ಹರತಾಳು ಹಾಲಪ್ಪ ಓರ್ವ ಗೂಂಡಾ ಹಾಗೂ ದುಷ್ಟ ಶಾಸಕ : ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು

ಸಾಗರ ; ಹಲ್ಲೆ ಎನ್ನುವುದು ನಡೆಯಬಾರದು. ಅದು ಸಹ ಶಾಸಕರ‌ ಸಮ್ಮುಖದಲ್ಲಿ ನಡೆದಂತಹ ಹಲ್ಲೆಗಳು ಖಂಡಿಸಬೇಕಾಗಿದೆ. ಇತ್ತಿಚೆಗೆ ಸಾಗರದ ಪ್ರತಿಷ್ಟಿತ ವಿದ್ಯಾ ಸಂಸ್ಥೆಗಳ ಜನಕವಾಗಿರುವ ಮಲೆನಾಡು ಅಭಿವೃದ್ಧಿ ಪ್ರತಿಷ್ಟಾನದ  ಸರ್ವ ಸದಸ್ಯರ ಸಭೆಯಲ್ಲಿ ನಡೆದ ಶಾಸಕರು ಮತ್ತು ಬೆಂಬಲಿಗರು ಮಾಡಿದ ಹಲ್ಲೆ ಮಾನವ ಸಮಾಜ ತಲೆ ತಗ್ಗಿಸುವಂತದ್ದು ಎಂದು ಮಾಜಿ ಸಾಗರ ಕ್ಷೇತ್ರ ಶಾಸಕ ಮತ್ತು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸಕರನ್ನು ಆಹ್ವಾನ ಮಾಡಿದ್ದರು‌ ಅದಕ್ಕೆ ಅವರು ಅರ್ಹರಾದರೂ ಹಲ್ಲೆ ನಡೆಸುವ ಕೆಲಸ ಮಾಡಲು ಅರ್ಹರೇ ಎಂದು ಪ್ರಶ್ನಿಸಿದರು. ಜಗದೀಶಗೌಡ ಮತ್ತು ಶ್ರೀಪಾದ ಹೆಗಡೆ ನಿಸರಾಣಿಯವರ ಮನೆಗೆ ನಾನು ಭೇಟಿ ನೀಡಿ ಸಮಾಧಾನ ಹೇಳಿದ್ದೇನೆ. ಅವರು ತಮ್ಮ ಕುಟುಂಬ ಸಮೇತ ನಾನು ಭೇಟಿ ನೀಡಿದಾಗ ಕಣ್ಣೀರು ಹಾಕಿದ್ದಾರೆ ಅದರ ಶಾಪ ಶಾಸಕ ಹಾಲಪ್ಪಗೆ ತಟ್ಟಲಿದೆ ಎಂದು ಹೇಳಿದರು. ಶ್ರೀಪಾದ ಹೆಗಡೆಯವರ ಹೆಂಡತಿ ಮತ್ತು ಮಗಳು ಹಲ್ಲೆಯಾದಾಗ ಅಳುತ್ತಿದ್ದರು ಆದರೆ ಶಾಸಕ ಹಾಲಪ್ಪ ಅದನ್ನು ನೋಡಿ ನಗುತ್ತಿದ್ದರಂತೆ ಇದು ನೀಚತನದ ಪರಮಾವಧಿ ಎಂದರು. ಬಿಜೆಪಿ ಶಿಸ್ತಿನ ಪಕ್ಷ ಆದರೆ ಹಲ್ಲೆ ನಡೆಸಿದ ಶಾಸಕರ ಮೇಲೆ ಏನು ಕ್ರಮ ಕೈಗೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಪೋಲೀಸರು ಸಹ ಹಾಲಪ್ಪರ ಚೇಲಾದಂತೆ ವರ್ತಿಸಿದ್ದಾರೆ. ಆದರೆ ಎಫ್’ಐಆರ್ ಆಗದೇ ಇರುವುದು ದುರಂತ. ಈ ವಿಷಯವನ್ನು ನಾನು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಬಳಿ ಕೊಂಡೊಯ್ಯೂತ್ತೇನೆ ಎಂದರು. ಶಾಸಕರಾದವರು ಎಲ್ಲರನ್ನು ಜೊತೆಗೊಯ್ಯಬೇಕು. ಆದರೆ ಒಡೆದು ಆಳುವ ತಂತ್ರಮಾಡುವ ಕೆಲಸ ಶಾಸಕ ಹಾಲಪ್ಪ ಮಾಡುತ್ತಿದ್ದಾರೆ. 

ಶಾಸಕರಿಗೆ ಸಾಗರದ ಜನತೆ ಮತ ನೀಡಿದ್ದು ಯಡಿಯೂರಪ್ಪನವರ ಮುಖ ನೋಡಿಯೇ ವಿನಃ ಹಾಲಪ್ಪನನ್ನು ನೋಡಿ ಅಲ್ಲ.‌ ವಲಸಿಗರಾದವರು ಶಾಸಕರಾದರೇ ಹೊಡೆದಾಟವೇ ಗತಿ ಎಂದು ಹೇಳಿದರು.‌ 

