ಬ್ರೋಕರ್ ಮೂಲಕ ಮದುವೆಯಾದ ಯುವಕ | ಒಂದೇ ತಿಂಗಳಿಗೆ ಹೆಂಡತಿ , ಬ್ರೋಕರ್ ಇಬ್ಬರು ಎಸ್ಕೇಪ್ – ಸಿಂಗಲ್ಸ್ ನೋಡಲೇಬೇಕಾದ ಸುದ್ದಿ.!!

ಬ್ರೋಕರ್ ಮೂಲಕ ಮದುವೆಯಾದ ಯುವಕ | ಒಂದೇ ತಿಂಗಳಿಗೆ ಹೆಂಡತಿ , ಬ್ರೋಕರ್ ಇಬ್ಬರು ಎಸ್ಕೇಪ್ – ಸಿಂಗಲ್ಸ್ ನೋಡಲೇಬೇಕಾದ ಸುದ್ದಿ.!!

ಶಿವಮೊಗ್ಗ: 30 ದಾಟಿದ ಯುವಕರಿಗೆ ಈಗ ಹುಡುಗಿಯರು ಸಿಗೋದೇ ಕಠಿಣವಾಗಿದೆ. ಹೀಗಾಗಿ ಜನರು ಮ್ಯಾರೆಜ್ ಬ್ರೋಕರ್ ಮೊರೆ ಹೋಗುತ್ತಿದ್ದಾರೆ. ಹೀಗೆ ಮ್ಯಾರೆಜ್ ಬ್ರೋಕರ್ ಬಳಿ ಹೋಗಿ ಅವರಿಗೆ ಲಕ್ಷ ಲಕ್ಷ ಹಣ ನೀಡಿ ಯಾಮಾರಿದ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ್ನಲ್ಲಿ ನಡೆದಿದೆ.ಶಿವಮೊಗ್ಗದ ಮಂಜುಳಾ ಸೇರಿ 7 ಜನರ ಮೇಲೆ ಪ್ರಕರಣ ದಾಖಲು.

ಮುಧೋಳ್ ತಾಲೂಕಿನ ಸೋಮಶೇಖರ್ ಎಂಬ ವ್ಯಕ್ತಿ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದರು. ಇವರನ್ನೇ ಟಾರ್ಗೆಟ್ ಮಾಡಿದ ಮ್ಯಾರೇಜ್ ಬ್ರೋಕರ್ ಟೀಮ್​ ಹೆಣ್ಣು ಕೊಡಸ್ತೀವಿ ಅಂತ ಹೇಳಿ 4 ಲಕ್ಷ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಇಟ್ಟಿತ್ತು. ಹೆಣ್ಣು ಸಿಗದೆ ಪರದಾಡುತ್ತಿದ್ದ ಸೋಮಶೇಖರ್ ಇದಕ್ಕೆ ಒಪ್ಪಿಕೊಂಡಿದ್ದರು.

ಕೊನೆಗೆ ಮುಧೋಳ್​ನ ಕಾಳಿಕಾದೇವಿ ದೇಗುಲದಲ್ಲಿ ವರ್ಷದ ಹಿಂದೆ  ಶಿವಮೊಹ್ಗದ ಯುವತಿ ಜೊತೆ ಮದುವೆಯೂ ಆಯ್ತು. ಮದುವೆಯ ದಿನವೇ4 ಲಕ್ಷ ರೂಪಾಯಿ ಹಣ ಪಡೆದಿದ್ದ ಬ್ರೋಕರ್. ಮದುವೆಯಾಗಿ ಒಂದೇ ತಿಂಗಳಲ್ಲಿ ಸೋಮಶೇಖರ್ ಪತ್ನಿ ಮನೆಯಿಂದ ಎಸ್ಕೇಪ್ ಆಗಿದ್ದಾಳೆ.

ಈ ಬಗ್ಗೆ ಕೇಳೋಣ ಅಂತ ಬ್ರೋಕರ್ ಹತ್ತಿರ ಹೋದ್ರೆ ಆ ಕಡೆ ಅವನು ಎಸ್ಕೇಪ್ ಆಗಿದ್ದಾನೆ.

ಸೋಮಶೇಖರ್​ಗೆ ಮೋಸವಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು. ಪತ್ನಿಯ ಬಗ್ಗೆ ವಿಚಾರಿಸಲು ಹೋದ ವೇಳೆ ಆಕೆಗೆ ಈ ಮೊದಲೇ ಎರಡು ಮದುವೆಯಾದ ವಿಷಯ ಬೆಳಕಿಗೆ ಬಂದಿದೆ. ಹಣ ಮಾಡಲು ಮಹಿಳೆಯನ್ನು ಮುಧೋಳಕ್ಕೆ ಈ ಗ್ಯಾಂಗ್ ಕರೆತಂದಿತ್ತು ಎಂದು ಹೇಳಲಾಗಿದೆ.

ಬ್ರೋಕರ್ ಟೀಮ್​ಗೆ 4 ಲಕ್ಷ ಹಣ ಮರಳಿಸುವಂತೆ ಕೇಳಿಕೊಂಡಿದ್ದಾರೆ ಸೋಮಶೇಖರ್, ಕೊನೆಗೆ ಹಣ ಬಾರದೇ ಇದ್ದಾಗ ಮುಧೋಳ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸೋಮಶೇಖರ್ ಜೊತೆ ಶಿವಮೊಗ್ಗಾದ ಮಂಜುಳಾ ಎಂಬುವವಳ ಮದುವೆಯಾಗಿತ್ತು. ಸದ್ಯ ಮುಧೋಳ್ ಪೊಲೀಸ್ ಠಾಣೆಯಲ್ಲಿ ಆರೋಪಿ ಸತ್ಯಪ್ಪ ಮತ್ತು ಮಂಜುಳಾ ಸೇರಿ 7 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *