Headlines

ಶಿವಮೊಗ್ಗ ಗಲಭೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ಮೊದಲ ಆರೋಪಿಯಾಗಬೇಕು : ಸುಂದರೇಶ್ ಆಗ್ರಹ

ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷನ ಶವದ ಮೆರವಣಿಗೆ ದಿನ ನಡೆದ ಗಲಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಎ 1 ಆರೋಪಿ ಮಾಡಿ ಅವರ ಪ್ರಕರಣದ ಕೇಸ್​ ದಾಖಲಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ​ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಎಸ್ ಸುಂದರೇಶ್ ಆಗ್ರಹಿಸಿದ್ದಾರೆ. ಈ ಕುರಿತು ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಹರ್ಷ ಕೊಲೆ ಬಳಿಕ ನಡೆದ ಗಲಭೆಗೆ ನೇರವಾಗಿ ಸಚಿವ ಈಶ್ವರಪ್ಪ ಅವರೇ ಹೊಣೆ. ಹಾಗಾಗಿ…

Read More

ಹೊಸನಗರದ ಜೆಸಿಐ ಅಧ್ಯಕ್ಷೆ ಸೀಮಾ ಕಿರಣ್ ತೆಂಡೂಲ್ಕರ್ ಗೆ ಒಲಿದ ಬೆಸ್ಟ್ ಫರ್ಫಾರ್ಮೆನ್ಸ್ ಆವಾರ್ಡ್ :

ಹೊಸನಗರ : ಇದೇ ತಿಂಗಳ 26-27 ರಂದು ಬಳ್ಳಾರಿಯಲ್ಲಿ ಜೆಸಿಐ ಸಂಸ್ಥೆಯಿಂದ ರಾಜ್ಯದಲ್ಲಿನ ಜೆಸಿಐ ನ ಎಲ್ಲಾ ಅಧ್ಯಕ್ಷ ಸದಸ್ಯರಿಗೆ 24 ಜೋನ್ ಪ್ರೆಸಿಡೆಂಟ್ ಜೆಸಿ ದೀಪಿಕಾ ಎನ್ ಬಿದಿರಿ ಮತ್ತು 24 ಜೋನ್ ಡೈರೆಕ್ಟರ್ ಮ್ಯಾನೆಜ್ ಮೆಂಟ್ ಜೆಸಿ ಅನುಷ್ ಗೌಡ ಇವರುಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಸಲಾಯಿತು. ಹೊಸನಗರ ತಾಲ್ಲೂಕಿನಲ್ಲಿ ಮೊದಲ ಮಹಿಳಾ ಅಧ್ಯಕ್ಷರಾಗಿ ಕೇವಲ 1 ತಿಂಗಳಿನಲ್ಲಿ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿ ಉತ್ತಮ ಸಮಾಜ ಸೇವೆಯನ್ನು ಮಾಡಿದ್ದಕ್ಕೆ ಅಧ್ಯಕ್ಷೆ  ಸೀಮಾ ಕಿರಣ್…

Read More

ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಲಾರಿ : ಲಾರಿ ಕ್ಲೀನರ್ ಸ್ಥಳದಲ್ಲೇ ಸಾವು…!!!

ಆನಂದಪುರ ಸಮೀಪದ ಹೊಸಗುಂದ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಭೀಕರ ಅಪಘಾತವಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಸಗುಂದ ಬಳಿ ಶಿವಮೊಗ್ಗದಿಂದ ಸಾಗರಕ್ಕೆ ಹೊರಟಿದ್ದ ಲಾರಿ (KA 05 AA 5068 ) ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಂದಕಕ್ಕೆ ಗುದ್ದಿದ ಪರಿಣಾಮ ಲಾರಿ ಕ್ಲೀನರ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.ಮೃತರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಈ ಅಪಘಾತದಲ್ಲಿ ಲಾರಿ ಡ್ರೈವರ್ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ….