ಈ ಕೂಡಲೇ ಶಾಸಕರು ಎಫ್’ಐಆರ್ ಹಾಕದಂತೆ ಪೋಲೀಸರ ಮೇಲೆ ಹಾಕರುವ ಒತ್ತಡವನ್ನು ಹಿಂಪಡೆದು ಅವರೇ ಎಫ್’ಐಆರ್ ದಾಖಲಿಸಬೇಕು. ಅವರ ಸಮ್ಮುಖದಲ್ಲಿ ನಡೆದ ಹಲ್ಲೆಗೆ ಬೇರಾರು ಸಾಕ್ಷಿ ಬೇಡ ಎಂದರು. ನಮ್ಮ ಸಾಗರ ಶಾಂತವಾಗಿತ್ತು. ಈಗ ಗೂಂಡಾ ಸಾಗರ ಆಗುತ್ತಿದೆ ಎಂದರು. ನನ್ನ ಹತ್ತು ವರುಷಗಳ ಆಡಳಿತದಲ್ಲಿ ಎಲ್ಲಿಯೂ ಹಲ್ಲೆಗಳು ಗೂಂಡಾಗಿರಿ ವರ್ತನೆಗಳು ನಡೆದಿರಲಿಲ್ಲ. ಆದರೆ ಈಗ ನಾಲ್ಕು ವರುಷದಲ್ಲಿ ಹಲ್ಲೆಗಳಾಗುತ್ತಿದೆ. ಆಸ್ಪತ್ರೆಯಲ್ಲೂ ಹಲ್ಲೆ ಮಾಡಿದರು. ಪ್ರಶ್ನೆ ಮಾಡುವವರನ್ನು ಹೆದರಿಸಿಡುವ ತಂತ್ರ ಮಾಡುತ್ತಿದ್ದಾರೆ ಎಂದರು. 

ಶಾಸಕರು‌ ಸಂತೆ ಮಾರುಕಟ್ಟೆಯನ್ನು ಮದುವೆ ಆರತಕ್ಷತೆಗೆ ಬಳಸಿದ್ದಾರೆ. ಅದನ್ನು ಕೂಡಲೇ ಲೋಕಾರ್ಪಣೆ ಮಾಡಬೇಕೆಂದರು. ಗಣಪತಿ ಕೆರೆ ವಿಚಾರದಲ್ಲಿ ಒತ್ತುವರಿ ಮಾಡಿದ್ದಕ್ಕೆ ಹಾಲಪ್ಪನವರಿಗೆ ನೋಟೀಸ್ ನೀಡಲಾಗಿದೆ. ಶಾಸಕರೇ ಕೆರೆಯ ಜಾಗ ಒತ್ತುವರಿ ಮಾಡಿದರೆ ಹೇಗೆ? ಇತ್ತಿಚೆಗೆ ಸಾಗರಕ್ಕೆ ಶಿವಾಜಿ ಜಯಂತಿಗೆ ಬಂದ ಪ್ರಭಾಕರ ಭಟ್ ಕಲ್ಲಡ್ಕ ಶಾಸಕರು ಬಂದ ನಂತರ ಕೆರೆ ಅಪಾಯದಲ್ಲಿದೆ ಎಂದು ಹೇಳಿದ್ದಾರೆ. ಅವರು ಬಿಜೆಪಿಯವರು ಈ ಹೇಳಿಕೆ ನೀಡಿರುವುದು ಅಧಿಕಾರಿಗಳಿಂದ ತಪ್ಪು ನಡೆಯಲು ಶಾಸಕರು ಕಾರಣ ಎಂದಾಗಿರಬಹುದು ಎಂದರು.‌ 

ಜಗದೀಶಗೌಡರು ಮತ್ತು ಶ್ರೀಪಾದ ಹೆಗಡೆ ನಿಸರಾಣಿ ಇಬ್ಬರು ಬಿಜೆಪಿ ಪಕ್ಷದವರು ಸ್ವಪಕ್ಷದವರ ಮೇಲೆಯೇ ಹಲ್ಲೆ ನಡೆಸುವಷ್ಡು ನೀಚತನಕ್ಕೆ ಶಾಸಕ ಹಾಲಪ್ಪ ಓರ್ವ ಚಪ್ಪರ್ ಶಾಸಕ ಅವರು ಹಲ್ಲೆ ಮಾಡಲು ಇಳಿದಿರುವುದು ಸಾಗರದಲ್ಲಿ ಈ ಹಿಂದೆ ಎಲ್ಲಿಯೂ ನಡೆದಿರಲಿಲ್ಲ ಎಂದರು. ಶಾಸಕ ಹಾಲಪ್ಪನವರಿಗೆ ಎಂಡಿಎಫ್ ಸರ್ವ ಸದಸ್ಯರ ಸಭೆಗೆ ಕರೆದಾಗ ಸೊರಬದ ಕುಮಾರ್ ಬಂಗಾರಪ್ಪನವರಿಗೆ ಆಹ್ವಾನ ನೀಡದಿರಿರುವುದು ಸರಿಯೇ ಎಂದು ಪ್ರಶ್ನಿಸಿದರು.

ಗೋಷ್ಟಿಯಲ್ಲಿ ನಗರಸಭಾ ವಿರೋಧ ಪಕ್ಷದ ನಾಯಕ ಗಣಪತಿ ಮಂಡಗಳಲೆ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಸೋಮಶೇಖರ ಲಾವಿಗೆರೆ, ಯಶವಂತ ಫಣಿ, ಗಲ್ಲಿ ವೆಂಕಟೇಶ್, ಅನಿತಾ ಕುಮಾರಿ, ತಾರಾಮೂರ್ತಿ, ಅನ್ವರ್ ಭಾಷಾ, ನಾರಾಯಣ ಬೋಟಿ, ಸಂತೋಷ್ ಸದ್ಗುರು ಇನ್ನಿತರರು ಹಾಜರಿದ್ದರು..

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇




Leave a Reply

Your email address will not be published. Required fields are marked *