w
Headlines
Home » ಯುವಕನಿಗೆ ಡಿಕ್ಕಿ ಹೊಡೆದು ಪರಾರಿಯಾದ ಅಪರಿಚಿತ ವಾಹನ : ಸ್ಥಳದಲ್ಲೇ ಯುವಕ ಸಾವು

ಯುವಕನಿಗೆ ಡಿಕ್ಕಿ ಹೊಡೆದು ಪರಾರಿಯಾದ ಅಪರಿಚಿತ ವಾಹನ : ಸ್ಥಳದಲ್ಲೇ ಯುವಕ ಸಾವು

ಶಿವಮೊಗ್ಗ : ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಯುವಕ ಬಲಿಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಸಾಗರದ ಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕಾರೊಂದು ಗಾಡಿಕೊಪ್ಪದ ಹತ್ತಿರ ಯುವಕನಿಗೆ ಡಿಕ್ಕಿ ಹೊಡೆದ ಪರಿಣಾಮಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತನನ್ನು ಸಂತೋಷ ಜಾಧವ್ (25) ಎಂದು ಗುರುತಿಸಲಾಗಿದೆ.

ದಾವಣಗೆರೆ ಮೂಲದ ಸಂತೋಷ ದಿನ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಗಾಡಿಕೊಪ್ಪದ ತನ್ನ ಸೋದರಮಾವನ
ಮನೆಯಲ್ಲಿ ವಾಸವಾಗಿದ್ದನು.

ಸ್ಥಳೀಯರ ಮಾಹಿತಿಯ ಪ್ರಕಾರ ಐ20 ಕಾರೊಂದು ನಂಜಪ್ಪ ಲೈಫ್ ಕೇರ್‌ ಹತ್ತಿರ ಕುದುರೆ ಯೊಂದಕ್ಕೆ ಗುದ್ದಿದೆ. ಗಾಡಿಕೊಪ್ಪದ ಹತ್ತಿರ ಸಂತೋಷ್ ಗೆ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದ ವಾಹನವೇ ನಂಜಪ್ಪ ಲ್ಯ್ಫ಼್ ಕೇರ್ ಬಳಿ ಕುದುರೆಗೂ ಗುದ್ದಿದೆ ಎಂದು ಹೇಳಲಾಗುತ್ತಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಂಚಾರಿ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರು ಚಾಲಕನಿಗಾಗಿ
ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.