ರಿಪ್ಪನ್‌ಪೇಟೆ : ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳೇ ನಿರ್ದೇಶಿಸಿ,ನಟಿಸಿದ ಆರುಣ್ಯ ಕಿರುಚಿತ್ರದ ಟ್ರೈಲರ್ ಮತ್ತು ಸ್ಪೀಕಿಂಗ್ ಏಂಜಲ್ಸ್ ಯೂಟ್ಯೂಬ್ ಚಾನೆಲ್ ನ್ನು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಹಿರಿಯ ವಿಶೇಷ ಪ್ರತಿನಿಧಿ ರಶ್ಮಿ ಬೇಲೂರು ಅನಾವರಣಗೊಳಿಸಿದರು.
ನಂತರ ಕಿರುಚಿತ್ರದ ಟ್ರೈಲರ್ ವೀಕ್ಷಿಸಿ ಮಾತನಾಡಿದ ಅವರು ವಿದ್ಯಾರ್ಥಿನಿಯರು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಬಾಳಿ ಬದುಕಿ ತೋರಿಸಬೇಕು,ವಿದ್ಯಾರ್ಥಿನಿಯರು ತಮ್ಮ ಜೀವನದ ಗುರಿಯನ್ನು ಮೊದಲೇ ನಿರ್ಧರಿಸಿಕೊಂಡು ಮನೆಯವರ ಬಳಿ ಹಂಚಿಕೊಳ್ಳುವ ಮೂಲಕ ನೀವಂದುಕೊಂಡಂತೆ ಬದುಕಿ ತೋರಿಸಬೇಕು.ಈ ಕಿರುಚಿತ್ರ ತಂಡದ ಎಲ್ಲಾ ಸದಸ್ಯರು ತಮ್ಮ ಶಕ್ತಿ ಮೀರಿ ಪ್ರತಿಭೆಗಳನ್ನು ಹೊರ ಹಾಕಿದ್ದಾರೆ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತಾಗಲಿ ಎಂದರು.
ನಂತರ ಕಾಲೇಜಿನ ಉಪನ್ಯಾಸಕರು ಮತ್ತು ಆರುಣ್ಯ ಕಿರುಚಿತ್ರದ ಕಥೆ ಮತ್ತು ಚಿತ್ರಕಥೆ ರಚಿಸಿದಂತಹ ನರೇಂದ್ರ ಕುಳಗಟ್ಟೆ ಎಂ ಆರ್ ಮಾತನಾಡಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಾವಂತರು ಅವರಿಗೆ ಉತ್ತಮ ರೀತಿಯಲ್ಲಿ ತರಬೇತಿ ನೀಡಿದ್ದಲ್ಲಿ ಎಂತಹ ಪ್ರದರ್ಶನ ನೀಡುತ್ತಾರೆ ಎಂಬುವುದಕ್ಕೆ ನಮ್ಮ ಆರುಣ್ಯ ಕಿರುಚಿತ್ರ ಸಾಕ್ಷಿಯಾಗಿದೆ.ವಿದ್ಯಾರ್ಥಿಗಳು ತುಂಬಾ ಕಷ್ಟಪಟ್ಟು, ಶ್ರಮ ಪಟ್ಟು ಈ ಕಿರುಚಿತ್ರ ರಚಿಸಿದ್ದಾರೆ.ಹಾಗೇಯೆ ಕಾಲೇಜಿನ ವಿದ್ಯಾರ್ಥಿಗಳೇ ಪ್ರಾರಂಭಿಸಿರುವ ನೂತನ ಯೂಟ್ಯೂಬ್ ಚಾನೆಲ್ ನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂಧರ್ಭದಲ್ಲಿ ದ ಹಿಂದೂ ಪತ್ರಿಕೆಯ ಹಿರಿಯ ವಿಶೇಷ ಪ್ರತಿನಿಧಿ ತನು ಕುಲಕರ್ಣಿ ,ಉಪನ್ಯಾಸಕರಾದ ಶ್ರೀಪತಿ ಹಳಗುಂದ ಸೇರಿದಂತೆ ಇನ್ನಿತರರಿದ್ದರು.
ಆರುಣ್ಯ ಕಿರುಚಿತ್ರ:
ರಿಪ್ಪನ್‌ಪೇಟೆ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳೇ ನಿರ್ದೇಶಿಸಿ ,ನಟಿಸಿದಂತಹ ಆರುಣ್ಯ ಕಿರುಚಿತ್ರದ ಟ್ರೈಲರ್ ತುಂಬಾ ಅಧ್ಬುತವಾಗಿ ಮೂಡಿಬಂದಿದೆ.
ಈ ಕಿರುಚಿತ್ರದ ಮುಖ್ಯಪಾತ್ರದಲ್ಲಿ ಕಾಲೇಜಿನ ವಿದ್ಯಾರ್ಥಿನಿ ಸ್ಪಂದನಾ ಪಿ ಟಿ ನಟಿಸಿದ್ದಾರೆ. ದೀಕ್ಷಾ ,ಚಿದಾನಂದ ,ತೇಜಶ್ರಿ ಯು,ಮೇಘಾ ,ತೇಜಸ್ವಿನಿ ತಮ್ಮ ಪ್ರತಿಭೆಯ ಮೂಲಕ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಈ ಕಿರುಚಿತ್ರವನ್ನು ಪ್ರದೀಪ್ ಆಚಾರ್ ನಿರ್ಮಿಸಿದ್ದು ,ಕಥೆ – ಚಿತ್ರಕಥೆ- ಪರಿಕಲ್ಪನೆ ಉಪನ್ಯಾಸಕ ನರೇಂದ್ರ ಕುಳಗಟ್ಟೆ ರಚಿಸಿದ್ದಾರೆ. ನಿರ್ದೇಶನವನ್ನು ವಿದ್ಯಾ ಆರ್ ಆಚಾರ್ಯ ,ತೇಜಶ್ರಿ ಯು ,ಸ್ಪಂದನಾ ಪಿ ಟಿ ನಿಭಾಯಿಸಿದ್ದಾರೆ.
ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳೇ ರಚಿಸಿರುವ ಸ್ಪೀಕಿಂಗ್ ಏಂಜೆಲ್ಸ್ ಯೂಟ್ಯೂಬ್ ಚಾನೆಲ್ ನ್ಮು subscribe ಆಗಲು ಈ ಕೆಳಗಿನ ಲಿಂಕ್ ಒತ್ತಿ.