ಶಿವಮೊಗ್ಗ ನಗರದಲ್ಲಿ ಮಾರ್ಚ್ 4ರವರೆಗೆ ನಿಷೇಧಾಜ್ಞೆ ಮುಂದುವರೆಯಲಿದೆ. ವ್ಯಾಪಾರ, ವಹಿವಾಟಿಗೆ ಅವಧಿಯನ್ನು ಮತ್ತಷ್ಟು ಹೆಚ್ಚಳ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶದಲ್ಲಿ ತಿಳಿಸಿದ್ದಾರೆ.
ಮಾರ್ಚ್ 4ರವರೆಗೆ ಶಿವಮೊಗ್ಗ ನಗರದಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೆ ನಿಷೇಧಾಜ್ಞೆ ಸಡಿಲಗೊಳಿಸಲಾಗಿದೆ. ಈ ಅವಧಿಯಲ್ಲಿ ವ್ಯಾಪಾರ, ವಹಿವಾಟು ಮಾಡಿಕೊಳ್ಳಬಹುದಾಗಿದೆ.
ರಾತ್ರಿ 7 ಗಂಟೆ ಬಳಿಕ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ನಾಳೆಯಿಂದ ಶಾಲೆ, ಕಾಲೇಜುಗಳು ಪ್ರಾರಂಭ
ಹರ್ಷ ಹಿಂದೂ ಕಗ್ಗೊಲೆಯಾಗಿ ಇಂದಿಗೆ 8 ದಿನ ಕಳೆದಿದೆ. 8 ದಿನಗಳ ನಂತರ ಶಾಲಾಕಾಲೇಜ್ ಓಪನ್ ಗೆ ಗ್ರೀನ್ ಸಿಂಗಲ್ ದೊರೆತಿದೆ.
ಮೊನ್ನೆ ಶನಿವಾರವೇ ಶಾಲಾ ಕಾಲೇಜ್ ಓಪನ್ ಮಾಡಲು ಗ್ರೀನ್ ಸಿಗ್ನಲ್ ದೊರೆತಿತ್ತು. ಆದರೆ ಪರಿಸ್ಥಿತಿ ಅವಲೋಕಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತೆ ಫೆ.28 ರವರೆಗೆ ಸೆಕ್ಷನ್ 144 ಜಾರಿಗೋಳಿಸಿ ಶಾಲಾಕಾಲಾಜಿಗೆ ರಜೆ ಘೋಷಿಸಿದ್ದರು.
ಆದರೆ ನಾಳೆಯಿಂದ ಶಾಲಾ ಕಾಲೇಜು ಆರಂಭಿಸುವುದಾಗಿ ಜಿಲ್ಲಾಧಿಕಾರಿಗಳ ಪತ್ರಿಕಾ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ. ಆದರೆ ಶಿವರಾತ್ರಿ ಹಬ್ಬ ಮಾ.1 ರಂದು ಆಚರಿಸಲಾಗುತ್ತಿದೆ. ಸೆಕ್ಷನ್ ಮತ್ತು ಕರ್ಫ್ಯೂ ಹಿನ್ನಲೆಯಲ್ಲಿ ಹರಕೆರೆಯ ಶ್ರೀರಾಮೇಶ್ವರ ದೇವಾಲಯದಲ್ಲಿ ದೇವರ ದರ್ಶನಕ್ಕೂ ಅವಕಾಶವಿಲ್ಲ.