w
Headlines
Home » ಶಿವಮೊಗ್ಗ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಪುತ್ಥಳಿ ನಿರ್ಮಿಸಿ ಅಭಿಮಾನ ಸಲ್ಲಿಸಿದ ಆನಂದಪುರ ಸಮೀಪದ ಹೊಸಕೊಪ್ಪ ಗ್ರಾಮಸ್ಥರು

ಶಿವಮೊಗ್ಗ ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಪುತ್ಥಳಿ ನಿರ್ಮಿಸಿ ಅಭಿಮಾನ ಸಲ್ಲಿಸಿದ ಆನಂದಪುರ ಸಮೀಪದ ಹೊಸಕೊಪ್ಪ ಗ್ರಾಮಸ್ಥರು

ಕನ್ನಡದ ಕುವರ ಕರ್ನಾಟಕದ ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಸಾವು ಇದೀಗ ಕರುನಾಡನ್ನು ಕಣ್ಣೀರಲ್ಲಿ ಕೈ ತೊಳಿಸಿತ್ತು.ಅಪಾರ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ದಾನ ಧರ್ಮದ ಕಾರ್ಯಗಳು ಎಂದಿಗೂ ಕೂಡ ಅಜರಾಮರ.
ಅತಿ ಕಿರಿಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಕನ್ನಡದ ಕುವರನಿಗೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಹೊಸಕೊಪ್ಪ ಗ್ರಾಮದಲ್ಲಿ ಅಭಿಮಾನಿಗಳು ವಿಶಿಷ್ಟ ರೀತಿಯ ಗೌರವವನ್ನು ಸಮರ್ಪಿಸಿದ್ದಾರೆ..ಸುಮಾರು 6ಅಡಿ ಎತ್ತರದಷ್ಟು ಪುನೀತ್ ರಾಜ್ ಕುಮಾರ್ ರವರ ಪುತ್ಥಳಿಯನ್ನು ನಿರ್ಮಿಸಿ ಇದೀಗ ಜಿಲ್ಲೆಯಲ್ಲೇ ಮೊದಲ ಪುತ್ಥಳಿ ನಿರ್ಮಿಸಿದ ಖ್ಯಾತಿಗೆ ಈ ಗ್ರಾಮಸ್ಥರು ಒಳಗಾಗಿದ್ದಾರೆ.
ಸುಮಾರು 1ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಹೊಸಕೊಪ್ಪ ಗ್ರಾಮದಲ್ಲಿ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿಯನ್ನು ನಿರ್ಮಿಸಿದ್ದು ಊರಿನ ಪ್ರಮುಖ ಬೀದಿಗಳಲ್ಲಿ ಪುನೀತ್ ರಾಜ್ ಕುಮಾರ್ ಪುತ್ಥಳಿಯ ಬಹು ವಿಜ್ರಂಭಣೆಯ  ಮೆರವಣಿಗೆಯನ್ನು ಮಾಡಿ ತದನಂತರ ಹೊಸಕೊಪ್ಪ ಗ್ರಾಮದ ಸರ್ಕಲ್ ನಲ್ಲಿ ಪುತ್ಥಳಿಯನ್ನು ನಿರ್ಮಿಸಿದ್ದಾರೆ.
ಸಂಪೂರ್ಣ ಪುತ್ಥಳಿಯ ವೆಚ್ಚವನ್ನು ಊರಿನ ಎಲ್ಲಾ ಗ್ರಾಮಸ್ಥರು ವಹಿಸಿದ್ದು  ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರಿಗೂ ಕೂಡ ಊಟದ ವ್ಯವಸ್ಥೆಯನ್ನು ಸಹ ಮಾಡಿ ಅಭಿಮಾನ ಮೆರೆದಿದ್ದಾರೆ.
ಸಂಜೆ ಅಗಲಿದ ನಾಯಕನಿಗೆ ಗೋಸ್ಕರ ಈ ದೀಪವನ್ನು ಹಚ್ಚಿ ಪುನೀತ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಂಡಿದ್ದಾರೆ.
ವರದಿ : ಪವನ್ ಕುಮಾರ್ ಕಠಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.