆನವಳ್ಳಿ ಗ್ರಾಮದ ವಿನಯ್ (26) ಪರಾರಿಯಾಗಿದ್ದಾನೆ. ಮಾಂಸ ಮಾಡುವ ಉದ್ದೇಶದಿಂದ ಜಿಂಕೆಯನ್ನು ಭೇಟೆ ಮಾಡಿರುವ ಮಾಹಿತಿಯ ಹಿನ್ನಲೆಯಲ್ಲಿ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಬೆನವಳ್ಳಿ ಗ್ರಾಮದ ಸನಂ 10|06 ರಲ್ಲಿ ಜಿಂಕೆ ಮಾಂಸ ಪತ್ತೆಯಾಗಿದೆ.ಈ ಹಿನ್ನಲೆಯಲ್ಲಿ ಆರೋಪಿ ಮನೋಹರ್ ನನ್ನು ವಶಕ್ಕೆ ಪಡೆದಿದ್ದು ಇನ್ನೋರ್ವ ಆರೋಪಿ ವಿನಯ್ ಬಂಧನಕ್ಕೆ…

Read More

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹಳ್ಳಿ ಮಕ್ಕಳ ಅದ್ಭುತ ಸಾಧನೆ…ವಿಜ್ಞಾನ ವಿಭಾಗದಲ್ಲಿ 586 ಅಂಕ ಪಡೆದ ವಿದ್ಯಾರ್ಥಿ

ರಿಪ್ಪನ್ ಪೇಟೆ : ಈ ಬಾರಿ  ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  ಹಳ್ಳಿಗಾಡಿನ ಪ್ರದೇಶದ ವಿದ್ಯಾರ್ಥಿಗಳು ಅದ್ಭುತ ಸಾಧನೆಗಳನ್ನು ಮಾಡಿದ್ದಾರೆ. ಅಮೃತ ಸರ್ಕಾರಿ ಪದವಿ ಪೂರ್ವ ಕಾಲೇಜ್ ವಿಜ್ಞಾನ ವಿಭಾಗದ  ವಿದ್ಯಾರ್ಥಿ ಹರ್ಷ 586 ಅಂಕಗಳನ್ನು ಪಡೆದಿದ್ದು. ಅಮೃತ ಸರಕಾರಿ  ಪದವಿ ಪೂರ್ವ ಕಾಲೇಜು ಶೇಕಡ 84 ಫಲಿತಾಂಶವನ್ನು ಪಡೆದರೆ. ಸರ್ಕಾರಿ ಪದವಿ ಪೂರ್ವ ಕಾಲೇಜು ರಿಪ್ಪನ್ ಪೇಟೆ  75.37 ಫಲಿತಾಂಶ ಪಡೆದಿದೆ.  ಅಮೃತ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ …

Read More

ನನಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ :ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ನನಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದು ಪೊಲೀಸ್ ಅಧಿಕಾರಿಗಳಿಗೆ ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ ಸೂಚನೆ ನೀಡಿದ್ದಾರೆ. ಎಲ್ಲರಂತೆ ನಾನೂ ಸಂಚರಿಸುತ್ತೇನೆ. ನನಗಾಗಿ ಯಾವುದೇ ವಿಶೇಷ ಸೌಲಭ್ಯ ಬೇಡ ಎಂದು ಹೇಳುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಝೀರೋ ಟ್ರಾಫಿಕ್‍ನಲ್ಲಿ ಸಂಚರಿಸಲು ಅವಕಾಶವಿದೆ. ಆದರೆ ಮಂತ್ರಿಗಳಿಗೆ ಈ ವಿಶೇಷ ಸೌಲಭ್ಯವಿಲ್ಲ. ಅವಕಾಶ ಇಲ್ಲದೇ ಇದ್ದರೂ ಕೆಲ ಮಂತ್ರಿಗಳು ಪ್ರಭಾವ ಬಳಸಿ ಝೀರೋ ಟ್ರಾಫಿಕ್‍ನಲ್ಲಿ ಸಂಚರಿಸುತ್ತಾರೆ. ಇದರಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುತ್ತದೆ. ಈ ಹಿಂದೆ…

