Headlines

2014ರ ಡಿಸಿಸಿ ಬ್ಯಾಂಕ್ ಹಗರಣ – ಜಿಲ್ಲೆಯ ವಿವಿಧೆಡೆ ಇ ಡಿ (ED) ದಾಳಿ

2014ರ ಡಿಸಿಸಿ ಬ್ಯಾಂಕ್ ಹಗರಣ – ಜಿಲ್ಲೆಯ  ಇ ಡಿ (ED) ದಾಳಿ

ಶಿವಮೊಗ್ಗ:  2014ರಲ್ಲಿ ನಡೆದ ಡಿಸಿಸಿ ಬ್ಯಾಂಕ್ ನಕಲಿ ಬಂಗಾರ ಹಗರಣಕ್ಕೆ ಸಂಬಂಧಿಸಿ ಜಾರಿ‌ ನಿರ್ದೇಶನಾಲಯದ ( ಇ. ಡಿ. )ಅಧಿಕಾರಿಗಳು  ಮಂಗಳವಾರ ಶಿವಮೊಗ್ಗ ಮತ್ತು ಭದ್ರಾವತಿಯ ಎಂಟು ಸ್ಥಳಗಳಲ್ಲಿ ದಾಳಿ ನಡೆಸಿದರು.

ಅಂದು ಹಗರಣದ ಕೇಂದ್ರಬಿಂದುವಾಗಿದ್ದ ಡಿಸಿಸಿ ಬ್ಯಾಂಕಿನ  ಶಿವಪ್ಪ‌ನಾಯಕ ವೃತ್ತದ ಬಳಿ ಇದ್ದ ಶಾಖೆಯ  ಬ್ಯಾಂಕ್ ಮ್ಯಾನೇಜರ್ ಆಗಿದ್ದ ಶೋಭಾ  ಅವರ ನಿವಾಸ, ಚಾಲಕರಾಗಿದ್ದ ಕಾಮಾಕ್ಷಿ ಬೀದಿಯ ಶಿವಕುಮಾರ್ ಮನೆ, ಭದ್ರಾವತಿ ಜೆಡಿಕಟ್ಟೆಯಲ್ಲಿರುವ ಡಿಸಿಸಿ ಬ್ಯಾಂಕ್ ನ ಸಿಬ್ಬಂದಿ, ಮಾಡ್ರನ್ ಚಲನಚಿತ್ರ ಮಂದಿರ ದ ಬಳಿಯಿರುವ ಡಿಸಿಸಿ ಬ್ಯಾಂಕ್ ನ ಶಾಖೆಯ ಮೇಲೆ ಸೇರಿದಂತೆ 8 ಕಡೆ ದಾಳಿ ನಡೆದಿದೆ.

ಬ್ಯಾಂಕ್​ನ ವಾಹನ ಚಾಲಕನಾಗಿದ್ದ ಶಿವಕುಮಾರ್ ಮನೆ ಮೇಲೂ ಕೂಡ ದಾಳಿ ನಡೆಸಲಾಗಿದೆ. 2 ಕಡೆ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ. 2014ರ ಜೂನ್​ನಲ್ಲಿ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಈ ಹಗರಣ ನಡೆದಿತ್ತು. ಇದೇ ವೇಳೆ ಬ್ಯಾಂಕ್ ನ ವಾಹನ ಚಾಲಕನಾಗಿದ್ದ ನಿವಾಸದ ಮೇಲು ದಾಳಿ ನಡೆಸಲಾಗಿದೆ. ಕಾಮಾಕ್ಷಿ ಬೀದಿಯ ಶಿವಕುಮಾರ್ ಎಂಬುವರ ಮನೆ ಮೇಲು ಇಡಿ ತಂಡದ ಪ್ರತ್ಯೇಕ ದಾಳಿ ನಡೆಸಿದೆ. ಏಕಕಾಲಕ್ಕೆ ಎರಡು ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ್​ ಗೌಡಗೂ ಇಡಿ ಶಾಕ್ ನೀಡಿದೆ. ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳಿಂದ ಮಂಜುನಾಥ್ ಗೌಡ ವಿಚಾರಣೆ ನಡೆಸಲಾಗುತ್ತಿದೆ. ಅಪೆಕ್ಸ್ ಬ್ಯಾಂಕ್​ನ ಗೆಸ್ಟ್ ಹೌಸ್​ನಲ್ಲಿ ಮಂಜುನಾಥ್ ಗೌಡ ವಿಚಾರಣೆ ಮಾಡುತ್ತಿದ್ದಾರೆ. 10ಕ್ಕೂ ಹೆಚ್ಚು ಇಡಿ ಅಧಿಕಾರಿಗಳಿಂದ ಮಂಜುನಾಥ್​ಗೌಡ ವಿಚಾರಣೆ ನಡೆಸುತ್ತಿದ್ದಾರೆ.

ಗೋಪಾಲ ಗೌಡ ಬಡಾವಣೆಯಲ್ಲಿರುವ ಡಿಸಿಸಿ ಬ್ಯಾಂಕ್ ನ ಮ್ಯಾನೇಜರ್ ಶೋಭಾ ಅವರ ಮನೆಯ ಮೇಲೆ ಬೆಂಗಳೂರಿನಿಂದ ಇಡಿ ಕಚೇರಿಯ ತಂಡದಿಂದ ದಾಳಿ ನಡೆದಿದೆ. ಬೆಳ್ಳಂಬೆಳಗ್ಗೆ ದಾಳಿ ಆರಂಭವಾಗಿದೆ.  ಡಿಸಿಸಿ ಹಗರಣಕ್ಕೆ ಸಂಬಂಧಿಸಿದಂತೆ ದಾಳಿ- ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಪ್ರತ್ಯೇಕ ವಾಹನಗಳಲ್ಲಿ ಆಗಮಿಸಿರುವ 96 ಕ್ಕೂ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

Leave a Reply

Your email address will not be published. Required fields are marked *