WhatsApp Channel Join Now
Telegram Channel Join Now
ಮಲೆನಾಡಿನ ಯುವ ನಿರ್ದೇಶಕ ಉಮೇಶ್ ಕೆ ಕೃಪಾ ನಿರ್ದೇಶಿಸಿರುವ ಟಗರು ಪಲ್ಯ ಚಲನಚಿತ್ರ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಳ್ಳುತಿದ್ದೆ.

ಶಿವಮೊಗ್ಗ ಜಿಲ್ಲೆಯ ಕುಂಸಿ ಗ್ರಾಮದ ಉಮೇಶ್ ಕೆ ಕೃಪಾ ರವರ ತಂದೆ ರೈಲ್ವೆ ನೌಕರರಾದ ಕೃಷ್ಣಪ್ಪ ಹಾಗೂ ತಾಯಿ‌ ಕಾಳಮ್ಮ 45 ವರ್ಷಗಳ ಹಿಂದೆ ರೈಲ್ವೆ ಇಲಾಖೆಯಿಂದ ಕೆಲಸಕ್ಕೆ ಬಂದ ಅವರು ಕುಂಸಿ ಗ್ರಾಮದಲ್ಲಿ ನೆಲೆಸಿದ್ದಾರೆ.
ಕೃಷ್ಣಪ್ಪ ಹಾಗೂ ಕಾಳಮ್ಮ ದಂಪತಿಗಳಿಗೆ ಯುವ ನಿರ್ದೇಶಕ ಉಮೇಶ್ ,ರೈಲ್ವೆ ಇಲಾಖೆಯ ಉದ್ಯೋಗಿ ರಂಗಸ್ವಾಮಿ ,ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಪ್ರಕಾಶ್ ಮೂವರು ಗಂಡು ಮಕ್ಕಳಿದ್ದಾರೆ.

ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಉಮೇಶ್ ಕಷ್ಟದಲ್ಲಿಯೇ ಜೀವನ ನಡೆಸಿದ್ದರು ಬಾಲ್ಯದಿಂದಲೇ ಚಿತ್ರ ಕಲೆಯಲ್ಲಿ ಬಹಳ ಆಸಕ್ತಿ ಹೊಂದಿದವರು,ಮಣ್ಣಿನಲ್ಲಿ ಗಣಪತಿ ರಚನೆ ಮಾಡುವುದು, ಮಂಟಪದಲ್ಲಿ ಶೃಂಗಾರ ಗೊಳಿಸುವುದು, ಪೇಂಟಿಂಗ್ ಮಾಡುವುದು.ಪಿಯುಸಿ  ಮುಗಿಯುತಿದ್ದಂತೆ ದಾವಣಗೆರೆ ಯಲ್ಲಿ ಲಲಿತ ಕಲಾ ಮಹಾವಿದ್ಯಾಲಯ ದಲ್ಲಿ 5 ವರ್ಷ ಬ್ಯಾಚುಲರ್ of ಫೈನ್ ಆರ್ಟ್ ಡಿಗ್ರಿ ಯಲ್ಲಿ ಗೋಲ್ಡ್ ಮೆಡಲ್ ಪಡೆದುಕೊಳ್ಳುತ್ತಾರೆ.

ಮುಂದೆ ಸಿನಿಮಾ ಜಗತ್ತಿನ ಕಡೆ ತೆರಳಿದ ಉಮೇಶ್ ಮೊದ ಮೊದಲು ಸಹಾಯಕ ನಿರ್ದೇಶಕನಾಗಿ ಮಾಸ್ತಿಗುಡಿ , ರಣವಿಕ್ರಮ ,ಜಯಮ್ಮನ ಮಗ ,ಗಾಳಿಪಟ 2 ,ಪಂಚತಂತ್ರ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕೆಲಸ ನಿರ್ವಹಿಸಿದ್ದರು.

