ಬೆಳೆಯುವ ಮಕ್ಕಳಲ್ಲಿ ಸಂಸ್ಕಾರ ಅರಳಬೇಕು: ಆರಗ ಜ್ಞಾನೇಂದ್ರ

ರಿಪ್ಪನ್‌ಪೇಟೆ: ಒಂದು ಶಾಲೆ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುತ್ತದೆ. ಆ ಶಾಲೆಯಿಂದ ಮಕ್ಕಳ ಮನಸ್ಸಿನಲ್ಲಿ ಸಂಸ್ಕಾರ ಅರಳುವಂತಾಗಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.


 ಹೆದ್ದಾರಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ 25 ಲಕ್ಷ ರೂ ವೆಚ್ಚದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ ಶಾಲೆಗಳು ದೇವಸ್ಥಾನಕ್ಕೆ ಸಮ. ದೇವಸ್ಥಾನಕ್ಕೆ ಕೊಡುವುದನ್ನು ಶಾಲೆಗಳಿಗೆ ಕೊಟ್ಟರೆ ಅಂತಹ ದಾನಿಗಳಿಗೆ ಹತ್ತು ಪಟ್ಟು ಹೆಚ್ಚು ಪುಣ್ಯಪ್ರಾಪ್ತಿಯಾಗುತ್ತದೆ. ಭಾಷಣದಿಂದ ಸಮಾಜ ಪರಿವರ್ತನೆಯಾಗವುದಿಲ್ಲ. ಅಧ್ಯಾಪಕರ ಪ್ರಮಾಣಿಕ ಪ್ರಯತ್ನದಿಂದ ಇಲ್ಲಿನ ಹಣತೆಗಳನ್ನು ದೇಶ ಬೆಳಗಲು ಪ್ರೇರೇಪಿಸಬಹುದು ಅಂತಹ ಮಹತ್ ಕಾರ್ಯ ಶಿಕ್ಷಕರಿಂದಾಗಬೇಕೆಂದರು. 


 ವಸ್ತç ಸಂಹಿತೆಯಿಂದ ಮಕ್ಕಳಲ್ಲಿ ವರ್ಗ, ಅಂತಸ್ತುಗಳ ಬೇಧವಿಲ್ಲದೆ ಎಲ್ಲರಲ್ಲಿಯೂ ಸಮಾನತೆ ಕಾಣುತ್ತದೆ. ಆದರೆ ಕೆಲವರು ಹಿಜಾಬ್ ವಿಷಯವನ್ನು ಪ್ರಸ್ತಾಪಿಸುತ್ತ ಸಮಾಜದಲ್ಲಿ ದ್ವಂದ್ವವನ್ನು ಮೂಡಿಸುತ್ತಿದ್ದಾರೆ. ಇದರಿಂದ ಸ್ನೇಹಿತರಾದ ವಿದ್ಯಾರ್ಥಿಗಳಲ್ಲಿ ಜಾತಿ-ಮತಗಳ ಬೇಧಭಾವ ಉಂಟಾಗಿ ಸಾಮರಸ್ಯ ಕೆಡುತ್ತಿದೆ. ಪ್ರಸ್ತುತವಾಗಿ ಅನ್ಯವಿಚಾರಗಳಿಗೆ ಆಸ್ಪದವಿಲ್ಲದೆ ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಮಕ್ಕಳಲ್ಲಿ ಮೂಡಿಸುವ ಅಗತ್ಯತೆಯಿದೆ. 1947 ರಲ್ಲಿ ಈ ದೇಶ ಇಬ್ಬಾಗವಾಗಿರುವುದು ಧರ್ಮದ ಆಧಾರದ ಮೇಲೆ. ಮತೀಯವಾದಿಗಳ ಬೇಡಿಕೆ, ಈಡೇರಿಕೆಯಿಂದ ಆಗ ದೇಶ ಒಡೆದರೆ ಈಗಲೂ ಅಂತಹ ಮತಾಂಧರಿಂದಲೆ ಊರುಕೇರಿಗಳು ಒಡೆಯುತ್ತಿದೆ. ಇಂತಹ ಸಂಘರ್ಷದಿಂದ ದೇಶಕ್ಕೆ ಭವಿಷ್ಯವಿಲ್ಲ. ಸಮಾಜದ ಎಲ್ಲರೂ ಇಂತಹ ಘಟನಾವಳಿಗಳಿಂದ ಎಚ್ಚರಿಕೆ ವಹಿಸಬೇಕೆಂದರು. ಯಾವುದೇ ಒಂದು ವರ್ಗವನ್ನು ತುಷ್ಠೀಕರಣಗೊಳಿಸುವುದು ಜಾತ್ಯಾತೀತವಲ್ಲ. ಎಳೆಯ ಮನಸ್ಸಿನಲ್ಲಿ ವಿಷಬೀಜ ಬಿತ್ತುವುದು ಪಾಪದ ಕೆಲಸವಾಗಿದ್ದು, ಈ ದೇಶ ಸಂಸ್ಕಾರ, ಸಂಸ್ಕೃತಿಗೆ ಪೂರಕವಾಗಿ ಮಕ್ಕಳನ್ನು ಬೆಳಸಬೇಕು ಎಂದರು. 

ಗೃಹ ಸಚಿವನಾದ ಮೇಲೆ ದಿನದ ಪೂರ್ತಿ ಸಮಯವನ್ನು ಇಲಾಖೆಯ ಕಾರ್ಯಕ್ಕೆ ಮೀಸಲಿಡಬೇಕಿದೆ. ಅದರ ಮದ್ಯೆಯು ವಾರದಲ್ಲಿ ಎರಡು ದಿನ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ. ಪೊಲೀಸರು ಎಚ್ಚರದಿಂದಿದ್ದರೆ ಜನ ಸುಖವಾಗಿ ಮಲಗಬಹುದು. ಪೊಲೀಸರು ಮಲಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ನೀವು ನೀಡಿದ ಮತದ ಋಣವನ್ನು ಕ್ಷೇತ್ರ ಹಾಗೂ ರಾಜ್ಯದಲ್ಲಿ ಸಮರ್ಥವಾಗಿ ನಿಭಾಯಿಸುತ್ತಿದ್ದು, ನಿಮ್ಮ ನಿರೀಕ್ಷೆಗೆ ಚ್ಯುತಿಯಾಗದಂತೆ ನಡೆದುಕೊಳ್ಳುತ್ತೇನೆ ಎಂದರು.

ಗ್ರಾ.ಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳ ದುರಸ್ಥಿ, ಕುಡಿಯುವ ನೀರು, ಕಲ್ಲೂರು-ಬಿದರಹಳ್ಳಿ-ಜೀರಿಗೆಮನೆ ರಸ್ತೆ, ಕಲ್ಲೂರು-ಕಗ್ಗಲಿಜೆಡ್ಡು-ಮಂಡ್ಲಿ ರಸ್ತೆ, ಜಂಬಳ್ಳಿ ರಸ್ತೆ, ಕೊಡಸೆ ರಸ್ತೆ, ಕಾರಗೋಡು ರಸ್ತೆ, ಕೆರೆಗೋಡು-ಕಲ್ಲುಕೊಪ್ಪ ನೂತನ ಸೇತುವೆ ನಿರ್ಮಾಣ ಸೇರಿಂದAತೆ, ಕಾಲುಸಂಕ, ದೇವಸ್ಥಾನಗಳ ಅಭಿವೃದ್ಧಿಗೆ ಒಟ್ಟು 16.50 ಕೋಟಿಗೂ ಅಧಿಕ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿದರು.

 ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ವನಿತ ಗಂಗಾಧರ, ಉಪಾಧ್ಯಕ್ಷೆ ಲೀಲಾವತಿ, ಸದಸ್ಯರಾದ ಸುಮಿತ್ರ, ನಾಗರತ್ನ, ವಿಶುಕುಮಾರ್, ಮುಖ್ಯ ಶಿಕ್ಷಕಿ ನಾಗರತ್ನಮ್ಮ, ಎಸ್.ಡಿ.ಎಂ.ಸಿ. ಅಧ್ಯಕ್ಷ ಉಮೇಶ, ಮುಖಂಡರಾದ ಸುರೇಶ ಸ್ವಾಮಿರಾವ್. ಕಲ್ಲೂರು ಮೇಘರಾಜ್, ಗುರುರಾಜಗೌಡ, ನಾಗೇಂದ್ರ, ಜಂಬಳ್ಳಿ ಗಿರೀಶ, ಕಗ್ಗಲಿ ಲಿಂಗಪ್ಪ, ಸತೀಶ್ ಭಟ್ಟ, ತಹಶೀಲ್ದಾರ್ ರಾಜೀವ್, ಬಿಇಓ ವೀರಭದ್ರಪ್ಪ, ತಾ.ಪಂ. ಇಓ ಪ್ರವೀಣ್‌ಕುಮಾರ್, ಇನ್ನಿತರರಿದ್ದರು.

Leave a Reply

Your email address will not be published. Required fields are marked *