ಶಾಂತವೇರಿ ಗೋಪಾಲಗೌಡರವರ ಜನ್ಮ ಶತಮಾನೋತ್ಸವ ಕಾರ್ಯಕ್ರಮವನ್ನು ಸರ್ಕಾರದಿಂದ ಮಾರ್ಚ್ ತಿಂಗಳಲ್ಲಿ ನಡೆಸಲಿದ್ದು ಆ ಹಿನ್ನಲೆಯಲ್ಲಿ ಗೋಪಾಲಗೌಡ ಅಧ್ಯಯನ ವೇದಿಕೆ ವತಿಯಿಂದ ಪೂರ್ವಭಾವಿ ಸಭೆ ನಡೆಸಲಾಯಿತು.
ಪ್ರಪ್ರಥಮವಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ದಲ್ಲಿ ದಿವಂಗತ ಶಾಂತವೇರಿ ಗೋಪಾಲಗೌಡರ ಶತಮಾನೋತ್ಸವ ಕಾರ್ಯಕ್ರಮ ನಡೆಸುವ ಬಗ್ಗೆ ನಗರ ಭಾಗದ ಎಲ್ಲಾ ಪಕ್ಷದ ಸಮಾನ ಮನಸ್ಕ ಮುಖಂಡರ ಜೊತೆ ಚರ್ಚಿಸಲಾಯಿತು.
ಜನವರಿ 30 ರಂದು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಗೋಪಾಲಗೌಡ ಅಭಿಮಾನಿಗಳು ಹಾಗೂ ಸಮಾನ ಮನಸ್ಕರ ಸಭೆ ಕರೆಯಲು ತೀರ್ಮಾನಿಸಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಶಾಂತವೇರಿ ಗೋಪಾಲಗೌಡ ಅಧ್ಯಯನ ಸಮಿತಿಯ ಅಧ್ಯಕ್ಷರಾದ ಕಲ್ಲೂರು ಮೇಘರಾಜ್ ವಹಿಸಿದ್ದರು.
ಈ ಸಂಧರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಅರ್ ಎ ಚಾಬುಸಾಬ್, ನಗರ ಗ್ರಾಮ ಪಂಚಾಯತಿ ಅಧ್ಯಕ್ಷ ಕರುಣಾಕರ ಶೆಟ್ಟಿ,ಮಾಜಿ ಅಧ್ಯಕ್ಷ ಬೇಳೂರು ದೇವೆಂದ್ರಪ್ಪ, ಮುಖಂಡರಾದ ಎಸ್ ವಿ ರಾಜಮ್ಮ ,ರವೀಂದ್ರ ,ಅಂಬರೀಶ್ ,ಮಾಸ್ತಿಕಟ್ಟೆ ಗೋಪಾಲ್ , ಚಂದ್ತಶೇಖರ್ ಶೆಟ್ಟಿ ,ಕಲ್ಲೂರು ಈರಣ್ಣ ಹಾಗೂ ಇನ್ನಿತರರಿದ್ದರು.
ಇದೇ ಸಭೆಯಲ್ಲಿ ದಿವಂಗತ ಶಾಂತವೇರಿ ಗೋಪಾಲ್ ಗೌಡ ಶತಮಾನೋತ್ಸವ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷ ; ಕಲ್ಲೂರು ಮೇಘರಾಜ್
ಅಧ್ಯಕ್ಷರು : ಬೇಳೂರು ದೇವೇಂದ್ರಪ್ಪ
ಕಾರ್ಯಾಧ್ಯಕ್ಷ : ಆರ್ ಎ ಚಾಬುಸಾಬ್
ಉಪಾಧ್ಯಕ್ಷರು : ಕರುಣಾಕರ ಶೆಟ್ಟಿ, ರವೀಂದ್ರ ಮತ್ತು ಎಸ್ ವಿ ರಾಜಮ್ಮ
ಪ್ರಧಾನ ಕಾರ್ಯದರ್ಶಿ : ಮಾಸ್ತಿಕಟ್ಟೆ ಎಸ್ ಕೆ ಗೋಪಾಲ್
ಕಾರ್ಯದರ್ಶಿ : ಕುಮಾರ್
ಖಜಾಂಚಿ : ಸಾದ್ಗಲ್ ಅಂಬರೀಶ್
ಹಾಗೂ ಸದಸ್ಯರನ್ನು ನೇಮಿಸಲಾಯಿತು.