ಸತತ ಪ್ರಯತ್ನ ಹಾಗೂ ಪರಿಶ್ರಮದಿಂದ ಮೊಟ್ಟಮೊದಲನೇ ಬಾರಿಗೆ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ “ಟಗರು ಪಲ್ಯ” ಸಿನಿಮಾಗೆ ಕಥೆ ಚಿತ್ರಕಥೆ ಬರೆದು ನಿರ್ದೇಶಿಸಿ ಯಶಸ್ವಿಯಾಗಿದ್ದಾರೆ

ಒಂದೇ ದಿನದಲ್ಲಿ ನಡೆಯುವ ಕಥೆಯನ್ನು ಸಿನಿಮಾ ಮೂಲಕ ತೋರಿಸುವುದು ಅಷ್ಟು ಸುಲಭವಲ್ಲ. ಆದರೆ, ‘ಟಗರು ಪಲ್ಯ’ ಸಿನಿಮಾ ನೋಡಿದ ಮೇಲೆ ಈ ಸವಾಲಿನ ಕೆಲಸವನ್ನು ನಿರ್ದೇಶಕರು ಅಚ್ಚುಕಟ್ಟಾಗಿಯೇ ಮಾಡಿದ್ದಾರೆ ಅಂತಾ ಅನಿಸದೆ ಇರಲ್ಲ. ಮುಂಜಾನೆಯಿಂದ ಸಂಜೆ ತನಕ ನಡೆಯುವ ಕಥೆಯನ್ನು ಎಲ್ಲೂ ಬೋರಾಗದಂತೆ ಕಟ್ಟಿಕೊಟ್ಟಿದ್ದಾರೆ. ಹಳ್ಳಿ ಸೊಗಡಿನ ಸಿನಿಮಾ ಟಗರು ಪಲ್ಯವನ್ನು ಇನ್ನೂ ಚೆಂದವಾಗಿ ಕಾಣುವಂತೆ ಮಾಡಿದ್ದು ಕಲಾವಿದರು.

ಪ್ರತಿಭಾವಂತ ಕಲಾವಿದರ ಸಂಗಮದಿಂದ ಮೂಡಿ ಬಂದ ಚಿತ್ರವೇ ಟಗರು ಪಲ್ಯ. ಗ್ರಾಮೀಣ ಭಾಗದಲ್ಲಿ ನಡೆಯುವ ಒಂದು ಆಚರಣೆಯನ್ನೇ ಕಥೆಯಾಗಿಟ್ಟುಕೊಂಡು ಹೊಸ ನಿರ್ದೇಶಕ ಉಮೇಶ್ ಕೆ. ಕೃಪಾ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಡಾಲಿ ಧನಂಜಯ್ ಅವರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಕಾಡಿನೊಳಗೆ ಇರುವ ಊರಿನ ದೇವಿಗೆ ಹರಕೆ ತೀರಿಸಲು ಬರುವ ಕುಟುಂಬದ ಕಥೆ ಈ ಸಿನಿಮಾದಲ್ಲಿದೆ. ಕುರಿಯನ್ನು ಬಲಿ ಕೊಡುವುದಕ್ಕೂ ಮುನ್ನ ಆ ಕುರಿ ತಲೆ ಅಲ್ಲಾಡಿಸುವ ಮೂಲಕ ಅನುಮತಿ ನೀಡಬೇಕು. ತಲೆ ಅಲ್ಲಾಡಿಸದ ಹೊರತು ಕುರಿಯನ್ನು ಕಡಿಯುವಂತಿಲ್ಲ ಎಂಬುದು ಜನರ ನಂಬಿಕೆ. ತಲೆ ಅಲ್ಲಾಡಿಸದಿದ್ದರೆ ಆ ಸಂದರ್ಭದಲ್ಲಿ ಎದುರಾಗುವ ಪ್ರಸಂಗಗಳು ಹೇಗಿರುತ್ತದೆ ಎಂಬುದನ್ನೇ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ ನಿರ್ದೇಶಕ ಉಮೇಶ್. 