Read More

ಆನಂದಪುರ : ಕಾಲುಜಾರಿ ಕೆರೆಗೆ ಬಿದ್ದು ರೈತ ಸಾವು|ಗಣಪತಿ ವಿಸರ್ಜನೆ ವೇಳೆಯಲ್ಲಿ ನಡೆಯಿತಾ ಅವಘಡ..?? ಜೆಡಿಸರದಲ್ಲಿ ಇಷ್ಟಕ್ಕೂ ನಡೆದಿದ್ದೇನು|Farmers death

ಆನಂದಪುರ : ಕಾಲುಜಾರಿ ಕೆರೆಗೆ ಬಿದ್ದು ರೈತ ಸಾವು|ಗಣಪತಿ ವಿಸರ್ಜನೆ ವೇಳೆಯಲ್ಲಿ ನಡೆಯಿತಾ ಅವಘಡ..?? ಜೆಡಿಸರದಲ್ಲಿ ಇಷ್ಟಕ್ಕೂ ನಡೆದಿದ್ದೇನು..?? ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರದ ಜೇಡಿಸರದ ಬಳಿಯಲ್ಲಿ ವ್ಯಕ್ತಿಯೊಬ್ಬರು ಎಮ್ಮೆಯನ್ನು ಹುಡುಕಿಕೊಂಡು ಕೆರೆ ಏರಿ ಮೇಲೆ ಹೋಗುತ್ತಿದ್ದಾಗ ಕಾಲುಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ. ಸ್ಥಳೀಯ ನಿವಾಸಿ ಸತೀಶ್ ಗೌಡ(51) ಮೃತಪಟ್ಟ ದುರ್ಧೈವಿಯಾಗಿದ್ದಾರೆ.ಸತೀಶ್​ರವರು ಅಡುಗೆ ಕಂಟ್ರಾಕ್ಟ್ ಮಾಡುತ್ತಿದ್ದರು.  ತಮ್ಮ ಬಾವನ ಮನೆಯಲ್ಲಿ ಇಟ್ಟಿದ್ದ ಗಣಪತಿ ವಿಸರ್ಜನೆಗೆ ಅಂತಾ ತೆರಳಿದ್ದ  ವೇಳೇ ಕೆರೆಯ ಆಳ ನೋಡಲು ಹೋದ ಸಂದರ್ಭದಲ್ಲಿ…

Read More

ಕೊರೊನಾ ಹಿನ್ನಲೆ ಕೆಂಚನಾಲ ಮಾರಿಕಾಂಬಾ ಜಾತ್ರೆ ಸರಳ ಆಚರಣೆ :

ರಿಪ್ಪನ್ ಪೇಟೆ: ಇತಿಹಾಸ ಪುರಾಣ ಪ್ರಸಿದ್ಧ ಕೆಂಚನಾಲ ಶ್ರೀ ಮಾರಿಕಾಂಬಾ ಬೇಸಿಗೆಯ ಜಾತ್ರೆ ಸರಳವಾಗಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು. ಕೋವಿಡ್ 19 ರ ಹಿನ್ನೆಲೆಯಲ್ಲಿ ಸರಕಾರದ ಆದೇಶದ ಮೇರೆಗೆ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಧಾರ್ಮಿಕ ಕಾರ್ಯಗಳನ್ನು ಸರಳವಾಗಿ ಆಚರಿಸಲು ಅನುಮತಿ ದೊರೆತ ಹಿನ್ನೆಲೆಯಲ್ಲಿ ಕೇವಲ ಪೂಜಾ ಕಾರ್ಯಕ್ರಮವನ್ನು ಮಾತ್ರ ನೆರವೇರಿಸಲಾಯಿತು. ಬೆಳಿಗ್ಗೆಯಿಂದಲೇ ಕೇವಲ ಬೆರಳೆಣಿಕೆಯಷ್ಟು ಭಕ್ತರು ಕೋವಿಡ್ ನಿಯಮಕ್ಕನುಸಾರವಾಗಿ ದೇವಾಲಯಕ್ಕೆ ಆಗಮಿಸಿ ದೇವಾಲಯದ ಹೊರ ನಿಂತು ದೇವಿಯ ಆಶೀರ್ವಾದವನ್ನು ಪಡೆದರು. ಕೆಂಚನಾಲ ಗ್ರಾಮದಲ್ಲಿ ನಡೆಯುವ ಶ್ರೀ ಮಾರಿಕಾಂಬಾ ಜಾತ್ರೆ…

