Headlines

ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ರಿಪ್ಪನ್‌ಪೇಟೆ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿಗಳು|Athletic

ರಿಪ್ಪನ್‌ಪೇಟೆ : ಅಥ್ಲೆಟಿಕ್ಸ್ 17 ವರ್ಷದೊಳಗಿನ ವಿಭಾಗದಲ್ಲಿ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ 17 ವರ್ಷ ವಯೋಮಿತಿಯೊಳಗಿನ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿಗಳಾದ ನಿತೀಶ್ ಟಿ ,ನಿತಿನ್ ಟಿ ,ಆಯುಷ್ ಎಸ್ ಆರ್ ಮತ್ತು ಅರ್ಜುನ್ 4*100 ರಿಲೇ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಹಾಗೂ ಗುಂಡು ಎಸೆತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ  ಕ್ರೀಡಾಕೂಟದಲ್ಲಿ…

Read Full News

ತಾಳಗುಪ್ಪ – ಮೈಸೂರು ರೈಲು ಹತ್ತುವಾಗ ಜಾರಿ ಕೆಳಗೆ ಬಿದ್ದ ಪ್ರಯಾಣಿಕ : ಕರ್ತವ್ಯ ಪ್ರಜ್ಞೆ ಮೆರೆದ ರೈಲ್ವೆ ಸಿಬ್ಬಂದಿಗಳು -ಸಿಸಿಟಿವಿ ವೀಡಿಯೋ ವೈರಲ್|Train

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ನಿನ್ನೆ ಮೈಸೂರು ತಾಳಗುಪ್ಪ ರೈಲು ಹತ್ತುವಾಗ ಪ್ರಯಾಣಿಕನೋರ್ವ ಸ್ಲಿಪ್ ಆಗಿ ಕೆಳಗೆ ಬಿದ್ದ ಘಟನೆ ನಡೆದಿದ್ದು ಈ ಘಟನೆ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪ್ರಯಾಣಿಕರು ಕೆಳಗೆ ಬೀಳುವುದನ್ನ ಗಮನಿಸಿದ ರೈಲ್ವೆ ಆರ್ ಪಿ ಎಫ್ ನ ಸಿಬ್ಬಂದಿ ಮಂಜುನಾಥ್ ಮತ್ತು ಅಣ್ಣಪ್ಪ ಅವರನ್ನ ರಕ್ಷಿಸಿದ್ದಾರೆ. ನಂತರ ಸಾರ್ವಜನಿಕರು ಸಹ ಸಿಬ್ವಂದಿಗಳ ಜೊತೆ ಕೈಜೋಡಿಸಿದ್ದಾರೆ. ಈ ವಿಡಿಯೋವನ್ನ ಟ್ವೀಟರ್ ನಲ್ಲಿ ಆರ್ ಪಿ ಎಫ್ ಮೈಸೂರು ವಿಭಾಗದ ರೈಲ್ವೆಯವರು ಪೋಸ್ಟ್ ಮಾಡಿದ್ದಾರೆ. ನಿನ್ನೆ…

Read Full News

ಯೋಗ ಪ್ರಶಸ್ತಿ ಪಡೆದ ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು|GFGCC

ರಿಪ್ಪನ್ ಪೇಟೆ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಶಿವಮೊಗ್ಗ ದಲ್ಲಿ ನಡೆದ ಕುವೆಂಪು ವಿಶ್ವವಿದ್ಯಾನಿಲಯ ಮಟ್ಟದ ಯೋಗ ಪಂದ್ಯಾವಳಿಯಲ್ಲಿ  ಭಾಗವಹಿಸಿ ಮಹಿಳಾ ಮತ್ತು ಪುರುಷ ವಿದ್ಯಾರ್ಥಿಗಳು ತೃತೀಯ ಚಾಂಪಿಯನ್ ಪಟ್ಟ ಪಡೆದು ಕೊಂಡಿದ್ದಾರೆ . ಕಾಲೇಜಿನ ವಿದ್ಯಾರ್ಥಿಗಳಾದ ಕಾರ್ತಿಕ್. ಎನ್. ಜಿ, ಉಜ್ವಲ್. ಎಂ, ಮುಸ್ತಾಫ ಎಂ, ನಂದನ್ ಕುಮಾರ್, ಅಭಿಷೇಕ್, ಮೇಘ. ಎನ್ ಕೆ, ಸನು ಜೆ, ಶೈಲಜಾ. ಜೆ. ಎಂ, ಸಂಧ್ಯಾ. ಹೆಚ್. ಎ, ಜಯಶ್ರೀ. ಹೆಚ್. ಎಸ್, ರವರಿದ್ದ…

Read Full News

ಸೇವಾ ಕಾರ್ಯ ಜನಮಾನಸದಲ್ಲಿ ಉಳಿಯುವಂತಾಗಲು ಸದಾ ಶ್ರಮಿಸಬೇಕು : ಡಾ ಜಿ ಡಿ ನಾರಾಯಣಪ್ಪ|Ripponpet

ರಿಪ್ಪನ್‌ಪೇಟೆ : ಮನುಷ್ಯನ ಹುಟ್ಟು- ಆಕಸ್ಮಿಕ ಸಾವು ನಿಶ್ಚಿತ ಈ ಮಧ್ಯದಲ್ಲಿನ ಬದುಕು ಜನಮಾನಸದಲ್ಲಿ ಉಳಿಯವಂತಾಗಲು ಸದಾ ಶ್ರಮಿಸುವಂತಾಗಬೇಕು ಅಂತಹ ಕಾರ್ಯದಲ್ಲಿ ಜಿ.ಆರ್.ಕೆ.ಮೂರ್ತಿ ಜನಸೇವಾ ಕಾರ್ಯ ಪ್ರಶಂಸನೀಯವೆಂದು ವೈದ್ಯರತ್ನ, ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ ಹೇಳಿದರು. ಪಟ್ಟಣದ ಜಿ.ಆರ್.ಕೆ.ಮೂರ್ತಿ ಸೇವಾ ಟ್ರಸ್ಟ್ ಗೆಳೆಯರ ಬಳಗ ಇವರ ಸಹಯೋಗದಲ್ಲಿ ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲಾ ಕ್ರೀಡಾಂಗಣದಲ್ಲಿ ಅಯೋಜಿಸಲಾದ ಅಭಿನಂದನಾ ಮಹೋತ್ಸವ ಮತ್ತು ನಗೆಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ದಿನಮಾನಗಳಲ್ಲಿ ಸ್ವಾರ್ಥ ಮನೋಭಾವನೆಯಿಂದಾಗಿ ನಮ್ಮ ತನವನ್ನು ಮರೆಯುವಂತಾಗಿದೆ. ಸಂಬಂಧಗಳಿಂದಲೂ…

