POSTMAN NEWS

ನೈಜ ಸುದ್ದಿ ನೇರ ಬಿತ್ತರ..

ರಿಪ್ಪನ್ ಪೇಟೆ ಯಲ್ಲಿ ಶುಕ್ರವಾರ ಡಾ. ಶಿವಕುಮಾರ ಮಹಾಸ್ವಾಮಿಗಳವರ 115ನೇ ವರ್ಷದ ಜನ್ಮದಿನಾಚರಣೆ:

ರಿಪ್ಪನ್ ಪೇಟೆ : ನಡೆದಾಡುವ ದೇವರು ತ್ರಿವಿಧ ದಾಸೋಹಿ,ಶತಾಯುಷಿ,ಕಾಯಕಯೋಗಿ ಲಿಂಗೈಕ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು 115ನೇ ವರ್ಷದ ಜನ್ಮದಿನಾಚರಣೆಯನ್ನು  ಏಪ್ರಿಲ್ 1 ಶುಕ್ರವಾರದಂದು  ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಡಾ. ಶಿವಕುಮಾರ ಮಹಾಸ್ವಾಮಿ ಗಳವರ ಭಕ್ತ ವೃಂದದವರು ತಿಳಿಸಿದ್ದಾರೆ.


 ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕ ಕಗ್ಗಲಿ ಲಿಂಗಪ್ಪ ಮಾತನಾಡಿ ಶುಕ್ರವಾರದಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಡಾಕ್ಟರ್ ಶಿವಕುಮಾರ ಶ್ರೀಗಳ 115ನೇ ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
 
ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ಮತ್ತು ಆಶೀರ್ವಚನವನ್ನು ಶ್ರೀಶೈಲ ಶಾಖಾ ಶ್ರೀ ಶಿವಲಿಂಗೇಶ್ವರ ಬ್ರಹನ್ಮಠ ಕೋಣಂದೂರಿನ  ಶ್ರೀ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನೀಡಲಿದ್ದಾರೆ.

 ಈ ಸಮಾರಂಭದಲ್ಲಿ  ಸಮಾಜ ಸೇವಕರಾದ ಹೆಚ್. ಎಲ್.ಚಂದ್ರಶೇಖರ್. ಅಂತರಾಷ್ಟ್ರೀಯ ಯೋಗ ಪಟು ಕುಮಾರಿ ಕಾವ್ಯ ಕೆ. ಎನ್. ರವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದ ಅವರು  ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಯಶಸ್ವಿಗೊಳಿಸಿ ಕೊಡಬೇಕಾಗಿ ಈ ಸಂದರ್ಭದಲ್ಲಿ ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ. ಆಸೀಫ಼್ ಭಾಷಾಸಾಬ್. ಜನಜಾಗೃತಿ ವೇದಿಕೆ ಅಧ್ಯಕ್ಷ ಟಿ. ಆರ್.ಕೃಷ್ಣಪ್ಪ. ಬಸಪ್ಪ  ಬಿ. ಹೆಚ್, ಜಂಬಳ್ಳಿ ಸದಾನಂದ ,ಶಾಂತಕುಮಾರ್,ಸತೀಶ್ ಹೆಗಡೆ,  ಧರ್ಮರಾಜ್. ಕೊಳವಳ್ಳಿ  ರಮೇಶ್ , ದೂನ ಸೋಮಶೇಖರ್ ಇನ್ನಿತರರಿದ್ದರು.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.