ಈ ಚಿತ್ರಕ್ಕೆ ನಾಗಭೂಷಣ ಹೀರೋ, ಅಮೃತಾ ಪ್ರೇಮ್ ಹೀರೋಯಿನ್. ಆದರೆ ಅವರನ್ನೂ ಮೀರಿಸುವ ರೀತಿಯಲ್ಲಿ ರಂಗಾಯಣ ರಘು ಮತ್ತು ತಾರಾ ಅನುರಾಧಾ ಅವರ ಪಾತ್ರಗಳು ಮೂಡಿಬಂದಿವೆ. ಇಡೀ ಸಿನಿಮಾವನ್ನು ರಂಗಾಯಣ ರಘು ಅವರು ಆವರಿಸಿಕೊಂಡಿದ್ದಾರೆ. ಮಗಳಿಗೆ ಮದುವೆ ಮಾಡಬೇಕು ಎಂದು ಸಿಕ್ಕಾಪಟ್ಟೆ ಕಷ್ಟಪಡುವ ತಂದೆಯ ಪಾತ್ರವನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರ ಪತ್ನಿಯ ಪಾತ್ರದಲ್ಲಿ ನಟಿ ತಾರಾ ಕೂಡ ಉತ್ತಮವಾಗಿ ನಟಿಸಿದ್ದಾರೆ. ಈ ಸಿನಿಮಾದ ಎಲ್ಲ ಪಾತ್ರಗಳಿಗೂ ಅವುಗಳದ್ದೇ ಆದಂತಹ ಮಹತ್ವ ಇದೆ. ಚಿತ್ರಾ ಶೆಣೈ, ವಾಸುಕಿ ವೈಭವ್, ಶ್ರೀನಾಥ ವಸಿಷ್ಠ, ಹುಲಿ ಕಾರ್ತಿಕ್, ಶರತ್ ಲೋಹಿತಾಶ್ವ, ವೈಜನಾಥ ಬೀರಾದರ, ಚಂದ್ರಕಲಾ ಸೇರಿದಂತೆ ಎಲ್ಲ ಕಲಾವಿದರು ‘ಟಗರು ಪಲ್ಯ’ ಸಿನಿಮಾದ ಮೆರುಗು ಹೆಚ್ಚಿಸಿದ್ದಾರೆ.

 ಏನನ್ನೂ ಮಾಡದೇ ಸುಮ್ಮನೇ ನಿಂತರೂ ಕೂಡ ‘7 ಸ್ಟಾರ್ ಸುಲ್ತಾನ್’ ಎಂಬ ಟಗರು ಭರ್ಜರಿ ಚಪ್ಪಾಳೆ ಗಿಟ್ಟಿಸುತ್ತದೆ. ಅದು ಕೂಡ ಪ್ರಮಖ ಪಾತ್ರವಾಗಿ ಆಕರ್ಷಿಸುತ್ತದೆ. ನೆನಪಿರಲಿ’ ಪ್ರೇಮ್ ಅವರ ಪುತ್ರಿ ಅಮೃತಾಗೆ ಇದು ಮೊದಲ ಸಿನಿಮಾ. ಅವರ ವಯಸ್ಸಿಗೆ ತಕ್ಕಂತಹ ಪಾತ್ರವೇ ಇಲ್ಲಿ ಅವರಿಗೆ ಸಿಕ್ಕಿದೆ. ಹದಿಹರೆಯದ ಹುಡುಗಿಯ ತಳಮಳಗಳನ್ನು ಅವರು ಚೆನ್ನಾಗಿ ಅಭಿವ್ಯಕ್ತಿಸಿದ್ದಾರೆ. ಮೊದಲಾರ್ಧದಲ್ಲಿ ಅವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲವಾದರೂ ಪ್ರೀ-ಕ್ಲೈಮ್ಯಾಕ್ಸ್ ವೇಳೆಗೆ ಅವರ ಪಾತ್ರ ಹೆಚ್ಚು ಇಷ್ಟವಾಗುತ್ತಾ ಹೋಗುತ್ತದೆ.

ಈ ಚಿತ್ರ ಶತದಿನೋತ್ಸವ ಆಚರಿಸಲೆಂದು ರೈಲ್ವೆ ಇಲಾಖೆಯ ಉದ್ಯೋಗಿ ಹೊನ್ನೇಶ್ ಅರಸಾಳು ,ಮಂಜುಳಾ ಹೊನ್ನೇಶ್ ,ಆಶಿತಾ ಹೊನ್ನೇಶ್ ,ಆಶಿಷ್ ಹೊನ್ನೇಶ್ ಹಾರೈಸಿದ್ದಾರೆ.

Leave a Reply

Your email address will not be published. Required fields are marked *