Read Full News

ಗುಜರಾತ್ ಮತ್ತು ಹಿಮಾಚಲ ಚುನಾವಣೆ ಹಿನ್ನಲೆಯಲ್ಲಿ ರಿಪ್ಪನ್‌ಪೇಟೆಯಲ್ಲಿ ವಿವಿಧ ಪಕ್ಷಗಳಿಂದ ಸಂಭ್ರಮಾಚರಣೆ|Ripponpet

ರಿಪ್ಪನ್‌ಪೇಟೆ : ಗುಜರಾತ್‌, ಹಿಮಾಚಲ ಪ್ರದೇಶದ ಚುನಾವಣೆಯ ಫಲಿತಾಂಶವು ಗುರುವಾರ ಪ್ರಕಟಗೊಂಡಿದೆ. ಗುಜರಾತ್‌ನಲ್ಲಿ ಬಿಜೆಪಿ ಪಕ್ಷವು ಐತಿಹಾಸಿಕ ಗೆಲವು ಸಾಧಿಸಿದೆ. ಇದರಿಂದ ಸಂತಸಗೊಂಡಿರುವ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ತಿನ್ನಿಸಿ ಸಂಭ್ರಮಿಸಿದರು. ಪಟ್ಟಣದ ವಿನಾಯಕ ವೃತ್ತದಲ್ಲಿ ಕಾರ್ಯಕರ್ತರ ವಿಜಯೋತ್ಸವ ಜೋರಾಗಿತ್ತು. ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಸಾಧಿಸಿದ ಹಿನ್ನೆಲೆ ಪಟಾಕಿ ಸಿಡಿಸಿ,‌ ಪರಸ್ಪರ ಸಿಹಿ ತಿನ್ನಿಸಿದರು.ಬಿಜೆಪಿ ಪಕ್ಷದ ಬಾವುಟ ಹಿಡಿದು ಜಯಘೋಷಣೆ ಕೂಗಿದರು. ಶಕ್ತಿ ಕೇಂದ್ರದ ಅಧ್ಯಕ್ಷ ಎಂ ಬಿ ಮಂಜುನಾಥ್ ,ಮುಖಂಡರಾದ ಎನ್…

Read Full News

ಇಂದು ಸಂಜೆ ರಿಪ್ಪನ್‌ಪೇಟೆಯಲ್ಲಿ ಹಾಸ್ಯ ಬ್ರಹ್ಮ ಗಂಗಾವತಿ ಪ್ರಾಣೇಶ್ ರವರಿಂದ ನಗೆ ಹಬ್ಬ – ಕಾರ್ಯಕ್ರಮಕ್ಕೆ ಭರದ ಸಿದ್ದತೆ|Ripponpet

ರಿಪ್ಪನ್‌ಪೇಟೆ : ಇಂದು ಸಂಜೆ 07 ಗಂಟೆಗೆ ಪಟ್ಟಣದಲ್ಲಿ ಹಾಸ್ಯಬ್ರಹ್ಮ ಗಂಗಾವತಿ ಪ್ರಾಣೇಶ್ ಮತ್ತು ಬಸವರಾಜ್ ಮಾಮನಿ ರವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬರುವೆ ಶಾಲಾ ಮೈದಾನದಲ್ಲಿ ಇಂದು ಜಿ.ಆರ್.ಕೆ. ಮೂರ್ತಿ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಅಭಿನಂದನಾ ಮಹೋತ್ಸವ ಹಾಗೂ ನಗೆಹಬ್ಬ ಕಾರ್ಯಕ್ರಮದಲ್ಲಿ ಅಭಿನವ ಬೀಚಿ, ಹಾಸ್ಯ ಬ್ರಹ್ಮ ಗಂಗಾವತಿ ಪ್ರಾಣೇಶ, ನರಸಿಂಹ ಜೋಶಿ, ಬಸವರಾಜ ಮಾಮನಿಯವರಿಂದ ‘ನಗೆ ಹಬ್ಬ’ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಿಪ್ಪನ್‌ಪೇಟೆ, ಅರಸಾಳು, ಕೆಂಚನಾಲ, ಬಾಳೂರು,…

Read Full News

ಗಾಂಜಾ ಧಂಧೆಕೋರರನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ : ಸಿಪಿಐ ಗಿರೀಶ್ ಬಿ ಸಿ|CPI

ರಿಪ್ಪನ್‌ಪೇಟೆ : ಗಾಂಜಾ ಮಾರಾಟ ಹಾಗೂ ಸೇವನೆಯನ್ನು ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಎಂದು ಹೊಸನಗರ ಸಿಪಿಐ ಗಿರೀಶ್ ಹೇಳಿದರು. ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡಿದ್ದ ‘ಅಪರಾಧ ತಡೆ ಮಾಸಾಚರಣೆ ಡಿಸೆಂಬರ್-೨೦೨೨ರ’ ಕಾರ್ಯಕ್ರಮದಲ್ಲಿ ಮಾತನಾಡಿ ಗಾಂಜಾ ಸೇವನೆ ವ್ಯಕ್ತಿಯನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಕುಗ್ಗಿಸುತ್ತದೆ.ಗಾಂಜಾ ವ್ಯಸನಿಗಳು ಎಂತಹ ಅಪರಾಧ ಚಟುವಟಿಕೆ ಮಾಡಲು ಹಿಂಜರಿಯುವುದಿಲ್ಲ,ಅಂತಹ ದುಷ್ಟ ಶಕ್ತಿಗಳನ್ನು ಬಗ್ಗುಬಡಿಯುವ ಕೆಲಸ ಪೊಲೀಸ್ ಇಲಾಖೆ ಯಾವುದೇ ಮುಲಾಜಿಲ್ಲದೇ ಮಾಡುತ್ತದೆ ಎಂದರು. ವಿವಿಧ ಕಾರಣಗಳಿಂದ ಸಮಾಜದಲ್ಲಿ ನಿತ್ಯವೂ ಒಂದಿಲ್ಲೊಂದು…

Read Full News

ನಾಳೆ(09-12-2022) ಸಂಜೆ 7 ರಿಂದ 12 ಗಂಟೆ ರಿಪ್ಪನ್‌ಪೇಟೆ – ಆಯನೂರು ಮಾರ್ಗ ಬಂದ್ – ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಡಳಿತ ಪ್ರಕಟಣೆ|Ripponpet