Read More

ಕುಕ್ಕಳಲೆ ಗ್ರಾಮದ ಪ್ರಗತಿಪರ ಕೃಷಿಕರಾದ ಪುಟ್ಟಸ್ವಾಮಿಗೌಡರು ನಿಧನ

ರಿಪ್ಪನ್ ಪೇಟೆ : ಇಲ್ಲಿಯ ಕುಕ್ಕಳಲೆ ಗ್ರಾಮದ ನಿವಾಸಿ ಕೃಷಿಕ ಪುಟ್ಟಸ್ವಾಮಿಗೌಡ (83) ವರ್ಷ ಇವರು ವಯೋಸಹಜ ಖಾಯಿಲೆಯಿಂದ ಇಂದು ಮುಂಜಾನೆ ನಿಧನರಾಗಿದ್ದಾರೆ. ಇವರು ಪತ್ನಿ,ಪುತ್ರರು ಹಾಗೂ ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  ಮೃತರ ಅಂತ್ಯಕ್ರಿಯೆ ಇಂದು ಸಂಜೆ ಕುಕ್ಕಳಲೆ ಗ್ರಾಮದ ಸ್ವಂತ ಜಮೀನಿನಲ್ಲಿ‌ ನೆರವೇರಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ. ಸಂತಾಪ: ಪುಟ್ಟಸ್ವಾಮಿಗೌಡರ ನಿಧನದ ಸುದ್ದಿ ತಿಳಿದ ಶಾಸಕ ಹಾಗೂ MSIL ಅಧ್ಯಕ್ಷರಾದ ಹರತಾಳು ಹಾಲಪ್ಪ ಮೃತರ ಮನೆಗೆ ತೆರಳಿ ಅಂತಿಮ…

Read More

ಕೃಷ್ಣ ಮೃಗದ ಚರ್ಮ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯ ಮಾಲು ಸಮೇತ ಬಂಧನ

ಶಿವಮೊಗ್ಗ ಜಿಲ್ಲೆಯ ಆನಂದಪುರದ ದಾಸಕೊಪ್ಪ ಬಸ್ ನಿಲ್ದಾಣದ ಬಳಿ ಕೃಷ್ಣ ಮೃಗ ಚರ್ಮಗಳ ಮಾರಾಟದಲ್ಲಿ ತೊಡಗಿರುವ ವ್ಯಕ್ತಿಯನ್ನು ಅರಣ್ಯ ಸಂಚಾರಿದಳದ ಪೋಲೀಸರು ಬಂಧಿಸಿದ್ದಾರೆ. ಆನಂದಪುರದ ದಾಸಕೊಪ್ಪ ಬಸ್ ನಿಲ್ದಾಣದಲ್ಲಿ ಕೃಷ್ಣ ಮೃಗದ ಚರ್ಮ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಾಗರ ಅರಣ್ಯ ಸಂಚಾರಿ ದಳದವರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಶಿಕಾರಿಪುರ ತಾಲೂಕಿನ ಮಳವಳ್ಳಿ ತಾಂಡದ ಮುರಳೀಧರ್ ನಾಯ್ಕ್ ಬಂಧಿತ ವ್ಯಕ್ತಿ. ಈತನಿಂದ ಕೃಷ್ಣ ಮೃಗದ ಚರ್ಮಗಳನ್ನು ಮಾಲು ಸಮೇತ  ವಶಪಡಿಸಿಕೊಂಡು,ಪ್ರಕರಣ ದಾಖಲಿಸಿದ್ದಾರೆ. ಪೋಲೀಸ್ ಅರಣ್ಯ ಸಂಚಾರಿದಳದ ಸಬ್…

Read More

ಮಾ.4 ರವರೆಗೆ ಶಿವಮೊಗ್ಗ ನಗರದಲ್ಲಿ ನಿಷೇದಾಜ್ಞೆ ವಿಸ್ತರಣೆ : ಶಾಲಾ ಕಾಲೇಜು ನಾಳೆಯಿಂದ ಆರಂಭ

ಶಿವಮೊಗ್ಗ ನಗರದಲ್ಲಿ ಮಾರ್ಚ್ 4ರವರೆಗೆ ನಿಷೇಧಾಜ್ಞೆ ಮುಂದುವರೆಯಲಿದೆ. ವ್ಯಾಪಾರ, ವಹಿವಾಟಿಗೆ ಅವಧಿಯನ್ನು ಮತ್ತಷ್ಟು ಹೆಚ್ಚಳ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶದಲ್ಲಿ ತಿಳಿಸಿದ್ದಾರೆ. ಮಾರ್ಚ್ 4ರವರೆಗೆ ಶಿವಮೊಗ್ಗ ನಗರದಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೆ ನಿಷೇಧಾಜ್ಞೆ ಸಡಿಲಗೊಳಿಸಲಾಗಿದೆ. ಈ ಅವಧಿಯಲ್ಲಿ ವ್ಯಾಪಾರ, ವಹಿವಾಟು ಮಾಡಿಕೊಳ್ಳಬಹುದಾಗಿದೆ. ರಾತ್ರಿ 7 ಗಂಟೆ ಬಳಿಕ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ನಾಳೆಯಿಂದ ಶಾಲೆ, ಕಾಲೇಜುಗಳು ಪ್ರಾರಂಭ ಹರ್ಷ ಹಿಂದೂ…

Read More

ಯಡಿಯೂರಪ್ಪ ಹುಟ್ಟುಹಬ್ಬ: 79 ಕೆಜಿ ಕೇಕ್​ ಕತ್ತರಿಸಿ ಅಭಿಮಾನಿಗಳ ಸಂತಸ ಹೆಚ್ಚಿಸಿದ ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಜನ್ಮದಿನವನ್ನು ರಾಜ್ಯಾದ್ಯಂತ ಅವರ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಭಾನುವಾರ ಸರಳವಾಗಿ ಆಚರಿಸಿದರು. ಗಣ್ಯರು, ಅಭಿಮಾನಿಗಳು ಬಿಎಸ್​ವೈ ಅವರಿಗೆ ಶೂಭಕೋರಿದ್ದಾರೆ. ಬೆಂಗಳೂರಲ್ಲಿ ಬಿಎಸ್​ವೈ ಬೃಹತ್​ ಕೇಕ್​ ಕತ್ತರಿಸಿದರು. ತವರು ಕ್ಷೇತ್ರ ಶಿಕಾರಿಪುರ, ಶಿರಾಳಕೊಪ್ಪ, ಜಿಲ್ಲಾ ಕೇಂದ್ರ ಶಿವಮೊಗ್ಗದಲ್ಲಿ ಬಿಎಸ್​ವೈ ಅಭಿಮಾನಿಗಳು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. 79 ಕೆಜಿ ತೂಕದ ಕೇಕ್ ಕತ್ತರಿಸಿದ ಬಿಎಸ್‌ವೈ:  ಬಿಎಸ್‌ವೈ 79ನೇ ಜನ್ಮ ದಿನದ ನಿಮಿತ್ತ 79 ಕೆ.ಜಿ. ತೂಕದ ಕೇಕ್‌ ಅನ್ನು ಕಾವೇರಿ…

Read More

ಬೆಳೆಯುವ ಮಕ್ಕಳಲ್ಲಿ ಸಂಸ್ಕಾರ ಅರಳಬೇಕು: ಆರಗ ಜ್ಞಾನೇಂದ್ರ

ರಿಪ್ಪನ್‌ಪೇಟೆ: ಒಂದು ಶಾಲೆ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆ ಶಾಲೆಯಿಂದ ಮಕ್ಕಳ ಮನಸ್ಸಿನಲ್ಲಿ ಸಂಸ್ಕಾರ ಅರಳುವಂತಾಗಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.  ಹೆದ್ದಾರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ 25 ಲಕ್ಷ ರೂ ವೆಚ್ಚದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ ಶಾಲೆಗಳು ದೇವಸ್ಥಾನಕ್ಕೆ ಸಮ. ದೇವಸ್ಥಾನಕ್ಕೆ ಕೊಡುವುದನ್ನು ಶಾಲೆಗಳಿಗೆ ಕೊಟ್ಟರೆ ಅಂತಹ ದಾನಿಗಳಿಗೆ ಹತ್ತು ಪಟ್ಟು ಹೆಚ್ಚು ಪುಣ್ಯಪ್ರಾಪ್ತಿಯಾಗುತ್ತದೆ. ಭಾಷಣದಿಂದ ಸಮಾಜ ಪರಿವರ್ತನೆಯಾಗವುದಿಲ್ಲ. ಅಧ್ಯಾಪಕರ ಪ್ರಮಾಣಿಕ ಪ್ರಯತ್ನದಿಂದ ಇಲ್ಲಿನ ಹಣತೆಗಳನ್ನು ದೇಶ ಬೆಳಗಲು ಪ್ರೇರೇಪಿಸಬಹುದು…

