ಸಾಗರ : ಈ ತಿಂಗಳ 27ರಂದು ಕೆಳದಿ ರಾಣಿ ಚೆನ್ನಮ್ಮ ಉತ್ಸವವನ್ನು ಅದ್ದೂರಿಯಾಗಿ ಆಚರಿಸುವ ವಿಚಾರವಾಗಿ ಶಾಸಕರಾದ ಹೆಚ್.ಹಾಲಪ್ಪ ನವರು ಸಾಗರದ ಉಪವಿಭಾಗಧಿಕಾರಿ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನೆಡೆಸಿದರು.
ಸದರಿ ಕಾರ್ಯಕ್ರಮ ನಡೆಸಲು ಕೈಗೊಳ್ಳಬೇಕಾದ ರೂಪುರೇಷಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ನಂತರ ಸುದ್ದಿಗೋಷ್ಟಿ ನಡೆಸಿದ ಶಾಸಕರು “ಕೆಳದಿ ರಾಣಿ ಚೆನ್ನಮ್ಮ ಉತ್ಸವ” ವನ್ನು ಪ್ರತಿ ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು 25 ಲಕ್ಷ ರೂ ಅನುದಾನ ಮಂಜೂರಾತಿಯಾದ ಬಗ್ಗೆ ಮಾಹಿತಿ ನೀಡಿದ ಶಾಸಕರು ಒಂದು ದಿನದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.
ನಂತರ ಮಾತನಾಡಿದ ಅವರು 350 ವರ್ಷಗಳ ಹಿಂದೆ ಫೆಬ್ರವರಿ 27 ರಂದು ಕೆಳದಿ ರಾಣಿ ಚೆನ್ನಮ್ಮ ಪಟ್ಟಾಭಿಷೇಕವಾದ ದಿನವಾಗಿತ್ತು ಹಾಗಾಗಿ ಅಂದೇ ಕೆಳದಿ ರಾಣಿ ಚೆನ್ನಮ್ಮ ಉತ್ಸವ ನಡೆಸಲಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಸಾಗರ ಉಪವಿಭಾಗಧಿಕಾರಿಗಳು,ಸಾಗರ ತಹಶೀಲ್ದಾರರು, ಬಿ.ಟಿ ರವೀಂದ್ರ, ಪತ್ರಕರ್ತರಾದ ಜಿ.ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇👇👇👇