Read More

ಮೆಸ್ಕಾಂ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ :

ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದಲ್ಲಿ 183 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಮತ್ತು ಡಿಪ್ಲೋಮಾ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿಗೆ ಮುಂದಾಗಲಾಗಿದೆ. ಆನ್‌ಲೈನ್ ಮೂಲಕ ಸೂಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜೂನ್ 15 ಆಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ. ಸಂಸ್ಥೆಯ ಹೆಸರು: ಮಂಗಳೂರು ವಿದ್ಯುತ್…

Read More

ಎಂಎಲ್ ಸಿ ಸ್ಥಾನಕ್ಕೆ ಆಯನೂರು ಮಂಜುನಾಥ್ ರಾಜೀನಾಮೆ..!!! ಈಶ್ವರಪ್ಪ ಪುತ್ರ ಕಾಂತೇಶ್ ಗೆ ತಮ್ಮ ವಿರುದ್ದ ಸ್ಪರ್ಧಿಸಲು ಪಂಥಾಹ್ವಾನ|ayanur manjunath

ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣಕ್ಕೆ ಇಳಿಯಬೇಕು ಎಂದು ನಿರ್ಧಾರ ಮಾಡಿದ್ದೇನೆ. ಶೀಘ್ರದಲ್ಲೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಚುನಾವಣಾ ಆಖಾಡಕ್ಕೆ ಇಳಿಯುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಸಾರ್ವಜನಿಕ ವೇದಿಕೆಯಲ್ಲಿ ಕೂಡ ನಿಲುವು ಪ್ರಕಟಿಸಿದ್ದೇನೆ. ಪಕ್ಷದ ವೇದಿಕೆಯಲ್ಲಿ ಕೂಡ ನನ್ನ ವಿನಂತಿಯನ್ನು ಸಲ್ಲಿಸಿದ್ದೇನೆ. ಆದರೆ, ವಿನಂತಿಗೆ ಪೂರಕವಾಗಿ ನನಗೆ ಪಕ್ಷದಿಂದ ಟಿಕೆಟ್ ಸಿಗುವ ಲಕ್ಷಣ ಕಾಣಿಸುತ್ತಿಲ್ಲ. ಆದರೆ ಕೆಲವರ ಮಕ್ಕಳ…

Read More

2014ರ ಡಿಸಿಸಿ ಬ್ಯಾಂಕ್ ಹಗರಣ – ಜಿಲ್ಲೆಯ ವಿವಿಧೆಡೆ ಇ ಡಿ (ED) ದಾಳಿ

2014ರ ಡಿಸಿಸಿ ಬ್ಯಾಂಕ್ ಹಗರಣ – ಜಿಲ್ಲೆಯ  ಇ ಡಿ (ED) ದಾಳಿ ಶಿವಮೊಗ್ಗ:  2014ರಲ್ಲಿ ನಡೆದ ಡಿಸಿಸಿ ಬ್ಯಾಂಕ್ ನಕಲಿ ಬಂಗಾರ ಹಗರಣಕ್ಕೆ ಸಂಬಂಧಿಸಿ ಜಾರಿ‌ ನಿರ್ದೇಶನಾಲಯದ ( ಇ. ಡಿ. )ಅಧಿಕಾರಿಗಳು  ಮಂಗಳವಾರ ಶಿವಮೊಗ್ಗ ಮತ್ತು ಭದ್ರಾವತಿಯ ಎಂಟು ಸ್ಥಳಗಳಲ್ಲಿ ದಾಳಿ ನಡೆಸಿದರು. ಅಂದು ಹಗರಣದ ಕೇಂದ್ರಬಿಂದುವಾಗಿದ್ದ ಡಿಸಿಸಿ ಬ್ಯಾಂಕಿನ  ಶಿವಪ್ಪ‌ನಾಯಕ ವೃತ್ತದ ಬಳಿ ಇದ್ದ ಶಾಖೆಯ  ಬ್ಯಾಂಕ್ ಮ್ಯಾನೇಜರ್ ಆಗಿದ್ದ ಶೋಭಾ  ಅವರ ನಿವಾಸ, ಚಾಲಕರಾಗಿದ್ದ ಕಾಮಾಕ್ಷಿ ಬೀದಿಯ ಶಿವಕುಮಾರ್ ಮನೆ, ಭದ್ರಾವತಿ…

