‘ರೈತ ವಿದ್ಯಾನಿಧಿ’ ಪಡೆಯಲು ಪಹಣಿ ಕಾಟ ; ನಿಯಮ ಸಡಿಲಿಸುವಂತೆ ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕ ಆಗ್ರಹ

ಬಸವರಾಜ್‌ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಘೋಷಿಸಿದ್ದ ಯೋಜನೆ ‘ರೈತ ವಿದ್ಯಾನಿಧಿ’. ಯೋಜನೆಯಲ್ಲಿ  ಪಹಣಿ ಸಮಸ್ಯೆಯಿಂದ ಸಾಕಷ್ಟು ವಿದ್ಯಾರ್ಥಿಗಳು ಈ ಸೌಲಭ್ಯದಿಂದ ವಂಚಿತರಾಗುವ ಆತಂಕ ಎದುರಾಗಿದ್ದು, ಯೋಜನೆ ಫಲಾನುಭವಿಗಳಾಗಲು ಪಾಲಿಸಬೇಕಿರುವ ನಿಯಮಾವಳಿಯನ್ನು ಸ್ವಲ್ಪ ಸಡಿಲಿಸಬೇಕೆಂದು ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕ ಆಗ್ರಹಿಸಿದೆ.

ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆಯಬೇಕಿದ್ದರೆ ಅರ್ಹ ವಿದ್ಯಾರ್ಥಿ ತಂದೆಯ ಹೆಸರು ಪಹಣಿಯಲ್ಲಿ ಇರಲೇಬೇಕು ಎಂಬ ನಿಯಮವಿದೆ. ಕೃಷಿ ಇಲಾಖೆಯ ‘ಫ್ರೂಟ್ಸ್‌ ಆ್ಯಪ್‌’ನಲ್ಲಿ ಪಹಣಿಯನ್ನು ನಮೂದು ಮಾಡಿ ಅಲ್ಲೊಂದು ಐಡಿ ಪಡೆದರೆ ಮಾತ್ರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಆದರೆ ಮಲೆನಾಡು ಪ್ರದೇಶದಲ್ಲಿ ಜಮೀನುಗಳು ಬಹಳಷ್ಟು ವಿದ್ಯಾರ್ಥಿಗಳ ತಂದೆ-ತಾಯಿ ಹೆಸರಿಗೆ ವರ್ಗಾವಣೆಗೊಂಡಿಲ್ಲ. ಪೂರ್ವಜರ ಹೆಸರಲ್ಲೇ ಜಮೀನುಗಳಿವೆ. ಅದರಲ್ಲೂ ಅವಿಭಕ್ತ ಕುಟುಂಬಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಸಾಕಷ್ಟು ಕುಟುಂಬಗಳು ವಿದ್ಯಾರ್ಥಿ ವೇತನ ಪಡೆಯುವ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.
ಜಮೀನುಗಳನ್ನು ಪೂರ್ವಜರಿಂದ ತಮ್ಮ ಹೆಸರಿಗೆ ಮಾಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ.ಮಲೆನಾಡಿನಲ್ಲಿ ಜಮೀನನ್ನು ಹಿರಿಯರು ಇರುವ ತನಕ ಖಾತೆ ಬದಲಾವಣೆ ಮಾಡಿಕೊಳ್ಳುವ ಸಂಸ್ಕ್ರತಿ ಇಲ್ಲಾ ಹಾಗಾಗಿ  ಸಾಕಷ್ಟು ರೈತರು ವಿದ್ಯಾನಿಧಿ ವಿದ್ಯಾರ್ಥಿ ವೇತನ ಆಸೆಯನ್ನೇ ಕೈಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪಹಣಿ ನಿಯಮವನ್ನು ಸರಕಾರ ಸಡಿಲಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನೂಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಈ ಸಂಧರ್ಭದಲ್ಲಿ ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಆಸೀಫ಼್ ಭಾಷಾಸಾಬ್,ಕಾಂಗ್ರೆಸ್ ಮುಖಂಡರಾದ ಅಮೀರ್ ಹಂಜಾ,ರವೀಂದ್ರ ಕೆರೆಹಳ್ಳಿ,ಎಂ ಎಂ ಪರಮೇಶ್ ,ರಮೇಶ್ ಫ಼್ಯಾನ್ಸಿ,ಉಲ್ಲಾಸ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *