ಕೊರೊನಾ ಹಿನ್ನಲೆ ಕೆಂಚನಾಲ ಮಾರಿಕಾಂಬಾ ಜಾತ್ರೆ ಸರಳ ಆಚರಣೆ :

ರಿಪ್ಪನ್ ಪೇಟೆ: ಇತಿಹಾಸ ಪುರಾಣ ಪ್ರಸಿದ್ಧ ಕೆಂಚನಾಲ ಶ್ರೀ ಮಾರಿಕಾಂಬಾ ಬೇಸಿಗೆಯ ಜಾತ್ರೆ ಸರಳವಾಗಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.

ಕೋವಿಡ್ 19 ರ ಹಿನ್ನೆಲೆಯಲ್ಲಿ ಸರಕಾರದ ಆದೇಶದ ಮೇರೆಗೆ ಜಾತ್ರೆಯನ್ನು ರದ್ದುಗೊಳಿಸಲಾಗಿದೆ. ಧಾರ್ಮಿಕ ಕಾರ್ಯಗಳನ್ನು ಸರಳವಾಗಿ ಆಚರಿಸಲು ಅನುಮತಿ ದೊರೆತ ಹಿನ್ನೆಲೆಯಲ್ಲಿ ಕೇವಲ ಪೂಜಾ ಕಾರ್ಯಕ್ರಮವನ್ನು ಮಾತ್ರ ನೆರವೇರಿಸಲಾಯಿತು.

ಬೆಳಿಗ್ಗೆಯಿಂದಲೇ ಕೇವಲ ಬೆರಳೆಣಿಕೆಯಷ್ಟು ಭಕ್ತರು ಕೋವಿಡ್ ನಿಯಮಕ್ಕನುಸಾರವಾಗಿ ದೇವಾಲಯಕ್ಕೆ ಆಗಮಿಸಿ ದೇವಾಲಯದ ಹೊರ ನಿಂತು ದೇವಿಯ ಆಶೀರ್ವಾದವನ್ನು ಪಡೆದರು.


ಕೆಂಚನಾಲ ಗ್ರಾಮದಲ್ಲಿ ನಡೆಯುವ ಶ್ರೀ ಮಾರಿಕಾಂಬಾ ಜಾತ್ರೆ ಇತಿಹಾಸ-ಪುರಾಣ ಪ್ರಸಿದ್ಧ ಜಾತ್ರೆ ಆಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಈ ಜಾತ್ರೆಯು ಪ್ರತಿ ವರ್ಷ ಎರಡು ಬಾರಿ ನಡೆಯುತ್ತದೆ. ಕರ್ನಾಟಕದ ಯಾವುದೇ ಭಾಗದಲ್ಲಿ ವರ್ಷದಲ್ಲಿ ಮಾರಿಕಾಂಬಾ ಜಾತ್ರೆ ಎರಡು ಬಾರಿ ನಡೆಯುವುದಿಲ್ಲ ಆದರೆ ಕೆಂಚನಾಲ ಗ್ರಾಮದಲ್ಲಿ ಮಾತ್ರ ವರ್ಷಕ್ಕೆ ಎರಡು ಬಾರಿ ಶ್ರೀ ಮಾರಿಕಾಂಬ ಜಾತ್ರೆ ನಡೆಯುತ್ತದೆ.

ಉತ್ತಮ ಆರೋಗ್ಯ ರೋಗ-ರುಜಿನಗಳು ಬರದಂತೆ. ತಾವು ಬೆಳೆದ ಕೃಷಿ ಮತ್ತು ಕೃಷಿ ಉತ್ಪನ್ನಗಳು. ಸಾಕು ಪ್ರಾಣಿಗಳ ಸಂರಕ್ಷಣೆ. ಮಕ್ಕಳಾಗದಿದ್ದರೆ ಮಕ್ಕಳಾಗುವ ಬಗ್ಗೆ ತಮ್ಮ ಇಷ್ಟಾರ್ಥಗಳು ನೆರವೇರಲಿ ಎಂದು  ಭಕ್ತರು ಹರಿಕೆಯನ್ನು ಹೊರುತ್ತಾರೆ. ಮಾರಿಕಾಂಬ ದೇವಿಯ ದರ್ಶನದಿಂದ ಲಕ್ಷಾಂತರ ಜನರು ಒಳಿತನ್ನು ಕಂಡಿದ್ದಾರೆ, ಕಾಣುತ್ತಲೂ ಇದ್ದಾರೆ.

ಹೊರರಾಜ್ಯಗಳಿಂದ ಹಾಗೂ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಭಕ್ತರು ಆಗಮಿಸಿ ಶ್ರೀ ದೇವಿಯ ಆಶೀರ್ವಾದವನ್ನು ಪಡೆಯುತ್ತಿದ್ದರು. ಆದರೆ ಈ ಬಾರಿ ಕೋವಿಡ್-19 ರ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದ ಮೇರೆಗೆ ಜಾತ್ರೆಯಲ್ಲಿ  ಭಕ್ತರ ಆಗಮನಕ್ಕೆ ನಿರ್ಬಂಧನೆ ಉಂಟಾಯಿತು.

ಬೇಸಿಗೆ ಹಾಗೂ ಮಳೆ ಗಾಲದಲ್ಲಿ ನಡೆಯುವಂತಹ ಜಾತ್ರಾ ಈ ಮಹೋತ್ಸವದಲ್ಲಿ ಚಿಕ್ಕ ಮಕ್ಕಳು. ವೃದ್ಧರು. ಮಹಿಳೆಯರು ಸೇರಿದಂತೆ ಸಾವಿರಾರು ಜನರು ಭಾಗಿಯಾಗುತ್ತಿದ್ದರು. ಜಾತ್ರೆಗೆ ಆಗಮಿಸಿದ ಪ್ರತಿಯೊಬ್ಬರು ಸರತಿ ಸಾಲಿನಲ್ಲಿ ನಿಂತು ದೇವಿಯ ಆಶೀರ್ವಾದವನ್ನು ಪಡೆಯುತ್ತಿದ್ದರು ಆದರೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಿರುವುದರಿಂದ ಭಕ್ತಾದಿಗಳಿಗೆ ದೇವಿಯ ದರ್ಶನ ಪಡೆಯಲು ಅವಕಾಶಗಳು ಸಿಗಲಿಲ್ಲ.


 ಮುಂದಿನ ಬಾರಿಯಾದರೂ ಜಾತ್ರೆಯ ಸಮಯದಲ್ಲಿ ಪ್ರಪಂಚದಲ್ಲಿ ಹರಡಿರುವ ಕೊರೊನಾ ಸೋಂಕು ನಿವಾರಣೆಯಾಗಿ ಶ್ರೀ ಮಾರಿಕಾಂಬಾ ದೇವಿಯ ಭಕ್ತರೆಲ್ಲರೂ ಜಾತ್ರೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆಯುವಂತಾಗಲಿ ಎಂದು ತಮ್ಮ ಅನಿಸಿಕೆಗಳನ್ನು ಮಾಧ್ಯಮಗಳಿಗೆ ಹಂಚಿಕೊಂಡರು ಭಕ್ತಾದಿಗಳು.

Leave a Reply

Your email address will not be published. Required fields are marked *