Read More

ಹರ್ಷ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಜಿಲ್ಲಾ ಕಾಂಗ್ರೆಸ್ ನಾಯಕರುಗಳು: ಇಂತಹ ನೀಚ ಕೃತ್ಯಗಳನ್ನು ಎಸಗುವವರನ್ನು ಮರಣದಂಡನೆಗೆ ಗುರಿಪಡಿಸಿ : ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು !!!

ಇತ್ತೀಚೆಗೆ  ಶಿವಮೊಗ್ಗದಲ್ಲಿ ಹತ್ಯೆಯಾದ ಹರ್ಷ ಮನೆಗೆ ಭೇಟಿ ನೀಡಿದ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳು ಹರ್ಷ ರವರ ಕುಟುಂಬಕ್ಕೆ ಸಾಂತ್ವನ ಹೇಳಿದರು  ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣರವರು ಕೊಲೆ ಮಾಡುವಂತಹ ವ್ಯಕ್ತಿಗಳು ಯಾವುದೇ ಜಾತಿ ಧರ್ಮದವರಾಗಿರಲಿ  ಅಂಥವರಿಗೆ ಶಿಕ್ಷೆಯನ್ನು ನೀಡಬೇಕು. ಪ್ರತಿಯೊಬ್ಬರ ಜೀವಕ್ಕೂ ಬೆಲೆಯಿದೆ.ಅವರ ಅಕ್ಕ ಹಾಗೂ ತಂಗಿ ಮತ್ತು ತಾಯಿಯ ನೋವು ನಿಜಕ್ಕೂ ಮನ ಕಲಕುವಂತಿದೆ.ಇಂತಹ ಘಟನೆಗಳು ಮರುಕಳಿಸಬಾರದು. ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರ ಕ್ರಮ ವಹಿಸಬೇಕು. ಇಂತಹ ಕೆಟ್ಟ…

Read More

ಇದೇ ತಿಂಗಳ 27ರಂದು ಅದ್ದೂರಿಯಾಗಿ “ಕೆಳದಿ ರಾಣಿ ಚೆನ್ನಮ್ಮ ಉತ್ಸವ” : ಶಾಸಕ ಹರತಾಳು ಹಾಲಪ್ಪ

ಸಾಗರ : ಈ ತಿಂಗಳ 27ರಂದು ಕೆಳದಿ ರಾಣಿ ಚೆನ್ನಮ್ಮ ಉತ್ಸವವನ್ನು ಅದ್ದೂರಿಯಾಗಿ ಆಚರಿಸುವ ವಿಚಾರವಾಗಿ ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರದ ಉಪವಿಭಾಗಧಿಕಾರಿ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನೆಡೆಸಿದರು. ಸದರಿ ಕಾರ್ಯಕ್ರಮ ನಡೆಸಲು ಕೈಗೊಳ್ಳಬೇಕಾದ ರೂಪುರೇಷಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು. ನಂತರ ಸುದ್ದಿಗೋಷ್ಟಿ ನಡೆಸಿದ ಶಾಸಕರು “ಕೆಳದಿ ರಾಣಿ ಚೆನ್ನಮ್ಮ ಉತ್ಸವ” ವನ್ನು ಪ್ರತಿ ವರ್ಷ ಕನ್ನಡ ಮತ್ತು ಸಂಸ್ಕೃತಿ  ಇಲಾಖೆಯಿಂದ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು 25 ಲಕ್ಷ ರೂ ಅನುದಾನ ಮಂಜೂರಾತಿಯಾದ ಬಗ್ಗೆ ಮಾಹಿತಿ ನೀಡಿದ…

Read More