ರಿಪ್ಪನ್‌ಪೇಟೆ : ಪುನೀತ್ ಪುಣ್ಯ ಸ್ಮರಣೆ |ರಾಜರತ್ನ ಮರೆಯಾಗಿ ಕಳೆದೇ ಹೋಯ್ತು ಎರಡು ವರ್ಷ
ಮೊನ್ನೆ ಮೊನ್ನೆ ನಡೆದಿದೆಯೇನೋ.. ಎಂಬ ಭಾವನೆ ಇಂದಿಗೂ ಜನರ ಮನಸ್ಸಿನಲ್ಲಿದೆ. ಅಪ್ಪು ಅಗಲಿಕೆಗೆ ಆಗಲೇ ಎರಡು ವರ್ಷ. ಆ ದಿನ ಇಡೀ ಕರುನಾಡು ಕಣ್ಣೀರಿಟ್ಟಿತ್ತು.
ಕರ್ನಾಟಕ ರತ್ನ ಡಾ| ಪುನೀತ್ ರಾಜ್‍ಕುಮಾರ್ ರವರ ದ್ವಿತೀಯ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ವಿನಾಯಕ ವೃತ್ತದಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜ್‍ಕುಮಾರ್ ಅಭಿಮಾನಿ ಬಳಗದ ವತಿಯಿಂದ ಪುನೀತ್ ಕಟೌಟ್ ಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ಉಲ್ಲಾಸ್ ತೆಂಕೋಲ್,ಪ್ರಧಾನ ಕಾರ್ಯದರ್ಶಿ ಚಿಗುರು ಶ್ರೀಧರ್, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್,ರಿಪ್ಪನ್‌ಪೇಟೆ ಪಿಎಸ್‌ಐ ಪ್ರವೀಣ್ ಎಸ್ ಪಿ ಮುಖಂಡರಾದ ಅರ್ ಎ ಚಾಬುಸಾಬ್, ಮಂಜುನಾಥ್ ಕಾಮತ್ ,ಆನಂದ್ ಮೆಣಸೆ,ಆರ್ ಎನ್ ಮಂಜುನಾಥ್ , ಮಲ್ಲಿಕಾರ್ಜುನ್, ಹಸನಬ್ಬ,ಆರ್ ಎಸ್ ಶಂಶುದ್ದೀನ್, ರಮೇಶ್ ಫ್ಯಾನ್ಸಿ, ಶೀಲಾ ಆರ್ ಡಿ ,ಯೋಗೇಂದ್ರಪ್ಪ ಗೌಡ ಪ್ರಕಾಶ್ ಪಾಲೇಕರ್ ,ಸಾಜೀದಾ ಹನೀಫ಼್,ನಿರ್ಮಲ ,ಸೀಮಾ,ನಿರಂಜನ್ ಕನ್ನಡಿಗ, ವಿಜಯ್ ಹಾಗೂ ಇನ್ನಿತರರಿದ್ದರು.
ಬಾಲ್ಯದಲ್ಲಿಯೇ ಸಿನಿಮಾ ಜಗತ್ತಿಗೆ ಕಾಲಿಟ್ಟ ಅಪ್ಪು ಪ್ರೇಕ್ಷಕರಿಗೆ ಮನರಂಜನಾ ಸಿನಿಮಾದ ಔತಣ ನೀಡಿದರು. ಎರಡನೇ ವರ್ಷದ ಸ್ಮರಣೆಯ ಸಂದರ್ಭದಲ್ಲಿ, ಅವರ ಸಮಾಜಮುಖಿ ಸಂದೇಶ ನೀಡುವ ಚಲನಚಿತ್ರಗಳು ಕೇವಲ ಮನರಂಜನೆಯನ್ನು ಮಾತ್ರವಲ್ಲದೆ ಪ್ರಮುಖ ಸಾಮಾಜಿಕ ಸಂದೇಶಗಳನ್ನ ನೀಡುವಂತಹ ಸಿನಿಮಾಗಳನ್ನ ಮಾಡಿ ನಮ್ಮೆಲ್ಲರಿಗೆ ಪ್ರೇರಣೆ ನೀಡಿದ್ದಾರೆ
ಅಪ್ಪು ಕೇವಲ ಸಿನೆಮಾಗಳಿಗೆ ಮಾತ್ರ ಸೀಮಿತವಾಗಿರದೆ ಸಿನೆಮಾ ಗಳಲ್ಲಿ ತೋರಿಸಿದ ರೀತಿಯಲ್ಲೇ ನಿಜ ಜೀವನದಲ್ಲಿ ಅನೇಕ ಸಮಾಜಮುಖಿ ಸೇವೆಗಳನ್ನು ಮಾಡಿ ಜನರಿಗೆ ಸ್ಪೂರ್ತಿ ನೀಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಎರಡು ವರ್ಷಗಳು ಕಳೆದರೂ ಅವರ ಪರಂಪರೆ ಕರುನಾಡಿನ ಜನರ ಹೃದಯದಲ್ಲಿ ವಿಜೃಂಭಿಸುತ್ತಲೇ ಇದೆ. ಪುನೀತ್ ರಾಜ್‌ಕುಮಾರ್ ಅವರನ್ನು ಜನರು ಅಭಿಮಾನಿಗಳು ಇನ್ನೂ ಪ್ರೀತಿಸುತ್ತಿದ್ದಾರೆ ಮತ್ತು ಅವರ ಸ್ಮರಣೆಯು ವಿವಿಧ ರೀತಿಯಲ್ಲಿ ಜನರಿಗೆ ಉತ್ತಮ ಮಾರ್ಗವನ್ನು ನೀಡುತ್ತದೆ.