ಶಿವಮೊಗ್ಗ ಜಿಲ್ಲೆ ಎಸ್ಪಿ ವರ್ಗಾವಣೆ ಸುದ್ದಿ ಕೇವಲ ಊಹಾಪೋಹ : ಗೃಹ ಸಚಿವ ಆರಗ ಜ್ಞಾನೇಂದ್ರ

ಜಿಲ್ಲೆಯ ಧಕ್ಷ ರಕ್ಷಣಾಧಿಕಾರಿ ಡಾ.ಬಿ.ಎಂ.ಲಕ್ಷ್ಮೀ ಪ್ರಸಾದ್ ವಿರುದ್ಧ ಹಬ್ಬಿರುವ ಊಹಾಪೂಹಗಳಿಗೆ ಬ್ರೇಕ್ ಬಿದ್ದಿದೆ. ಹಿಂದೂ ಯುವಕ ಹರ್ಷನ ಕಗ್ಗೊಲೆಯಲ್ಲಿ ನಡೆದ‌ ಗಲಭೆ‌ ಮತ್ತು ಗೃಹಸಚಿವ ಆರಗ ಜ್ಞಾನೇಂದ್ರ ನಗರ ಪೊಲೀಸ್ ಠಾಣೆಯ ಆಡಿಟಿಂಗ್ ವರದಿಗಳನ್ನ ಕೇಳಿರುವ ಹಿನ್ನಲೆಯಲ್ಲಿ ಎಸ್ಪಿ ತಲೆದಂಡವಾಗಲಿದೆ ಎಂಬ‌ ವದಂತಿಗೆ ಖುದ್ದು ಗೃಹಸಚಿವರೇ 
ಅಲ್ಲಗೆಳೆದಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಠಾಣೆಗಳಲ್ಲಿ ಆಡಿಟಿಂಗ್ ವರದಿ ಕೇಳಿರುವುದು ಹರ್ಷನ ಕೊಲೆಯನ್ನ ಒಂದು ಗ್ಯಾಂಗ್ ನಡೆಸಿದೆ. ಶಿವಮೊಗ್ಗ ಎಂದರೆ ರೌಡಿಗಳ ಬ್ರೀಡಿಂಗ್ ಸೆಂಟರ್ ಎಂದು ಹೇಳಲಾಗುತ್ತಿದೆ.

ಆದರೆ ಸುಂಸ್ಕೃತ ಜಿಲ್ಲೆ ಶಿವಮೊಗ್ಗ, ಹಂತಕರ ಜಿಲ್ಲೆಯಾಗಿ ಕಳಂಕ ತಟ್ಟಲು ಪೊಲೀಸ್ ಇಲಾಖೆ ಎಷ್ಟರ ಮಟ್ಟಿಗೆ ಪಾತ್ರವಹಿಸಿದೆ ಎಂದು ತಿಳಿಯಲು ಅಡಿಮಗ್ ನಡೆಸಲಾಗುತ್ತಿದೆ. ಡಿಜಿಗೆ ಮೊನ್ನೆನೇ ಪತ್ರಕೊಟ್ಟು ವಿಚಾರಣೆ ನಡೆಸಲು ಸೂಚಿಸಿದೆ ಈ ರೀತಿ ಅಪರಾಧದಲ್ಲಿ ಖಾಯಂ ಆಗಿ ಉಳಿಯಲು ಹೇಗೆ ಪೊಲೀಸ್  ಇಲಾಖೆ ಬಿಟ್ಟಿದ್ದಾರೆ ಎಂಬುದು ತಿಳಿಯಬೇಕಿದೆ ಎಂದರು.

ಈ ಹಂತಕರ ಗ್ಯಾಂಗ್ ನ್ನು ಊರಿನಲ್ಲಿ ತಿರುಗಲು ಹೇಗೆ ಬಿಟ್ಟಿದ್ದಾರೆ. ಇವರನ್ನು ನಿಯಂತ್ರಿಸಲು ಯಾಕೆ ಇಲಾಖೆ ಕೈಯಲ್ಲಿ ಆಗಿಲ್ಲ. ಹಂತಕರಾಗಿ ಬೆಳೆಯುವಲ್ಲಿ ಪೊಲೀಸರ ಪಾಲೇನಿದೆ? ಎಂಬುದನ್ನ ಪತ್ತೆಹಚ್ಚಬೇಕಿದೆ.

 ಯಾವುದೇ ಘಟನೆ ಆದಾಗ‌ ಪೊಲೀಸರ ವೈಫಲ್ಯ, ಸರ್ಕಾರದ ವೈಫಲ್ಯವೆಂಬ ಮಾತು ಕೇಳಿ ಬರುತ್ತಿದೆ. ಅಪರಾಧವನ್ನ ತಡೆಯುವಂತಹವರು ಅಪರಾಧ ಜಗತ್ತಿನಲ್ಲಿ ಕೈಜೋಡಿಸಿದರೆ ತಡೆಯುವವರು ಯಾರು ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಹಾಗಾಗಿ ಈ ಆದೇಶ ಹೊರಡಿಸಲಾಗಿದೆ ಎಂದರು.

ಇದನ್ನ ತಡೆಯಲು ಆಡಿಟಿಂಗ್ ವರದಿ ಕೇಳಲಾಗಿದೆ. ಅಪರಾಧಿ ಜಗತ್ತಿನಲ್ಲಿ ಪೊಲೀಸರ ಪಾತ್ರ ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಪೊಲೀಸ್ ಇಲಾಖೆಯಲ್ಲಿಯೇ ಇರದಂತೆ ನೋಡಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದರ ಜೊತೆಗೆ ಎಸ್ಪಿ ಅವರ ವರ್ಗಾವಣೆ ಊಹಾ ಪೂಹಾವೆಂದು ಸ್ಪಷ್ಟಪಡಿಸಿದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇


Leave a Reply

Your email address will not be published. Required fields are marked *