Read More

‘ರೈತ ವಿದ್ಯಾನಿಧಿ’ ಪಡೆಯಲು ಪಹಣಿ ಕಾಟ ; ನಿಯಮ ಸಡಿಲಿಸುವಂತೆ ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕ ಆಗ್ರಹ

ಬಸವರಾಜ್‌ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಘೋಷಿಸಿದ್ದ ಯೋಜನೆ ‘ರೈತ ವಿದ್ಯಾನಿಧಿ’. ಯೋಜನೆಯಲ್ಲಿ  ಪಹಣಿ ಸಮಸ್ಯೆಯಿಂದ ಸಾಕಷ್ಟು ವಿದ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತರಾಗುವ ಆತಂಕ ಎದುರಾಗಿದ್ದು, ಯೋಜನೆ ಫಲಾನುಭವಿಗಳಾಗಲು ಪಾಲಿಸಬೇಕಿರುವ ನಿಯಮಾವಳಿಯನ್ನು ಸ್ವಲ್ಪ ಸಡಿಲಿಸಬೇಕೆಂದು ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕ ಆಗ್ರಹಿಸಿದೆ. ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆಯಬೇಕಿದ್ದರೆ ಅರ್ಹ ವಿದ್ಯಾರ್ಥಿ ತಂದೆಯ ಹೆಸರು ಪಹಣಿಯಲ್ಲಿ ಇರಲೇಬೇಕು ಎಂಬ ನಿಯಮವಿದೆ. ಕೃಷಿ ಇಲಾಖೆಯ ‘ಫ್ರೂಟ್ಸ್‌ ಆ್ಯಪ್‌’ನಲ್ಲಿ ಪಹಣಿಯನ್ನು ನಮೂದು ಮಾಡಿ ಅಲ್ಲೊಂದು ಐಡಿ ಪಡೆದರೆ ಮಾತ್ರ…

Read More

ಯುವಕನಿಗೆ ಡಿಕ್ಕಿ ಹೊಡೆದು ಪರಾರಿಯಾದ ಅಪರಿಚಿತ ವಾಹನ : ಸ್ಥಳದಲ್ಲೇ ಯುವಕ ಸಾವು

ಶಿವಮೊಗ್ಗ : ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕ ಬಲಿಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ. ಸಾಗರದ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕಾರೊಂದು ಗಾಡಿಕೊಪ್ಪದ ಹತ್ತಿರ ಯುವಕನಿಗೆ ಡಿಕ್ಕಿ ಹೊಡೆದ ಪರಿಣಾಮಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನನ್ನು ಸಂತೋಷ ಜಾಧವ್ (25) ಎಂದು ಗುರುತಿಸಲಾಗಿದೆ. ದಾವಣಗೆರೆ ಮೂಲದ ಸಂತೋಷ ದಿನ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಗಾಡಿಕೊಪ್ಪದ ತನ್ನ ಸೋದರಮಾವನ ಮನೆಯಲ್ಲಿ ವಾಸವಾಗಿದ್ದನು. ಸ್ಥಳೀಯರ ಮಾಹಿತಿಯ ಪ್ರಕಾರ ಐ20 ಕಾರೊಂದು…

Read More