w
Headlines
Home » ಹರ್ಷನ ಕೊಲೆ ಆರೋಪಿಗಳಿಗಳಿಗೆ ಪೊಲೀಸರ ಗುಂಡಿನ ಮೂಲಕವೇ ಉತ್ತರ ನೀಡಬೇಕು : ಹರತಾಳು ಹಾಲಪ್ಪ

ಹರ್ಷನ ಕೊಲೆ ಆರೋಪಿಗಳಿಗಳಿಗೆ ಪೊಲೀಸರ ಗುಂಡಿನ ಮೂಲಕವೇ ಉತ್ತರ ನೀಡಬೇಕು : ಹರತಾಳು ಹಾಲಪ್ಪ

ಶಿವಮೊಗ್ಗ : ಹರ್ಷನ ಸಾವು ವ್ಯರ್ಥವಾಗಲು ಬಿಡುವುದಿಲ್ಲ ಹಾಗೆಯೇ ಈ ತರಹದ ಕೃತ್ಯಗಳನ್ನು ಎಸಗುವವರಿಗೆ ಪೊಲೀಸರ ಗುಂಡಿನ ಮೂಲಕವೇ ಉತ್ತರ ನೀಡಬೇಕು ಎಂದು ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಹೇಳಿದರು.


ಇಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ ಅವರು ನೇರವಾಗಿ ಇತ್ತೀಚೆಗೆ ದುಷ್ಕರ್ಮಿಗಳ ಕುಕೃತ್ಯದಿಂದ ಹುತಾತ್ಮರಾದ ಹಿಂದೂಪರ ಸಂಘಟನೆಯ ಕಾರ್ಯಕರ್ತ ಹರ್ಷ ರವರ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.


ನಂತರ ಮಾತನಾಡಿದ ಅವರು ಪೊಲೀಸರು ಹರ್ಷನನ್ನು ಕೊಲೆಗೈದ ಆರೋಪಿಗಳನ್ನು ಕಷ್ಟಪಟ್ಟು ಬಂಧಿಸುತ್ತಾರೆ ನಂತರ ಕೋರ್ಟ್ ನಲ್ಲಿ ಬೇಲ್ ಸಿಗುತ್ತದೆ ನಂತರ ಸಾಕ್ಷಿ ಸರಿಯಿಲ್ಲದ ಕಾರಣ ಕೇಸ್ ಕೂಡ ಹಾರಿಹೋಗುತ್ತದೆ.

ಹರ್ಷ ಎಂಬ ಯುವಕ ಹುತಾತ್ಮನಾಗಿದ್ದಾನೆ ಹಾಗೆಯೇ ಅವನ ಸಾವಿಗೆ ಪೊಲೀಸರ ಗುಂಡಿನಿಂದಲೇ ಉತ್ತರ ನೀಡಬೇಕು ಇಲ್ಲದಿದ್ದಲ್ಲಿ ಇಂತಹ ನೀಚ ಕೃತ್ಯಗಳನ್ನು ಮುಂದಿನ ದಿನಗಳಲ್ಲಿ ತಡೆಯಲು ಸಾಧ್ಯವಿಲ್ಲ ಎಂದು ಹರತಾಳು ಹಾಲಪ್ಪ ಹೇಳಿದರು.

ಜಿಲ್ಲಾಧ್ಯಕ್ಷರಾದ ಟಿ.ಡಿ ಮೇಘರಾಜ್, ಶಾಸಕರಾದ ಡಿ.ಎಸ್ ಅರುಣ್, ಉಮಾನಾಥ ಕೋಟ್ಯಾನ್ ಹಾಗೂ ಮಧುರಾ ಶಿವಾನಂದ್ ಮತ್ತಿತರರು ಉಪಸ್ಥಿತರಿದ್ದರು.


ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇



Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.