ಬಾಳೂರು ಗ್ರಾಪಂ ಮಾಜಿ ಅಧ್ಯಕ್ಷ ಕುಕ್ಕಳಲೆ ನಾಗರಾಜ್ ಗೌಡ ನಿಧನ
ರಿಪ್ಪನ್ ಪೇಟೆ : ಇಲ್ಲಿನ ಬಾಳೂರು ಗ್ರಾ.ಪಂ ಮಾಜಿ ಅಧ್ಯಕ್ಷರು ಹಾಗೂ ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ಕುಕ್ಕಳಲೆ ಕೆ.ಆರ್ ನಾಗರಾಜ ಗೌಡರವರು ಹೃದಯಾಘಾತದಿಂದ ಬೆಳಗಿನ ಜಾವ ನಿಧನರಾಗಿದ್ದಾರೆ.
ಬಾಳೂರು ಗ್ರಾಪಂ ಅಧ್ಯಕ್ಷರಾಗಿ ಹಾಗೂ ವೀರಶೈವ ಸಮಾಜದ ಮುಖಂಡರಾಗಿ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ನಾಗರಾಜ್ ಗೌಡ ರವರು ಅಲ್ಪ ಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತಿದ್ದರು.
ಕುಕ್ಕಳಲೆ ರೇಣುಕಪ್ಪ ಗೌಡ ರವರ ಪುತ್ರರಾದ ನಾಗರಾಜ್ ಗೌಡ ಪತ್ನಿ , ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 03:00 ಘಂಟೆಗೆ ಮೃತರ ಸ್ವಗ್ರಾಮ ಕುಕ್ಕಳಲೆಯಲ್ಲಿ ನೆಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.