ರಿಪ್ಪನ್‌ಪೇಟೆ : ಕುಂಸಿ – ಆನಂದಪುರ ರೈಲ್ವೆ ಮಾರ್ಗದ ಲೆವೆಲ್ ಕ್ರಾಸಿಂಗ್ ನಂ 92 ರಲ್ಲಿ ತಾಂತ್ರಿಕ ಪರಿಶೀಲನೆ ಇರುವುದರಿಂದ 12 ಗಂಟೆಗಳ ಕಾಲ ರಿಪ್ಪನ್‌ಪೇಟೆ ಯಿಂದ ಆಯನೂರು ಮಾರ್ಗ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ. ರೈಲ್ವೆ ಗೇಟ್ ಸಂಖ್ಯೆ 92 ರಲ್ಲಿ (ಆರಸಾಳು ಗ್ರಾಮದಲ್ಲಿರುವ ರೈಲ್ವೆ ಗೇಟ್) ತಾಂತ್ರಿಕವಾಗಿ ಪರಿಶೀಲನೆ ಮಾಡಲು ದಿನಾಂಕ 09-12-22ರ ಸಂಜೆ 7:೦೦ ಗಂಟೆಯಿಂದ 10-12-22ರ ಬೆಳಿಗ್ಗೆ 7:೦೦ ಗಂಟೆಯವರೆಗೆ ಗೇಟನ್ನು ಮುಚ್ಚುವುದರಿಂದ ತಾತ್ಕಾಲಿಕ  ಪರ್ಯಾಯ ಮಾರ್ಗಗಳು…

Read Full News

ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ಒತ್ತು ನೀಡಬೇಕು : ಎಂ ಶ್ರೀಕಾಂತ್|Jds

ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಪ್ರತಿಯೊಬ್ಬರೂ ಒತ್ತು ನೀಡಬೇಕಿದೆ ಎಂದು ಜೆಡಿಎಸ್ ರಾಜ್ಯ ವಕ್ತಾರ ಎಂ.ಶ್ರೀಕಾಂತ್ ಕಾರ್ಯಕರ್ತರಿಗೆ ಕರೆ ನೀಡಿದರು. ಶಿವಮೊಗ್ಗದ ನೆಹರು ರಸ್ತೆಯ ಜೆಡಿಎಸ್ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ತಾಲೂಕಿನಿಂದ ಬೂತ್ ಮಟ್ಟದ ಕಮಿಟಿ ನಿರ್ಮಾಣ ಮಾಡುವುದು ಮತ್ತು ಪ್ರತಿ ಕ್ಷೇತ್ರದಿಂದ 50 ಅಲ್ಪಸಂಖ್ಯಾತ ಪ್ರಮುಖರ ಪಟ್ಟಿಯನ್ನು ರಾಜ್ಯ ಸಮಿತಿಗೆ ಕಳುಹಿಸಬೇಕು. ಈ ನಿಟ್ಟಿನಲ್ಲಿ ಜೆಡಿಎಸ್ ಪ್ರಮುಖರು ತಾಲೂಕುಗಳಿಗೆ ಪ್ರವಾಸ ಕೈಗೊಳ್ಳಬೇಕು ಎಂದು ಸೂಚಿಸಿದರು. ಪ್ರಸ್ತುತ…

Read Full News

ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳು|Athletic

ರಿಪ್ಪನ್‌ಪೇಟೆ : ಅಥ್ಲೆಟಿಕ್ಸ್ 17 ವರ್ಷದೊಳಗಿನ ವಿಭಾಗದಲ್ಲಿ ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳಾದ ಆಯುಷ್ ಮತ್ತು ಅನೀಶ್ ರವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗದ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ 17 ವರ್ಷ ವಯೋಮಿತಿಯೊಳಗಿನ ಅಥ್ಲೆಟಿಕ್ಸ್ ಪಂದ್ಯಾವಳಿಯಲ್ಲಿ ರಾಮಕೃಷ್ಣ ವಿದ್ಯಾಲಯದ 10 ನೇ ತರಗತಿ ವಿದ್ಯಾರ್ಥಿ ಆಯುಷ್ 800 ಮೀ ಹಾಗೂ 1500 ಮೀ ಓಟ ಸ್ಪರ್ದೆಯಲ್ಲಿ  ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 7 ನೇ ತರಗತಿಯ ಅನೀಶ್ 100 ಮೀ ಓಟದಲ್ಲಿ…

Read Full News

ಆನಂದಪುರ : ಉರುಳಿಗೆ ಸಿಲುಕಿ ಪ್ರಾಣ ಬಿಟ್ಟ ಚಿರತೆ|Leopard

ಆನಂದಪುರ ವಲಯ ಅರಣ್ಯದ ಚೋರಡಿ ತುಪ್ಪೂರು ಭಾಗದಲ್ಲಿ ಚಿರತೆಗಳ ಹಾವಳಿ ಹೆಚ್ಚಿದೆ. ಅದೇ ರೀತಿ ವನ್ಯ ಪ್ರಾಣಿಗಳ ಭೇಟೆ ಕೂಡ ಅವ್ಯಾಹತವಾಗಿ ನಡೆಯುತ್ತಿದೆ. ಜಮೀನಿಗೆ ಲಗ್ಗೆ ಇಡುವ ಕಾಡುಹಂದಿಗಳ ಬೇಟೆಗೆ ಉರುಳು ಹಾಕುವುದು, ಎಲೆಕ್ಟ್ರಿಕ್ ಕರೆಂಟ್ ಕೊಡುವುದು ಸಾಮಾನ್ಯ ಎಂಬಂತಾಗಿದೆ. ಇದಕ್ಕೆ ಪೂರಕ ಎಂಬಂತೆ,  ಆನಂದಪುರ ರೇಂಜ್ ನ ಚೋರಡಿ ಸಮೀಪದ ಕೋಣೆಹೊಸೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಹಾಕಿದ ಉರುಳಿಗೆ ಸಿಲುಕಿ ಚಿರತೆಯೊಂದು ಒದ್ದಾಡಿ ಪ್ರಾಣಬಿಟ್ಟಿದೆ.  ಸುಮಾರು 5 ರಿಂದ 6 ವರ್ಷ ಪ್ರಾಯದ ಗಂಡು…

Read Full News

ಡಿ.09 ಮತ್ತು 10 ರಂದು ರಿಪ್ಪನ್‌ಪೇಟೆಯಲ್ಲಿ ಜಿ.ಆರ್.ಕೆ. ಮೂರ್ತಿ ಟ್ರಸ್ಟ್ ವತಿಯಿಂದ ಅಭಿನಂದನಾ ಮಹೋತ್ಸವ ಮತ್ತು ನಗೆ ಹಬ್ಬ|GRK

ರಿಪ್ಪನ್‌ಪೇಟೆ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಬರುವೆ ಶಾಲಾ ಮೈದಾನದಲ್ಲಿ ಡಿ. 9 ಮತ್ತು 10 ರಂದು ಜಿ.ಆರ್.ಕೆ. ಮೂರ್ತಿ ಟ್ರಸ್ಟ್ ವತಿಯಿಂದ ಅಭಿನಂದನಾ ಮಹೋತ್ಸವ ಹಾಗೂ ನಗೆಹಬ್ಬ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ ಹಾಗೂ ಜೆಡಿಎಸ್ ಮುಖಂಡ ಅರ್ ಎ ಚಾಬುಸಾಬ್ ಜಂಟಿ ಪತ್ರೀಕಾ ಗೋಷ್ಠಿಯಲ್ಲಿ ತಿಳಿಸಿದರು. ಪಟ್ಟಣದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಿವಂಗತ ಜಿ.ಆರ್.ಕೆ. ಮೂರ್ತಿಯವರ ಸಮಾಜ ಸೇವೆಯನ್ನು ಸ್ಮರಿಸುತ್ತ ಪಟ್ಟಣದಲ್ಲಿ ಎರಡು…

Read Full News

ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಗ್ರಾಮ ಪಂಚಾಯತ್ ಪಿಡಿಒ ಅಮಾನತ್ತು|PDO

ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಗ್ರಾಮ ಪಂಚಾಯತ್ ಪಿಡಿಓ ರವರನ್ನು ಅಮಾನತುಗೊಳಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಚೋರಡಿ ಗ್ರಾಮದಲ್ಲಿ ನಡೆದಿದೆ. ಚೋರಡಿ ಗ್ರಾಮ ಪಂಚಾಯತಿ  ಪಿಡಿಒ ಗೋಪಾಲಾಚಾರಿ ಎಂಬುವರನ್ನು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಪ್ರಕಾಶ್ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ. ದೂರದೃಷ್ಠಿ ಯೋಜನೆ ಮತ್ತು ಗ್ರಂಥಾಲಯಗಳ ಡಿಜಿಟಲೀಕರಣಗೊಳಿಸಲು ನಿರ್ಲಕ್ಷ ವಹಿಸಿದ್ದರ ಹಿನ್ನಲೆಯಲ್ಲಿ ಅವರನ್ನ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ. ದೂರದೃಷ್ಠಿ ಯೋಜನೆಯನ್ನ ಮತ್ತು ಗ್ರಂಥಾಲಯಗಳಲ್ಲಿ ಡಿಜಿಟಲೀಕರಣಗೊಳಿಸುವಂತೆ ಸೂಚಿಸಿ ಅನೇಕ ತಿಂಗಳಾದರೂ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇತ್ತೀಚೆಗೆ ಸಿಇಒ ಪ್ರಕಾಶ್ ಗ್ರಾಮ…

Read Full News

SSLC ಅಂತಿಮ ಪರೀಕ್ಷೆಯ ವೇಳಾಪಟ್ಟಿ ಪ್ರಕಟಣೆ – ಈ ಬಾರಿ ಮುಂಚಿತವಾಗಿ ನಡೆಯಲಿದೆ ಅಂತಿಮ ಪರೀಕ್ಷೆ: ವಿವರಗಳಿಗೆ ಈ ಸುದ್ದಿ ನೋಡಿ

ರಾಜ್ಯಾದ್ಯಂತ ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾ ಪಟ್ಟಿ ಪ್ರಕಟವಾಗಿದ್ದು ಮಾ.31 ರಿಂದ ಏ.15ರ ವರೆಗೆ ಪರೀಕ್ಷೆ ನಡೆಯಲಿದೆ. 2023 ರ ವಿಧಾನ ಸಭಾ ಚುನಾವಣೆ ಹಿನ್ನಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಂಚಿತವಾಗಿ ನಡೆಯಲಿದೆ. ದಿನಾಂಕ 31-03-2023, ಶುಕ್ರವಾರ – ಪ್ರಥಮ ಭಾಷೆ – ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್(NCERT) ಹಾಗು ಸಂಸ್ಕೃತ ದಿನಾಂಕ 04-04-2023, ಮಂಗಳವಾರ – ಕೋರ್ ಸಬ್ಜೆಕ್ಟ್ – ಗಣಿತ ಮತ್ತು ಸಮಾಜಶಾಸ್ತ್ರ ದಿನಾಂಕ 06-04-2023,…

Read Full News

ಶಿರಾಳಕೊಪ್ಪದಲ್ಲಿ ಕಿಡಿಗೇಡಿಗಳ ಅಟ್ಟಹಾಸ – ನಿಷೇಧಿತ ಸಂಘಟನೆಯ ಗೋಡೆ ಬರಹ|shiralakopppa

ಮಲೆನಾಡಿನ ಹೆಬ್ಬಾಗಿಲಲ್ಲಿ ಮತ್ತೆ ಕಿಡಿಗೇಡಿ ಕೃತ್ಯ ಕಂಡು ಬಂದಿದೆ. ಶಾಂತವಾಗಿದ್ದ ಶಿವಮೊಗ್ಗದಲ್ಲಿ ‘ಜಾಯಿನ್ ಸಿಎಫ್‌ಐ’ ಎನ್ನುವ ಗೋಡೆ ಬರೆದು ಸಮಾಜದ ಸ್ವಾಸ್ಥ್ಯ ಕದಡಲು ಕಿಡಿಗೇಡಿಗಳು ಮುಂದಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ವಿವಿಧ ಕಡೆಗಳಲ್ಲಿ ಕಿಡಿಗೇಡಿಗಳು ಜಾಯಿನ್ ಸಿಎಫ್‌ಐ ಎಂಬ ಗೋಡೆ ಬರಹ ಬರದಿದ್ದಾರೆ. ಈ ಸಂಬಂಧ ಶಿರಾಳಕೊಪ್ಪ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಲ್ಲೆಲ್ಲಿ ಗೋಡೆ ಬರಹಗಳು? ಹಳೆಯ ಪೆಟ್ರೋಲ್ ಬಂಕ್ ಪಕ್ಕದ ಕಂಬ, ಭೋವಿ ಕಾಲೋನಿಗೆ ಹೋಗುವ ರಸ್ತೆಯಲ್ಲಿ ವಿದ್ಯುತ್ ಕಂಬ,…

Read Full News

ಡಾ.ಧನಂಜಯ್ ಸರ್ಜಿ ಹಾಗೂ ಕೆ ಎಸ್ ಪ್ರಶಾಂತ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆ|BJP

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿವಿಧ ಪಕ್ಷ ಸೇರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಶಿವಮೊಗ್ಗದ ಖ್ಯಾತ ವೈದ್ಯ ಡಾ. ಧನಂಜಯ ಸರ್ಜಿ ಬಿಜೆಪಿ ಸೇರಿದರು. ಭಾನುವಾರ ಶಿವಮೊಗ್ಗ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಧನಂಜಯ ಸರ್ಜಿ ಹಾಗೂ ಸಾಗರದ ಯುವ ರಾಜಕಾರಣಿ ಕೆ. ಎಸ್. ಪ್ರಶಾಂತ್ ಬಿಜೆಪಿ ಸೇರ್ಪಡೆಗೊಂಡರು. ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಶಿವಮೊಗ್ಗ ನಗರ ಶಾಸಕ ಶಾಸಕ ಕೆ. ಎಸ್. ಈಶ್ವರಪ್ಪ, ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ಮುಂತಾದವರು ಉಪಸ್ಥಿತಿಯಲ್ಲಿ ಅವರು ಪಕ್ಷ…

