ತೀರ್ಥಹಳ್ಳಿ: 5 ವರ್ಷಗಳ ಕಾಲ ಆಡಳಿತ ನಡೆಸಿ ತೀರ್ಥಹಳ್ಳಿ ತಾಲ್ಲೂಕು ಪಂಚಾಯಿತಿ ಇಂದು ತನ್ನ ಅವಧಿಯನ್ನು ಪೂರೈಸಿದೆ. ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸಿದ 13 ಜನ ಸದಸ್ಯರುಗಳ ಅಂತಿಮ ವಿಧಾಯಸಭೆ ಇಂದು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು
ತಾಲ್ಲೂಕು ಅಧ್ಯಕ್ಷೆ ಶ್ರೀಮತಿ ನವಮಣಿ ರವಿಕುಮಾರವರು ಉಪಾಧ್ಯಕ್ಷೆ ಶ್ರೀಮತಿ ಯಶೋಧ ಮಂಜುನಾಥ .ಸದಸ್ಯರುಗಳಾದ ಸಾಲೆಕೊಪ್ಪ ರಾಮ ಚಂದ್ರ. ಕುಕ್ಕೆ ಪ್ರಶಾಂತ್ ,ಕೆಳಕೆರೆ ದಿವಾಕರ್ .ಶ್ರುತಿ ವೆಂಕಟೇಶ್. ಲಕ್ಷ್ಮಿ ಉಮೇಶ್, ಗೀತಾ ಸದಾನಂದ ಶೆಟ್ಟಿ, ವೀಣಾ ಗಿರೀಷ್,ಸುಮಾ ಉದಯ . ಚಂದವಳ್ಳಿ ಸೋಮಶೇಖರ್. ಬೇಗುವಳ್ಳಿ ಕವಿರಾಜ್ . ತೂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧು ರಾಜ್ ಹೆಗ್ಡೆ. ಕುಕ್ಕೆ- ಬಾಂಡ್ಯಾ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಷಾ . ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಮತಿ ಆಶಾಲತಾ ಮ್ಯಾನೇಜರ್ ರಾಘವೇಂದ್ರ. ಸಿಬ್ಬಂದಿ ವರ್ಗ ಹಾಗೂ ತಾಲೂಕಿನ ವಿವಿಧ ಇಲಾಖಾಧಿಕಾರಿಗಳು ಉಪಸ್ತಿತರಿದ್ದರು.
ಸಭೆಯಲ್ಲಿ ಸ್ಥಳೀಯ ಶಾಸಕರಾಗಿದ್ದು ಜನಪರ ಸೇವೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಿ ಈಗ ಘನ ಸರಕಾರದ ಗೃಹ ಮಂತ್ರಿ ಪದವಿ ಸ್ಪೀಕರಿಸಿದ ಸನ್ಮಾನ್ಯ ಶ್ರೀ ಆರಗ ಜ್ಞಾನೇಂದ್ರ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಇಂದಿನಿಂದ ತಾಲ್ಲೂಕು ಪಂಚಾಯಿತಿಗೆ ಆಡಳಿತಾಧಿಕಾರಿಯನ್ನು ನೇಮಿಸಲಾಗುತ್ತದೆ. ಸದ್ಯದಲ್ಲೇ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆ ನಡೆಯಲಿದೆ
ವರದಿ:ಪ್ರಶಾಂತ್ ಮೇಗರವಳ್ಳಿ