ನನಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ :ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ನನಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಬೇಡ ಎಂದು ಪೊಲೀಸ್ ಅಧಿಕಾರಿಗಳಿಗೆ ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ ಸೂಚನೆ ನೀಡಿದ್ದಾರೆ.

ಎಲ್ಲರಂತೆ ನಾನೂ ಸಂಚರಿಸುತ್ತೇನೆ. ನನಗಾಗಿ ಯಾವುದೇ ವಿಶೇಷ ಸೌಲಭ್ಯ ಬೇಡ ಎಂದು ಹೇಳುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳು ಝೀರೋ ಟ್ರಾಫಿಕ್‍ನಲ್ಲಿ ಸಂಚರಿಸಲು ಅವಕಾಶವಿದೆ. ಆದರೆ ಮಂತ್ರಿಗಳಿಗೆ ಈ ವಿಶೇಷ ಸೌಲಭ್ಯವಿಲ್ಲ. ಅವಕಾಶ ಇಲ್ಲದೇ ಇದ್ದರೂ ಕೆಲ ಮಂತ್ರಿಗಳು ಪ್ರಭಾವ ಬಳಸಿ ಝೀರೋ ಟ್ರಾಫಿಕ್‍ನಲ್ಲಿ ಸಂಚರಿಸುತ್ತಾರೆ. ಇದರಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುತ್ತದೆ.

ಈ ಹಿಂದೆ ಸಿದ್ದರಾಮಯ್ಯ ಆಡಳಿತದ ಅವಧಿಯಲ್ಲಿ ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದ ಜಿ ಪರಮೇಶ್ವರ ಅವರು ಝೀರೋ ಟ್ರಾಫಿಕ್‍ನಲ್ಲಿ ಸಂಚರಿಸಿದ್ದು ಟೀಕೆ ಗುರಿಯಾಗಿತ್ತು. ಈ ಬಾರಿ ಪ್ರಮಾಣವಚನ ಸಮಾರಂಭಕ್ಕೆ ಶಶಿಕಲಾ ಜೊಲ್ಲೆಯವರು ತಡವಾಗಿ ಆಗಮಿಸಿದ್ದರು. ವಿಮಾನ ನಿಲ್ದಾಣದಿಂದ ರಾಜಭವನದವರೆಗೆ ಝೀರೋ ಟ್ರಾಫಿಕ್ ನಲ್ಲಿ ಬಂದಿದ್ದಕ್ಕೆ ಟೀಕೆ ವ್ಯಕ್ತವಾಗಿತ್ತು.

ಒಟ್ಟಾರೆಯಾಗಿ ಆರಗ ಜ್ಞಾನೇಂದ್ರರವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.




Leave a Reply

Your email address will not be published. Required fields are marked *