Read Full News

ದ್ವಿತೀಯ ಪಿಯುಸಿ ಪೂರ್ವಸಿದ್ದತಾ ಪರೀಕ್ಷೆಯ ವೇಳಾಪಟ್ಟಿ ಪ್ರಕಟಣೆ|PUC

ಶಿವಮೊಗ್ಗ ಜಿಲ್ಲೆಯ ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು  ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು ಪ್ರಕಟಿಸಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದಲ್ಲಿ ಮಹತ್ತರ ಪಾತ್ರ ವಹಿಸುವ  ಪದವಿ ಪೂರ್ವ ಶಿಕ್ಷಣ ಉನ್ನತ ಶಿಕ್ಷಣಕ್ಕೆ ಮಾರ್ಗದರ್ಶಿಯಾಗಲಿದೆ.  2023 ಜನವರಿ 18 ರಿಂದ ಜನವರಿ 29ರ ತನಕ ಪೂರ್ವ ಸಿದ್ಧತಾ ಪರೀಕ್ಷೆ ನಡೆಯಲಿದೆ. ಪರೀಕ್ಷಾ ವೇಳಾಪಟ್ಟಿ ಈ ಕೆಳಗಿನಂತಿದೆ.

Read Full News

ಶಂಕಿತ ಭಯೋತ್ಪಾದಕ ಶಾರೀಕ್ ಸಹಚರರ ಮಾಹಿತಿ ಸಂಗ್ರಹಕ್ಕೆ ಶಿವಮೊಗ್ಗಕ್ಕೆ NIA ತಂಡ ಭೇಟಿ

ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಮೊಹಮ್ಮದ್ ಶಾರಿಕ್ ಮತ್ತು ಆತನ ಸಹಚರರ ಕುರಿತು ಮಾಹಿತಿ ಸಂಗ್ರಹಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಶಿವಮೊಗ್ಗಕ್ಕೆ ಭೇಟಿ ನೀಡಿದ್ದಾರೆ. ಶನಿವಾರ ಬೆಳಗ್ಗೆ ಎನ್‌ಐಎ ಅಧಿಕಾರಿಗಳ ತಂಡ ಗ್ರಾಮಾಂತರ ಪೊಲೀಸ್ ಠಾಣೆಗೆ ಭೇಟಿ ನೀಡಿ, ಮಾಹಿತಿ ಸಂಗ್ರಹಿಸುತ್ತಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ಮೂವರು ಅಧಿಕಾರಿಗಳ ತಂಡ ಶಿವಮೊಗ್ಗಕ್ಕೆ ಆಗಮಿಸಿದೆ. ಮೂರು ತಿಂಗಳ ಹಿಂದೆ ತೀರ್ಥಹಳ್ಳಿಯ ಮೊಹಮ್ಮದ್ ಶಾರಿಕ್ ನ ಸಹಚರರಾದ ಮಾಜ್ ಮುನೀರ್ ಅಹಮದ್ ಮತ್ತು ಶಿವಮೊಗ್ಗದ ಸಯ್ಯದ್…

Read Full News

ನಾಯಿಯನ್ನು ಭೇಟೆಯಾಡಲು ಬಂದ ಚಿರತೆ ಬೋನಿಗೆ ಬಿತ್ತು – ಅಂತೂ ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆಯನು ಸೆರೆ ಹಿಡಿದ ಅರಣ್ಯ ಇಲಾಖೆ|Leopard

ಹಲವು ದಿನಗಳಿಂದ ಗ್ರಾಮಸ್ಥರಿಗೆ ಭಯ ಹುಟ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ  ಭದ್ರಾವತಿ ತಾಲೂಕು  ಹರಮಘಟ್ಟ ಗ್ರಾಮದಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿದ್ದು ಚಿರತೆಯನ್ನ ನೋಡಲು ಜನ ಸಾಗರವೇ ಹರಿದು ಬಂದಿದೆ. ಸುಮಾರು 15 ದಿನಗಳ ಹಿಂದೆ 3 ಹಸುಗಳನ್ನ‌ ಭೇಟೆಯಾಡಿದ್ದ ಚಿರತೆ ಹಾವಳಿ ಗ್ರಾಮಸ್ಥರಲ್ಲಿ ಭಯವನ್ನ ಹುಟ್ಟಿಸಿತ್ತು. ಇದರಬೆನ್ನಲ್ಲೇ ಗ್ರಾಮಸ್ಥರು ಚಿರತೆಯನ್ನ ಹಿಡಿಯಲು ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಹರಮಘಟ್ಟದ 200 ಮೀಟರ್ ವ್ಯಾಪ್ತಿಯಲ್ಲಿ ಬೋನು ಇಟ್ಟು ಅದರಲ್ಲಿ ನಾಯಿಯನ್ನ ಇಡಲಾಗಿತ್ತು….

Read Full News

ಅವಿಶ್ವಾಸ ಗೊತ್ತುವಳಿ: ಅಧಿಕಾರ ಕಳೆದುಕೊಂಡ ಹೆದ್ದಾರಿಪುರ ಗ್ರಾಪಂ ಅಧ್ಯಕ್ಷೆ ವನಿತಾ ಗಂಗಾಧರ್|heddaripura

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಹೆದ್ದಾರಿಪುರ ಗ್ರಾ.ಪಂ. ಅಧ್ಯಕ್ಷೆ ವಿರುದ್ಧ ಸದಸ್ಯರು ಶುಕ್ರವಾರ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ್ದು, ಮೂರನೇ ಎರಡು ಮತಗಳಿಂದ ಪಂಚಾಯತ್ ಅಧ್ಯಕ್ಷೆ ವನಿತಾ ಗಂಗಾಧರ್ ತನ್ನ ‌ಸ್ಥಾನ ಕಳೆದುಕೊಂಡಿದ್ದಾರೆ. ಹೆದ್ದಾರಿಪುರ ಗ್ರಾಮ ಪಂಚಾಯತ್ ನಲ್ಲಿ ಒಟ್ಟು 15 ಸದಸ್ಯರಿದ್ದು ಓರ್ವರು ಮೃತಪಟ್ಟಿದ್ದಾರೆ, ಈ ಪೈಕಿ 11 ಸದಸ್ಯರು ಅವಿಶ್ವಾಸ ಗೊತ್ತುವಳಿ ಪರ ಮತ ಚಲಾಯಿಸಿದ್ದಾರೆ.ಇದರಲ್ಲಿ 4 ಬಿಜೆಪಿ ಬೆಂಬಲಿತ ಸದಸ್ಯರು,5 ಕಾಂಗ್ರೆಸ್ ಬೆಂಬಲಿತರು ಹಾಗೂ 2 ಪಕ್ಷೇತರ ಸದಸ್ಯರು ಅವಿಶ್ವಾಸ ಗೊತ್ತುವಳಿ ಪರ…

Read Full News

ಹೊಸನಗರ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಹೊತ್ತಿ ಉರಿದ ಮನೆ – ಉಟ್ಟ ಬಟ್ಟೆಯಲ್ಲಿಯೇ ಬೀದಿಗೆ ಬಿದ್ದ ಬಡ ಕುಟುಂಬ|Fire

ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಬ್ಬಿಗ ಗ್ರಾಮದ ಕೂಡ್ಲಿಕೊಪ್ಪ ಸ್ವಾಮಿ ಎಂಬುವವರ ಮನೆಗೆ ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯುಟ್ ಸಂಭವಿಸಿದ್ದು ಮನೆ ಸಂಪೂರ್ಣ ಸುಟ್ಟು ಹೋಗಿದೆ. ತಡರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದ್ದು ಕೂಡಲೇ ಮನೆಯಲ್ಲಿದ್ದವರೆಲ್ಲಾ ಹೊರಗೆ ಬಂದಿದ್ದಾರೆ. ನೋಡನೋಡುತ್ತಿದ್ದಂತೆ ಮನೆ ಬೆಂಕಿಯ ಕೆನ್ನಾಲಿಗೆ ಮನೆಯನ್ನೆಲ್ಲಾ ಆವರಿಸಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ‌ ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಹೊಸನಗರ ಅಗ್ನಿ ಶಾಮಕ ಸಿಬ್ಬಂದಿಗಳು ಅಳಿದುಳಿದ ಬೆಂಕಿಯನ್ನು ಆರಿಸಲು ಪ್ರಯತ್ನ ಪಟ್ಟಿದ್ದಾರೆ. ಕೂಡ್ಲಿಕೊಪ್ಪ…

Read Full News

ರಿಪ್ಪನ್‌ಪೇಟೆ : ಹೆಚ್ಚಿದ ಬೀದಿ ನಾಯಿಗಳ ಉಪಟಳ -ಜೀವ ಬಲಿ ಪಡೆಯುವ ಮುನ್ನ ಎಚ್ಚೆತ್ತುಕೊಳ್ಳಲಿ ಗ್ರಾಮಾಡಳಿತ|Stray dogs attack

ರಿಪ್ಪನ್‌ಪೇಟೆ : ಇತ್ತೀಚಿನ ದಿನಗಳಲ್ಲಿ ಜನರಿಗೆ ನಾಯಿಗಳ ಮೇಲಿನ ಪ್ರೀತಿ ಹೆಚ್ಚಾಗ್ತಿದೆ. ಅದಕ್ಕಂತಲೇ ಅನೇಕ ಮಂದಿ ವಿವಿಧ ಜಾತಿಯ ನಾಯಿಗಳನ್ನು ಮನೆಗೆ ತಂದು ಸಾಕಲು ಮುಂದಾಗಿದ್ದಾರೆ. ಆದರೆ  ಕೆಲ ಬಡಾವಣೆಯಲ್ಲಿರುವ ರಾಕ್ಷಸ ರೂಪದ ಬೀದಿ ನಾಯಿಗಳ ಕಾಟದಿಂದ ಮಕ್ಕಳನ್ನು ಮನೆಯಿಂದ ಹೊರ ಕಳಿಸುವುದಕ್ಕೂ ಪೋಷಕರು ಭಯಪಡುವ ಕಾಲ ಬಂದಿದೆ. ನಿನ್ನೆಯ ದಿನ ಭದ್ರಾವತಿಯಲ್ಲಿ ನಾಯಿ‌ ದಾಳಿಗೆ ಮಗು ಸಾವನ್ನಪ್ಪಿದ ಬೆನ್ನಲ್ಲೇ ಶಿವಮೊಗ್ಗ ನಗರದಲ್ಲಿ ಇಂದು ನಾಲ್ಕು ವರ್ಷದ ಮಗು ಮೇಲೆ ನಾಯಿ ದಾಳಿ ನಡೆಸಿದೆ.ಅದೇ ತರಹದ ಪ್ರಕರಣವೊಂದು…

Read Full News

ಬಟ್ಟೆಮಲ್ಲಪ್ಪದಲ್ಲಿ ನೂತನವಾಗಿ ಅನಾವರಣಗೊಂಡಿದ್ದ ಎಸ್ ಬಂಗಾರಪ್ಪರವರ ನಾಮಫಲಕವನ್ನು ರಾತ್ರೋರಾತ್ರಿ ಕಿತ್ತು ಹಾಕಿದ ಕಿಡಿಗೇಡಿಗಳು – ಆಮ್ ಆದ್ಮಿ ಪಕ್ಷದಿಂದ ಆಕ್ರೋಶ|Bangarappa

ನಾಡುಕಂಡ  ದಿಟ್ಟ ನೇರ  ನಡೆ  ನುಡಿ ವ್ಯಕ್ತಿತ್ವದ  ಧೀಮಂತ್  ರಾಜಕಾರಣಿ ರಾಜ್ಯದ  ಮಾಜಿ  ಮುಖ್ಯ ಮಂತ್ರಿ ಎಸ್. ಬಂಗಾರಪ್ಪ  ರವರ ಹೆಸರನ್ನು ಬಟ್ಟೆ ಮಲ್ಲಪ್ಪ ಸರ್ಕಲ್ ಗೆ ಆಮ್ ಆದ್ಮಿ ಪಕ್ಷ ಹಾಗೂ ಕೆಲ ಸಂಘಟನೆಗಳ  ವತಿಯಿಂದ ಕಳೆದ 6 ದಿನಗಳ ಹಿಂದೆ ನಾಮಕರಣ  ಮಾಡಲಾಗಿತ್ತು. ಹಾಗೆಯೇ  ನಾಮ ಫಲಕವನ್ನು ಅಳವಡಿಸಲಾಗಿತ್ತು. ಇದನ್ನು ಸಹಿಸದ ಕೆಲ ದುಷ್ಕರ್ಮಿಗಳು ನಾಮ ಫಲಕವನ್ನು ಕಿತ್ತೊಗೆದಿದ್ದಾರೆ ಎಂದು ಹೊಸನಗರ ತಾಲೂಕು ಆಮ್ ಆದ್ಮಿ ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ…

Read Full News

ಸಾಗರ ನಗರಸಭೆ ಅಧಿಕಾರಿಗಳ ಗೂಂಡಾವರ್ತನೆ – ಬಡ ವ್ಯಾಪಾರಿಗಳ ಹೊಟ್ಟೆ ಮೇಲೆ ಹೊಡೆದ ಅಧಿಕಾರಿಗಳು|Sagara

ಸಾಗರ : ನಗರಸಭೆ ವ್ಯಾಪ್ತಿಯ ಕೆನರಾ ಬ್ಯಾಂಕ್ ಬಳಿ ಬೀದಿ ಬದಿಯಲ್ಲಿ ಹೊಟ್ಟೆಪಾಡಿಗೆ ಹಣ್ಣು ವ್ಯಾಪಾರ ಮಾಡುವವರನ್ನು ನಗರಸಭೆ ಅಧಿಕಾರಿಗಳು ಬೀದಿಗೆ ತಳ್ಳಿದ್ದಾರೆ.ರಾತ್ರೋರಾತ್ರಿ ಕಳ್ಳರ ಹಾಗೆ ಬಂದು ಅಂಗಡಿಗಳನ್ನು ತೆರವುಗೊಳಿಸಿ ಬಡವರ ಮೇಲೆ ತಮ್ಮ ಶೂರತನ ಮೆರೆದಿದ್ದಾರೆ. ಸಾಲ ಮಾಡಿ ತಂದು ನಾಲ್ಕಾಣೆ ಲಾಭಕ್ಕೆ ಮಾರಾಟ ಮಾಡಿ ತನ್ನ ಹಾಗೂ ಕುಟುಂಬದ ಹೊಟ್ಟೆಪಾಡಿಗಾಗಿ ತಂದಿದ್ದ ಹಣ್ಣುಗಳನ್ನು ರಸ್ತೆಯ ತುಂಬ ಚೆಲ್ಲಾಡಿ ರಾಕ್ಷಸರಂತೆ ವರ್ತಿಸಿದ್ದಾರೆ. ಸಾಗರ ನಗರ ವ್ಯಾಪ್ತಿಯಲ್ಲಿ ಬಹುತೇಕ ಬಡವರು,ಅವಿದ್ಯಾವಂತರು ದೊಡ್ಡ ದೊಡ್ಡ ಮಳಿಗೆಯನ್ನು ಬಾಡಿಗೆ ಪಡೆದು…

Read Full News

ರಿಪ್ಪನ್‌ಪೇಟೆ : 24 ಗಂಟೆಯೊಳಗೆ ಸರ್ಕಾರಿ ವೈದ್ಯರ ವರ್ಗಾವಣೆಗೊಳಿಸುವಂತೆ ಗ್ರಾಮಸ್ಥರ ಒಕ್ಕೊರಲ ಆಗ್ರಹ|Ripponpet

ರಿಪ್ಪನ್‌ಪೇಟೆ : ಇಲ್ಲಿನ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ರಾತ್ರಿ ಪಾಳಿಯಲ್ಲಿ ವೈದರಿಲ್ಲದೇ ರೋಗಿಗಳು ಹಾಗೂ ಆಕಸ್ಮಿಕ ಅಪಘಾತಕ್ಕೀಡಾದವರು ಪರಿತಪಿಸುವಂತಾಗಿದ್ದು ಕೂಡಲೇ ನಾಲ್ವರು ವೈದ್ಯಾಧಿಕಾರಿಗಳನ್ನು ವರ್ಗಾವಣೆಗೊಳಿಸುವಂತೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದರು. ರಿಪ್ಪನ್‌ಪೇಟೆಯ ಗ್ರಾಮ ಪಂಚಾಯ್ತಿ ಕುವೆಂಪು ಸಭಾ ಭವನದಲ್ಲಿ 2022-23 ನೇ ಸಾಲಿನ ಗ್ರಾಮ ಸಭೆಯಲ್ಲಿ ಹೆಸರಿಗೆ ನಾಲ್ವರು ವೈದ್ಯಾಧಿಕಾರಿಗಳಿದ್ದರೂ ಕೂಡಾ ರಾತ್ರಿ ವೇಳೆ ಅರೋಗ್ಯ ಕಾರ್ಯಕರ್ತೆಯೇ ವೈದ್ಯರಾಗಿ ಹೆರಿಗೆ ಮಾಡಿಸುವುದು ಮತ್ತು ತುರ್ತು ಚಿಕಿತ್ಸೆ ನೀಡುವಂತಾಗಿದೆ ಹಾಗಾದರೆ ನಮ್ಮೂರಿಗೆ ಇಂತಹ ಬೇಜವಾಬ್ದಾರಿ ವೈದ್ಯಾಧಿಕಾರಿಗಳು ಏಕೆ…

Read Full News

ಕಾಗೋಡು ತಿಮ್ಮಪ್ಪ ಹೆಂಡ ಮತ್ತು ಸಿಗರೇಟ್ ಮಾರುತ್ತಾರೆ ಎಂದ ಹರತಾಳು ಹಾಲಪ್ಪ : ಶಾಸಕರ ವಿರುದ್ದ ಕಾಂಗ್ರೆಸ್ ಕಿಡಿಕಿಡಿ- ಪ್ರತಿಭಟನೆಯ ಎಚ್ಚರಿಕೆ|Sagara

ಸಾಗರ : ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ವಿರುದ್ಧ ಶಾಸಕ ಹಾಲಪ್ಪ ಹರತಾಳು ಸರ್ಕಾರಿ ಕಾರ್ಯಕ್ರಮದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಶಾಸಕರು ತಮ್ಮ ವರ್ತನೆಯನ್ನು ತಿದ್ದಿಕೊಳ್ಳದೆ ಹೋದಲ್ಲಿ ಅವರ ವಿರುದ್ಧ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಎಚ್ಚರಿಕೆ ನೀಡಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ನಗರ ಯೋಜನಾ ಪ್ರಾಧಿಕಾರ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಲಪ್ಪ, ಹಿರಿಯ ಮುತ್ಸದ್ಧಿ ಹಾಗೂ ಮಾಜಿ ಸಚಿವ ಕಾಗೋಡು…

Read Full News

ಶಿಕ್ಷಣವು ಮನುಷ್ಯನನ್ನು ಶ್ರೇಷ್ಠ ನಾಗರೀಕನನ್ನಾಗಿ ಮಾಡುತ್ತದೆ – ಡಾ.ಎಸ್ ರಾಧಾಕೃಷ್ಣನ್|humcha

ಹುಂಚ : ಇಲ್ಲಿನ ಶ್ರೀ ರಂಗರಾವ್ ಸ್ಮಾರಕ ಸಭಾಭವನ , ಶ್ರೀ ಪದ್ಮಾoಬಾ ಪ್ರೌಢಶಾಲೆಯಲ್ಲಿ ದ್ವಿತೀಯ ವರ್ಷದ ನವೋದಯ ಮತ್ತು ಮುರಾರ್ಜಿ ಶಾಲೆಗಳ ಪ್ರವೇಶಕ್ಕೆ ಉಚಿತ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವನ್ನು ಭಾನುವಾರ ಹುಂಚಾ ಅತಿಶಯ ಕ್ಷೇತ್ರದ ಪರಮ ಪೂಜ್ಯ ಗುರುಗಳಾದ –  ಶ್ರೀ ಡಾ: ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಹಮ್ಮಿಕೊಳ್ಳಲಾಗಿತ್ತು.  ಶಿಬಿರದಲ್ಲಿ ಹುಂಚಾ ಗ್ರಾಮ ವ್ಯಾಪ್ತಿಯ ಮತ್ತು ಸುತ್ತಮುತ್ತಲಿನ 13 ಶಾಲೆಗಳಿಂದ 5ನೇ ತರಗತಿಯಲ್ಲಿ ಓದುತ್ತಿರುವ, ನವೋದಯ ಮತ್ತು ಮುರಾರ್ಜಿ ಪ್ರವೇಶ ಪರೀಕ್ಷೆ…

Read Full News

ರಿಪ್ಪನ್‌ಪೇಟೆಯಲ್ಲಿ ನಡೆದ ಅದ್ದೂರಿ ಆಳ್ವಾಸ್ ನುಡಿಸಿರಿ ಹಬ್ಬ – ಕಲಾರಸಿಕರನ್ನು ಮನೋರಂಜಿಸಿದ ಅಳ್ವಾಸ್ ವಿದ್ಯಾರ್ಥಿಗಳು|Alvas

ರಿಪ್ಪನ್‌ಪೇಟೆ;-ಆಳ್ವಾಸ್ ನುಡಿಸಿರಿ ವಿರಾಸತ್ ಮತ್ತು ಕಲಾಕೌಸ್ತುಭ ಕನ್ನಡ ಸಂಘ ಇವರ ಸಹಯೋಗದಲ್ಲಿ ರಿಪ್ಪನ್‌ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜ್ ಕ್ರೀಡಾಂಗಣದಲ್ಲಿ ಅಯೋಜಿಸಲಾದ `ಆಳ್ವಾಸ್ ಸಾಂಸ್ಕೃತಿಕ ವೈಭವ’’ಮಲೆನಾಡಿನ ಕಲಾರಸಿಕರನ್ನು ಮನೋರಂಜಿಸಿತು. ಈ ಕಾರ್ಯಕ್ರಮಕ್ಕೆ ಶಾಸಕ ಹರತಾಳು ಹಾಲಪ್ಪ ಚಾಲನೆ ನೀಡಿ ಮಾತನಾಡಿ ನಶಿಸುತ್ತಿರುವ ಭಾರತೀಯ ಜಾನಪದ ಸಂಸ್ಕೃತಿಯನ್ನು  ಉಳಿಸಿ ಪ್ರೋತ್ಸಾಹಿಸುವ ಮೂಲಕ ಇಂದಿನ ಯುವಪೀಳಿಗೆಯಲ್ಲಿ ಜಾನಪದದ ಜಾಗೃತಿಯನ್ನು ಮೂಡಿಸುವ ಮಹಾರ್ತ್ಕಾಯದಲ್ಲಿ ಅಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಡಾ.ಎಂ ಮೋಹನ್ ಆಳ್ವರ ಕಾರ್ಯ ಪ್ರಶಂಸನೀಯವಾಗಿದೆ ಎಂದರು. ಭಾರತೀಯ ಕಲೆ ಸಾಹಿತ್ಯ ಭರತನಾಟ್ಯ…

Read Full News

ಶರಾವತಿ ಸಮಸ್ಯೆ ಬಗೆಹರಿಸಲು ಶ್ರಮಿಸದೆ ಪಾದಯಾತ್ರೆ ಹೊರಟಿರುವುದು ಬೇಸರದ ಸಂಗತಿ – ಬಸವರಾಜ್ ಬೊಮ್ಮಾಯಿ|CM

60 ವರ್ಷದ ಶರಾವತಿ ಮುಳುಡೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ನಾನು ಸಿದ್ದನಿದ್ದೇನೆ. ಆದರೆ ನನಗೆ ಬೇಸರವಾಗುತ್ತಿರುವುದೇನು ಎಂದರೆ ಒಂದೇ ವಿಷಯವನ್ನು ಎಷ್ಟು ವರ್ಷದವರೆಗೆ ಲಾಭ ಪಡೆಯುತ್ತೀರಿ ಎಂದು ಕಾಂಗ್ರೆಸ್ ಪಕ್ಷದ ಹೆಸರು ಉಲ್ಲೇಖಿಸದೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪರೋಕ್ಷ ಟಾಂಗ್ ನೀಡಿದರು. ಅವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟನೆ ಮಾಡಿ ಕಚೇರಿಯ ಪಕ್ಕದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ ಮನವಿ ಸ್ವೀಕರಿಸಿ ಮಾತನಾಡಿ ನನಗೆ ತಿಳಿದಂತೆ 24 ಸಾವಿರ ಎಕರೆ ಭೂಮಿಯಲ್ಲಿ ಈ…

Read Full News

ರಿಪ್ಪನ್‌ಪೇಟೆ : ಕಲಾ ಕೌಸ್ತುಭ ಕನ್ನಡ ಸಂಘದ ವತಿಯಿಂದ ಸಾವಿರಾರು ಹೆರಿಗೆ ಮಾಡಿಸಿರುವ ಸೂಲಗಿತ್ತಿ ಜಯಮ್ಮ ರವರಿಗೆ ಸನ್ಮಾನ|Ripponpet

ರಿಪ್ಪನ್‌ಪೇಟೆ : ಇಲ್ಲಿನ ಕಲಾ ಕೌಸ್ತುಭ ಕನ್ನಡ ಸಂಘ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಾವಿರಾರು ಹೆರಿಗೆ ಮಾಡಿಸುವ ಮೂಲಕ ಮಲೆನಾಡಿನಲ್ಲಿ ಮನೆಮಾತಾಗಿರುವ ಸೂಲಗಿತ್ತಿ ಜಯಮ್ಮ ರವರಿಗೆಸನ್ಮಾನಿಸಿ ಗೌರವಿಸಲಾಯಿತು. ಶನಿವಾರ ಸಂಜೆ ಪಟ್ಟಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಹಲವಾರು ವರ್ಷಗಳಿಂದ ಸೂಲಗಿತ್ತಿ ಸೇವೆ ಮಾಡಿಕೊಂಡು ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸುತಿದ್ದ ಜಯಮ್ಮ ರವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಜಯಲಕ್ಷ್ಮಿ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದ ಹೊಸನಗರ ರಸ್ತೆಯ ಶ್ರೀರಾಮನಗರದ ನಿವಾಸಿ….

Read Full News