ಅಂದರ್ ಬಾಹರ್ ಆಡುತ್ತಿದ್ದ 9 ಜನ ಅಂದರ್ 80 ಸಾವಿರ ರು ನಗದು ವಶ ಹೆಬೈಲು ದೇವಸ್ಥಾನ ಬಳಿ ನಡೆದ ಘಟನೆ
ಹೊಸನಗರ : ತಾಲೂಕಿನ ಪುರಪ್ಪೆಮನೆ ಬಳಿಯ ಹೆಬ್ಬೆಲು ಸೋಮೇಶ್ವರ ದೇವಸ್ಥಾನದ ಬಳಿಯ ಅರಣ್ಯ ಪ್ರದೇಶದಲ್ಲಿ ಹಣವನ್ನು ಪಣಕಿಟ್ಟು ಅಂದರ್ ಬಾಹರ್ ಇಸ್ಪೀಟ್ ಆಟವನ್ನು ಕಾನೂನು ಬಾಹಿರವಾಗಿ ಆಡುತಿದ್ದ ಸ್ಥಳಕ್ಕೆ ದಾಳಿ ನಡೆಸಿ 80,500 ರೂ ನಗದು ವಶಪಡಿಸಿಕೊಳ್ಳಲಾಗಿದೆ.
ಅಂದರ್ ಬಾಹರ್ ಆಡುತ್ತಿರುವ ಬಗ್ಗೆ ಖಚಿತ ವರ್ತಮಾನ ಪಡೆದ ಹೊಸನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶಿವಾನಂದ ವೈ ಕೆ ಹಾಗೂ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿ ದಾಳಿ ನಡೆಸಿ ಆನಂದಪುರ ಹಾಗೂ ಸಾಗರ ವಾಸಿಗಳಾದ ಸುರೇಶ ಬಿನ್ ಶ್ರೀಧರ ಹಾಲಪ್ಪ ಬಿನ್ ಕೃಷ್ಣಪ್ಪ ಸುಪ್ರೀತಾ ಬಿನ್ ಕೆಂಚಪ್ಪ ಭಾಸ್ಕರ ಬಿನ್ ಮೋಹನ ರಫೀಕ್ ಬಿನ್ ಇಬ್ರಾಹಿಂ ಕಾರ್ತಿಕ ಬಿನ್ ಪರಶುರಾಮ ಪುರಪ್ಪೆ ಮನೆಯ ಉಪೇಂದ್ರ ಬಿನ್ ಸಂಜೀವ ಉದಯ ಬಿನ್ ಸಂತೋಷ ಟಿಲ್ಲರ್ ಮಂಜು ರವರುಗಳ ವಿರುದ್ಧ ಮೊಕ ದಮೆ ದಾಖಲಿಸಿ ಜೂಜಾಟ ಕ್ಕೆ ತೊಡಗಿಸಿಕೊಂಡಿದ್ದ 80,500 ರೂಗಳನ್ನು 52 ಇಸ್ಪೀಟ್ ಎಲೆ, ಚಾರ್ಜರ್ ಲೈಟ್, ಟಾರ್ಪಲ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಜಿಲ್ಲಾ ಎಸ್ ಪಿ ಮಿಥುನ್ ಕುಮಾರ್ ಜಿ ಕೆ, ಎ ಎಸ್ ಪಿ ಅನಿಲ್ ಕುಮಾರ್, ಎನ್ ಬೂಮರೆಡ್ಡಿ ತೀರ್ಥಹಳ್ಳಿ ಉಪ ವಿಭಾಗದ ಡಿ ವೈ ಎಸ್ ಪಿ ಗಜಾನನ ಎಂ ಸುತಾರ, ಸರ್ಕಲ್ ಇನ್ಸ್ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೆಕ್ಟರ್ ಶಿವಾನಂದ ವೈ ಕೆ ರವರು ಸಿಬ್ಬಂದಿಗಳಾದ ಈರೇಶ್ ಗಂಗಪ್ಪ ಬಟ್ಟೋಲಿ ಸುನಿಲ್ ತೀರ್ಥೇಶ್ ಶಶಿಧರ ಸಂತೋಷ್ ನಾಯಕ್ ಗೋಪಾಲಕೃಷ್ಣ ಅವಿನಾಶ್ ಮಹೇಶ ಸಂದೀಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು